ಕುಣಿಗಲ್ ತಾಲ್ಲೂಕಿನ ಯಡೆಯೂರು ತಾಲ್ಲೂಕು ಕೇಂದ್ರದಿಂದ 18 ಕಿ.ಮೀ.ದೂರದಲ್ಲಿದ್ದು ನಾಗಿಣಿ ಮತ್ತು ಕದಂಬ ನದಿಗಳ ಮಧ್ಯದ ಪ್ರದೇಶವಾಗಿದೆ. ಶ್ರೀ ತೋಂಟದಸಿದ್ದಲಿಂಗೇಶ್ವರರು 15ನೇ ಶತಮಾನದಲ್ಲಿ ನಾಡಿನಾದ್ಯಂತ ಸಂಚರಿಸಿ ವೀರಶೈವ ಧರ್ಮದಬೆಳವಣಿಗೆಗೆ ಕಾರಣಕರ್ತರಾಗಿ ಕೊನೆಯಲ್ಲಿ ಯಡೆಯೂರಿಗೆ ಬಂದು ನೆಲೆನಿಂತು ಜೀವಂತಸಮಾದಿಯಾದ ಕಾರಣಕ್ಕೆ ಈ ಕ್ಷೇತ್ರ ನಾಡಿನಾದ್ಯಂತ ಹೆಸರಾಗಿದೆ.ಇಂದಿನ ಚಾಮರಾಜನಗರ ಜಿಲ್ಲೆಯ ಹರದನಹಳ್ಳಿ 106 ವರ್ಷಗಳ ಹಿಂದೆದೊಡ್ಡದಾದ ಕಾಡಾಗಿತ್ತು. ತದನಂತರ ಅಲ್ಲಿ ಒಡಮೂಡಿದ ಲಿಂಗದ ಪ್ರಭಾವದಿಂದಾಗಿಹರದನಹಳ್ಳಿಯು ಸುಕ್ಷೇತ್ರವಾಗಿ ಪರಿವರ್ತನೆಗೊಂಡಿತು. ಆ ಲಿಂಗವೇ ಹರದನಹಳ್ಳಿಯಅಳಲೇಶ್ವರ ಲಿಂಗ. ಹೀಗೆ ಹರದನಹಳ್ಳಿಯಲ್ಲಿ ಶ್ರೀ ಅಳಲೇಶ್ವರ ಲಿಂಗದ ಮಹಿಮೆ ಎಲ್ಲೆಡೆಪಸರಿಸಿ ದಿವ್ಯಲಿಂಗೇಶ್ವರ ಎಂಬ ನಾಮ ಪಡೆದು ಅಲ್ಲಿ ಮಠ ಸ್ಥಾಪನೆಯಾಯಿತು. ಆ ಮಠದ15ನೇ ಪೀಠಾಧ್ಯಕ್ಷರಾದ ಶ್ರೀ ಚನ್ನಬಸವ ದೇಶಿಕರ ಆಶೀರ್ವಾದ ಬಲದಿಂದ ಹುಟ್ಟಿದಮಗುವೇ ಸಿದ್ದಲಿಂಗರು.ಬಾಲ್ಯದಿಂದಲೂ ಅತಿ ಚುರುಕುತನದ ಹುಡುಗನಾಗಿದ್ದ ಸಿದ್ದಲಿಂಗರು ಒಮ್ಮೆಗುರುಗಳ ಲಿಂಗ ಪೂಜೆ ಸಮಯದಲ್ಲಿ ನೀರಿನಿಂದಲೇ ದೀಪ ಬೆಳಗಿಸಿ ತಮ್ಮ ಪವಾಡವನ್ನುಗುರುಗಳಿಗೆ ತೋರಿದವರು. ಆ ನಂತರ ಗುರುಗಳು ಕಾರಣಿಕ ಪುರುಷನಹುದೋ ನೀನುನಿನ್ನಿಂದ ನಾನು ಸೇವೆ ಪಡೆಯುವುದು ಉಚಿತವಲ್ಲ. ನೀನು ಇಡೀ ಜಗತ್ತನ್ನೇ ಉದ್ದಾರಮಾಡಬೇಕಾದವನು, ಚರಮೂರ್ತಿಗಳ ಜೊತೆ ಸೇರಿ ದೇಶ ಪರ್ಯಟನೆ ಮಾಡು ಎಂದುಅಪ್ಪಣೆ ಕೊಟ್ಟು ಊರಿನ ಭಕ್ತರ ಸಮ್ಮುಖದಲ್ಲಿ ಹರದನಹಳ್ಳಿಯ ಮಠದ ಅಧಿಕಾರವನ್ನು ಶ್ರೀಸಿದ್ದಲಿಂಗೇಶ್ವರರಿಗೆ ವಹಿಸಿ ತಾವು ಸಿದ್ದಗಂಗೆ ಬೆಟ್ಟಕ್ಕೆ ನಡೆದರು.ಹೀಗೆ ಹರದನಹಳ್ಳಿ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀಸಿದ್ದಲಿಂಗೇಶ್ವರರು ಗುರುಗಳ ಆಗ್ನೆಯನ್ನು ಪಾಲಿಸಲು ಚರಮೂರ್ತಿಗಳ ಸಮೂಹದೊಂದಿಗೆದೇಶಪರ್ಯಟನೆ ಹೊರಟು ಸೌರಾಷ್ಟ್ರಾ, ನೀಲಕಂಠ ಪರ್ವತ, ಕೊಲ್ಲಿಪಾಕಿ, ಕೇದಾರ, ದ್ರಾಕ್ಷಾರಾಮ, ಗೋಕರ್ಣ, ಶಿವಗಂಗೆ, ಅರುಣಾಚಲ ಈ ರೀತಿಯಾಗಿ ದೇಶವನ್ನೆಲ್ಲಾ ಸುತ್ತುತ್ತಾಗೋದಾವರಿ ತೀರದಲ್ಲಿ ಕೆಲ ದಿನ ಅನುಷ್ಠಾನಗೊಂಡರು. ನಂತರ ಮುಂದುವರೆದು ಕಗ್ಗೆರೆಗೆಬಂದು ನೆಲೆ ನಿಂತರು.ಶ್ರೀಗಳು ಕೆಗ್ಗೆರೆಯ ದಕ್ಷಿಣ ಭಾಗದಲ್ಲಿ ಹರಿಯುತ್ತಿದ್ದ ನಾಗಿಣಿ ನದಿಯ ತೀರದಲ್ಲಿಲಿಂಗಾಪೂಜಾನುಷ್ಠಾನರಾದರು. ಆಗ ಅಲ್ಲಿಗೆ ಬಂದ ನಂಬಿಯೆಣ್ಣಶೆಟ್ಟಿ ಎಂಬ ಭಕ್ತನುಶ್ರೀಗಳನ್ನು ಕಂಡು ಪುಳಕಿತನಾಗಿ ತಮ್ಮ ಮನೆಗೆ ತಾವುಗಳು ಆಗಮಿಸಬೇಕೆಂದುಬೇಡಿಕೊಂಡಾಗ ಶ್ರೀಗಳು ಅಲ್ಲಿಯೇ ಕೆಲಕಾಲ ನೆಲೆನಿಂತರು. ಹೀಗೆ ಒಂದು ದಿನ ಶ್ರೀಗಳುಊರ ಹೊರಗೆ ಸಂಚಾರ ಮಾಡುತ್ತಾ ವಿಶಾಲವಾದ ಉದ್ಯಾನವನ ಪ್ರದೇಶಕ್ಕೆ ಆಗಮಿಸಿಅಲ್ಲಿನ ಮಾವಿನ ಮರದ ನೆರಳಿನಲ್ಲಿ ಕುಳಿತರು. ಭಕ್ತ ಸಮುದಾಯ ಕೂಡ ಸುತ್ತಲೂನೆರೆದಿತು. ಆಗ ಗುರುಗಳು ಕೆಲ ಸಮಯದಲ್ಲಿಯೇ ಬೇಡರು ಕಗ್ಗೆರೆ ಮೇಲೆ ದಾಳಿಮಾಡುವರು, ಗೌಡರು ಭಕ್ತರ ಸಹಿತ ಹೋಗಿ ಇದು ನಿಮ್ಮ ಸತ್ವ ಪರೀಕ್ಷೆಯ ಕಾಲ ಎಂದುಹೇಳುತ್ತಾರೆ. ಅದರಂತೆಯೇ ಬೇಡರು ಕಗ್ಗೆರೆಯ ಮೇಲೆ ದಾಳಿ ಮಾಡಿ ಊರನ್ನೆಲ್ಲಾದೋಚಿದರು. ಆಗ ಆ ಊರಿನ ಎಲ್ಲಾ ಜನರು ಬೇರೆ ಊರಿನಲ್ಲಿ ವಾಸ್ತವ್ಯ ಮಾಡಿದರು.ಆದರೆ ಸಿದ್ದಲಿಂಗೇಶ್ವರರಿಗೆ ಉಭಯ ಸಂಕಟವಾಯಿತು. ಜನರು ಬೇರೆ ಕಡೆಗೆ ಹೋಗಿದ್ದಾರೆಆದರೆ ಪರಮ ಭಕ್ತ ನಿಂಬೆಯೆಣ್ಣಶೆಟ್ಟಿ ತಮ್ಮ ಮನೆಗೆ ಅರ್ಪಿತಕ್ಕೆ ಬರಬೇಕೆಂದು ಅತ್ಯಂತವಿನಮ್ರವಾಗಿ ವಿನಂತಿಸಿಕೊಂಡಿದ್ದಾನೆ. ಅವನ ಆಸೆಯನ್ನು ಪೂರೈಸದೇ ಇಲ್ಲಿಂದಕದಲುವಂತಿಲ್ಲ ಎಂದು ಅಲ್ಲೇ ಲಿಂಗ ಮುದ್ರೆಯಲ್ಲಿ ಕುಳಿತರು.ಶ್ರೀಗಳು ಲಿಂಗಮುದ್ರೆಯಲ್ಲಿಯೇ ಸುಮಾರು ಕಾಲ ಇದ್ದಾಗ ಅವರ ಸುತ್ತಲೂಹುತ್ತ ಬೆಳೆಯಿತು. ಆ ಹುತ್ತದ ಹಿಂದಗಡೆ ಮೊಲ ಮರಿಗಳನ್ನು ಹಾಕಿತು. ಹುತ್ತದಬಾಯಿಯಲ್ಲಿ ಹಾವುಗಳು ಹೆಡೆ ಎತ್ತಿ ಆಡಿಕೊಂಡಿದ್ದವು. ಆದರೆ ನಿಂಬೆಯೆಣ್ಣಶೆಟ್ಟಿಗೆ ಇದುಯಾವುದು ತಿಳಿಯದೇ ಹೋಯಿತು. ಊರು ದರೋಡೆಯಾದ ನಂತರ ಬೇರೆಡೆಗೆ ನೆಲೆಸಿದ್ದಗ್ರಾಮಸ್ಥರು ತಿರುಗಿ ಕಗ್ಗೆರೆಗೆ ಬಂದು ವಾಸ ಮಾಡುತ್ತಿದ್ದರಾದರೂ ಗುರುಗಳ ವಿಷಯವನ್ನೇಮರೆತು ಬಿಟ್ಟಿದ್ದರು. ಒಮ್ಮೇ ಗೌಡರ ಹಸುಗಳಲ್ಲಿ ಒಂದು ಹಸು ಅನೇಕ ದಿನಗಳ ಕಾಲ ಹಾಲುಕರೆಯದೇ ಇದ್ದಾಗ ಗೌಡರು ಅದರ ಮರ್ಮವನ್ನು ಅರಿಯಲು ತಾವೇ ಮುಂದಾದಾಗಗುರುಗಳು ತಪಸ್ಸಿನಲ್ಲಿ ಕುಳಿತಿದ್ದು ಅವರ ಸುತ್ತಲು ಹುತ್ತ ಬೆಳೆದಿದ್ದು ಆ ಹಸುವು ಆ ಹುತ್ತಕ್ಕೆಹಾಲು ಎರಿಯುತ್ತಿರುವುದು ಕಂಡುಬರುತ್ತದೆ. ಗೌಡರು ಹಾಗೂ ನಿಂಬೆಯೆಣ್ಣಶೆಟ್ಟಿಯವರುಅಲ್ಲಿಗೆ ದಾವಿಸಿ ನೋಡಲಾಗಿ ಆ ದೃಶ್ಯವನ್ನು ಕಂಡು ಆಶ್ಚರ್ಯ ಹಾಗೂ ಭಯಬರಿತರಾಗಿ 62ಶ್ರೀಗಳಲ್ಲಿ ಬೇಡಿಕೊಳ್ಳುತ್ತಾರೆ ಹಾಗೂ ಅವರನ್ನು ಪಂಚಾಮೃತದಿಂದ ಅಭಿಷೇಕ ಮಾಡಿಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯಲ್ಲಿ ಊರಿಗೆ ಕೊಂಡೊಯ್ದರು. ಶ್ರೀಗಳು ಭಕ್ತನಕೋರಿಕೆಯನ್ನು ಮನ್ನಿಸಿ ಪ್ರಸಾದವನ್ನು ಸ್ವೀಕರಿಸಿ ಮರಳಿ ಅದೇ ತೋಟದಲ್ಲಿ ಬಹುಕಾಲಕಳೆದರು. ಆ ತೋಟದಿಂದ ಪ್ರಸಿದ್ದಿಗೆ ಬಂದಿದ್ದರಾಗಿ ಶ್ರೀಗಳು ತೋಂಟದ ಸಿದ್ದಲಿಂಗೇಶ್ವರಎಂಬ ಹೆಸರಿನಿಂದ ಪ್ರಖ್ಯಾತರಾದರು.ಹೀಗೆ ಶ್ರೀಗಳು ಲೋಕಸಂಚಾರ ಮಾಡುತ್ತಾ ಅಲ್ಲಲ್ಲಿ ನೆಲೆನಿಂತುಜನರನ್ನುದ್ದರಿಸುತ್ತಾ ಕೊನೆಗೇ ಭಕ್ತರ ಕೋರಿಕೆಯಂತೆ ಯಡೆಯೂರಿಗೆ ಆಗಮಿಸಿದರು. ಸತತಕಾರ್ಯಚಟುವಟಿಕೆಗಳಿಂದಾಗಿ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಾ ಬಂದು ಅವರು ಈಗ ನಾಗಿಣಿನದಿ ತೀರದ ಕಲ್ಲು ಮಂಟಪದ ಒಂದರಲ್ಲಿ ನೆಲೆನಿಂತರು. ಭಕ್ತರು ಅವರಿಗೆಕಲ್ಲುಮಂಟಪವನ್ನು ಕಟ್ಟಿಸಿಕೊಟ್ಟಿದ್ದು ತಮ್ಮ ಕೊನೆ ದಿನಗಳಲ್ಲಿ ಪರಮ ಶಿಷ್ಯ ಬೋಳಬಸವರನ್ನು ಮುಂದಿಟ್ಟುಕೊಂಡು ಎಲ್ಲ ವಿರಕ್ತ ವೃಂದಕ್ಕೂ ಷಟ್ಸ್ಥಳ ಮಾರ್ಗವನ್ನುವಿವರವಾಗಿ ಬೋಧಿಸಿದರು. ಬೋಳಬಸವೇಶ್ವರರಿಗೆ ಮುಂದಿನ ಶೂನ್ಯ ಸಿಂಹಾಸನದಪಟ್ಟಾಧ್ಯಕ್ಷರನ್ನಾಗಿ ಮಾಡಿ ತಾವು ನಿರ್ವಿಕಲ್ಪ ಸಮಾದಿಯನ್ನು ಹೊಂದಿದರು.ಶ್ರೀಗಳು ನಾಡಿನಾದ್ಯಂತ ಧರ್ಮಜಾಗೃತಿಯ ರೂವಾರಿಗಳಾಗಿ, ಭಕ್ತರಲ್ಲಿನಧಾರ್ಮಿಕ ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸಿ ವೀರಶೈವ ಧರ್ಮದ ಮಹೋನ್ನತಿಗೆಕಾರಣರಾದರು. ಹಾಗೂ 12ನೇ ಶತಮಾನದ ನಂತರ ಗುಪ್ತಗಾಮಿನಿಯಾಗಿದ್ದ ವಚನಸಾಹಿತ್ಯದ ಮುಂದುವರಿಕೆಗೆ ಕಾರಣರಾಗಿ ತಾವು ಕೂಡ ವಚನಗಳನ್ನು ಬರೆದುದ್ದಲ್ಲದೇ ಶಿಷ್ಯಪ್ರಶಿಷ್ಯರಿಗೆ ವಚನ ಸಾಹಿತ್ಯವನ್ನು ರಚಿಸಲು ಪ್ರೇರಣೆಯನ್ನು ನೀಡಿದರು. ತೋಂಟದಸಿದ್ದಲಿಂಗೇಶ್ವರರ ಕಾಲವನ್ನು ವಚನ ಸಾಹಿತ್ಯದ ದ್ವಿತೀಯ ಘಟ್ಟವೆಂದು ಭಾವಿಸಲಾಗಿದೆ.ಶ್ರೀಗಳು “ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ” ಎಂಬ ಅಂಕಿತದಲ್ಲಿ 701ವಚನಗಳನ್ನು ಬರೆದಿದ್ದು ಇವು 701 ವಿರಕ್ತರನ್ನು ಸಂಕೇತಿಸುತ್ತವೆ.ಸಿದ್ದಲಿಂಗೇಶ್ವರರು ಹರದನಹಳ್ಳಿಯಲ್ಲಿ ಉದಯವಾಗಿ ಯಡಿಯೂರಿನಲ್ಲಿಬಯಲಾಗಿದ್ದು ಸುಮಾರು ಕ್ರಿ.ಶ. 1514ರಿಂದ 1580ರವರೆಗೆ ಎಂದು ಸಂಶೋದಕರುಅಭಿಪ್ರಾಯಿಸುತ್ತಾರೆ. ಏನೇ ಇರಲಿ ಅವರು ತಮ್ಮ ನಂತರದಲ್ಲಿ ತಮ್ಮಂತಹ ಶಿಷ್ಯರಕೂಟವನ್ನೇ ನಿರ್ಮಿಸಿದರು. ಷಟ್ಸ್ಥಳ ಜ್ಞಾನಸಾರಾಮೃತವನ್ನೇ ಸಮಾಜಕ್ಕೆ ನೀಡಿದರು.16ನೇ ಶತಮಾನದಲ್ಲಿ ಅವನತಿಯತ್ತ ಹೊರಟಿದ್ದ ವೀರಶೈವ ಧರ್ಮದ ಅಂತರಂಗಬಹಿರಂಗಗಳನ್ನು ಬಲಗೊಳಿಸಿದ ಸಮಾಜವನ್ನು ಏಕತೆಯಲ್ಲಿ ಕಟ್ಟಿ ನಿಲ್ಲಿಸಿದಮಹಾಪುರುಷರು.
Swamiji
Swamiji Name :
ಶ್ರೀ ತೋಂಟದ ಸಿದ್ದಲಿಂಗೇಶ್ವರ ಮಹಾಶಿವಯೋಗಿಗಳು
Photo :
Programs
-
Institutions
-
Photos
Full Address Kannada
ಸುಕ್ಷೇತ್ರ ಶ್ರೀ ಸಿದ್ದಲಿಂಗಸ್ವಾಮಿ ದೇವಾಲಯ ಶ್ರೀ ಕ್ಷೇತ್ರ ಯಡೆಯೂರು - 572 126 ಕುಣಿಗಲ್ ತಾ||, ತುಮಕೂರು ಜಿಲ್ಲೆ