ಕುಣಿಗಲ್ ತಾಲ್ಲೂಕಿನ ಯಡೆಯೂರು ತಾಲ್ಲೂಕು ಕೇಂದ್ರದಿಂದ 18 ಕಿ.ಮೀ.ದೂರದಲ್ಲಿದ್ದು ನಾಗಿಣಿ ಮತ್ತು ಕದಂಬ ನದಿಗಳ ಮಧ್ಯದ ಪ್ರದೇಶವಾಗಿದೆ. ಶ್ರೀ ತೋಂಟದಸಿದ್ದಲಿಂಗೇಶ್ವರರು 15ನೇ ಶತಮಾನದಲ್ಲಿ ನಾಡಿನಾದ್ಯಂತ ಸಂಚರಿಸಿ ವೀರಶೈವ ಧರ್ಮದಬೆಳವಣಿಗೆಗೆ ಕಾರಣಕರ್ತರಾಗಿ ಕೊನೆಯಲ್ಲಿ ಯಡೆಯೂರಿಗೆ ಬಂದು ನೆಲೆನಿಂತು ಜೀವಂತಸಮಾದಿಯಾದ ಕಾರಣಕ್ಕೆ ಈ ಕ್ಷೇತ್ರ ನಾಡಿನಾದ್ಯಂತ ಹೆಸರಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿಶ್ರೀ ಸಿದ್ದಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿ ಅಸ್ತಿತ್ವದಲ್ಲಿರುವ ಮಠವೇ ಶ್ರೀಮದ್ ರಂಭಾಪುರಿವೀರಸಿಂಹಾಸನಾ ಖಾಸಾ ಶಾಖಾ ಬಾಳೆಹೊನ್ನೂರು ಮಠ.ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ಕಾಲಕ್ಕಿಂತಲೂ ಪುರಾತನ ಇತಿಹಾಸಹೊಂದಿರುವ ಶ್ರೀ ಮಠವು ಶ್ರೀ ರಂಭಾಪುರಿ ಪೀಠದ ಖಾಸಾ ಶಾಖಾ ಮಠವಾಗಿದೆ. ಶ್ರೀರಂಭಾಪುರಿ ಜಗದ್ಗುರುಗಳು ಮಳೆಗಾಲದಲ್ಲಿ ಯಡೆಯೂರಿಗೆ ಬಂದು ದೀರ್ಘ ಕಾಲದವರೆಗೆವಾಸ್ತವ್ಯ ಹೂಡುತ್ತಿದ್ದ ಕಾರಣಕ್ಕೆ ಶ್ರೀ ಮಠಕ್ಕೆ “ಬಾಳೆಹೊನ್ನೂರು ಖಾಸಾ ಶಾಖಾ ಮಠ” ಎಂಬಹೆಸರು ಬಂದಿದೆ. ಅದರಲ್ಲೂ ಪರಂಪರೆಯ ಹಿಂದಿನ ಜಗದ್ಗುರುಗಳಾದ ಶ್ರೀವೀರಗಂಗಾಧರ ಶಿವಾಚಾರ್ಯ ಭಗತ್ಪಾದರ ನೆಚ್ಚಿನ ತಾಣವಾಗಿದ್ದು ಶ್ರೀಗಳು ಸುಕ್ಷೇತ್ರದಲ್ಲಿದಾಖಲೆಯಾಗಿ ಉಳಿಯಬಲ್ಲಂತಹ ಧಾರ್ಮಿಕ ಆಚರಣೆಗಳನ್ನು ಕೈಗೊಂಡಿದ್ದಾರೆ. ಇವರಧಾರ್ಮಿಕ ಕಾರ್ಯಕ್ರಮಕ್ಕೆ ಮೈಸೂರು ಅರಸರಾದ ಜಯಚಾಮರಾಜ ಒಡೆಯರು ಆಗಮಿಸಿಪೂಜ ಕಾರ್ಯದಲ್ಲಿ ಭಾಗವಹಿಸಿ ಹೋಗಿದ್ದಾರೆಂದು ತಿಳಿದು ಬರುತ್ತದೆ.15ನೇ ಶತಮಾನದಲ್ಲಿ ಶ್ರೀ ಮಠದ ಗುರುಗಳಾಗಿ ಅಧಿಕಾರ ನಡೆಸುತ್ತಿದ್ದ ಶ್ರೀ ಬೆಟ್ಟಿಗದೇವರು ಶ್ರೀ ಸಿದ್ದಲಿಂಗೇಶ್ವರರ ಸಮಕಾಲೀನರು. ಶ್ರೀ ಯಡೆಯೂರು ದೇವಸ್ಥಾನದಆವರಣದಲ್ಲಿನ ಶಾಸನದ (1500). ಶ್ರೀ ಸಿದ್ದಲಿಂಗೇಶ್ವರರು ನಾಡನ್ನೆಲ್ಲಾ ಸುತ್ತಿ ಧರ್ಮಪ್ರಚಾರ ಕೈಗೊಂಡು ಯಡೆಯೂರಿಗೆ ಬರುತ್ತಾರೆಂಬ ವಿಷಯ ತಿಳಿದ ಮೇಲೆ ಶ್ರೀ ಚನ್ನವೀರಣ್ಣ ಒಡೆಯರು ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಗಳು ಹರಕೆಯ ಮೇರೆಗೆ ಶ್ರೀಬೆಟ್ಟಿಗ ದೇವರು ಶ್ರೀ ಸಿದ್ದಲಿಂಗೇಶ್ವರರಿಗಾಗಿ ಕಲ್ಲುಮಠವನ್ನು ಕಟ್ಟಿಸಿದ್ದಾರೆ ಎಂದುಉಲ್ಲೇಖವಿದೆ. ಶ್ರೀ ಸಿದ್ದಲಿಂಗೇಶ್ವರರು ಶ್ರೀ ಮಠಕ್ಕೆ ಆಗಮಿಸಿದಾಗ ಗುರುಗಳು ಪ್ರಥಮವಾಗಿಪಾನಕ ಪಲಹಾರ ನೀಡಿ ಸತ್ಕರಿಸಿದ್ದರು. ಇದರ ದ್ಯೋತಕವಾಗಿ ಶ್ರೀ ಸಿದ್ದಲಿಂಗೇಶ್ವರರರಥೋತ್ಸವ ಹೊರಡುವ ಮುನ್ನ ಸಂಪ್ರದಾಯಬದ್ದವಾಗಿ ದೇವಸ್ಥಾನದಿಂದ ಶ್ರೀ ಮಠದಗುರುಗಳಿಗೆ ಆಹ್ವಾನ ನೀಡುತ್ತಾರೆ. ನಂತರ ಗುರುಗಳು ಬಂದವರಿಗೆ ಪಾನಕ ಫಲಹಾರವನ್ನುನೀಡಿ ದೇವಸ್ಥಾನಕ್ಕೆ ತೆರಳಿ ರಥದ ಮೇಲಿನ ಶ್ರೀ ಸಿದ್ದಲಿಂಗೇಶ್ವರರಿಗೆ ಪೂಜೆ ಸಲ್ಲಿಸಿತೆಂಗಿನಕಾಯಿ ಒಡೆದ ನಂತರ ರಥೋತ್ಸವ ಪ್ರಾರಂಭವಾಗುತ್ತದೆ. ಈ ಪರಿಪಾಠ ಶ್ರೀ ಮಠಕ್ಕೂಹಾಗೂ ದೇವಸ್ಥಾನಕ್ಕೂ ಇರುವ ಅನ್ಯೋನ್ಯತೆಯನ್ನು ಪ್ರತಿಬಿಂಬಿಸುತ್ತದೆ.ಇಂತಹ ಇತಿಹಾಸ ಪ್ರಸಿದ್ದ ಪುರಾತನ ಶ್ರೀ ಮಠಕ್ಕೆ 1998ರ ಮೇ 14ರಂದುಅಧಿಕಾರ ವಹಿಸಿಕೊಂಡು ಬಂದವರೇ ಈಗಿನ ಶ್ರೀಗಳಾದ ಶ್ರೀ ಷ. ಬ್ರ. ರೇಣುಕಶಿವಾಚಾರ್ಯ ಮಹಾಸ್ವಾಮಿಗಳು. 1948ರಲ್ಲಿ ಜನಿಸಿದ ಶ್ರೀಗಳು ಸಂಸ್ಕøತ, ವೇದ,ಆಗಮಗಳು ಹಾಗೂ ವೀರಶೈವ ಸಿದ್ದಾಂತದ ಬಗ್ಗೆ ಅಪಾರ ಜ್ಞಾನವನ್ನು ಪಡೆದವರು. ತಮ್ಮವಿದ್ವತ್ನಿಂದ ಪ್ರಸಿದ್ದರಾಗಿದ್ದ ಶ್ರೀಗಳು 1974ರ ಮೇ 01ರಂದು ಚನ್ನಗಿರಿ ತಾಲ್ಲೂಕುತಾವರೆಕೆರೆ ಶಿಲಾಮಠದ ಪೀಠಾಧ್ಯಕ್ಷರಾಗಿ ರಂಭಾಪುರಿ ಜಗದ್ಗುರು ಶ್ರೀ ವೀರ ಗಂಗಾಧರಶಿವಾಚಾರ್ಯ ಭಗದ್ಪಾದರಿಂದ ಪಟ್ಟದ ಅನುಗ್ರಹ ಪಡೆದರು.ತಾವರೆಕೆರೆಯ ಶಿಲಾಮಠದ ಪೀಠಾಧ್ಯಕ್ಷರಾಗಿ ಮಠವನ್ನು ಅಭಿವೃದ್ಧಿ ಪಥದತ್ತಮುನ್ನಡೆಸಿದ ಶ್ರೀಗಳು 1998ರ ಮೇ 14ರಂದು ಯಡೆಯೂರು ಕ್ಷೇತ್ರದ ಪುರಾತನ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾ ಮಠಕ್ಕೂ ಪಟ್ಟಾಧಿಕಾರಿಗಳಾಗಿ ಪಂಚ ಪೀಠಾದೀಶ್ವರರಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಕಳೆದ 17 ವರ್ಷಗಳಲ್ಲಿ ಶ್ರೀ ಮಠದಲ್ಲಿ ಅನೇಕಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿರುವ ಶ್ರೀಗಳು ಶ್ರೀ ಮಠದಲ್ಲಿ ಅತಿಥಿಗೃಹ. ಕಲ್ಯಾಣ ಮಂಟಪ ಮುಂತಾದ ಕಟ್ಟಡಗಳನ್ನು ನಿರ್ಮಿಸುತ್ತಾ ಶ್ರೀ ಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ.ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಮಠ ಹಾಗೂ ತಾವರಕೆರೆಶಿಲಾಮಠ ಎರಡರ ಜವಾಬ್ದಾರಿಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು ಜೊತೆಯಲ್ಲಿಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅಲ್ಲದೇ ಶ್ರೀಗಳುಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾಗಿನಾಡಿನಾದ್ಯಂತ ಧರ್ಮಗುರುಗಳ ಪಾತ್ರ ಮತ್ತು ಅವರ ಸ್ಥಾನಮಾನದ ಬಗ್ಗೆ ಚಿಂತನೆ ನಡೆಸಿಸಂಘಟನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಹಾಗೂ ವೀರಶೈವಸಮಾಜವನ್ನು ಒಗ್ಗೂಡಿಸಲು ಶ್ರಮಿಸುತ್ತಿರುವುದು ಗಮನಾರ್ಹ.
Swamiji
Swamiji Name :
ಷ. ಬ್ರ. ಶ್ರೀ ರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
06-09-1948
Place :
ಅಜ್ಜಂಪುರ, ತರೀಕೆರೆ ತಾ||
Pattadikara :
14-05-1998
Photo :
Programs
ಚೈತ್ರ ಮಾಸದಲ್ಲಿ ಶ್ರೀ ಮಠದ ಜಾತ್ರೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಪ್ರತಿ ತಿಂಗಳ ಕಡೆಯ ಭಾನುವಾರ - ಚಿಂತನ ಮಂಥನ ಗೋಷ್ಠಿ
Photos
Full Address Kannada
ಶ್ರೀಮದ್ ರಂಭಾಪುರಿ ವೀರಸಿಂಹಾಸನ ಖಾಸಾ ಶಾಖಾ ಬಾಳೆಹೊನ್ನೂರು ಮಠ ಶ್ರೀ ಕ್ಷೇತ್ರ ಯಡೆಯೂರು - 572 126 ಕುಣಿಗಲ್ ತಾ||, ತುಮಕೂರು ಜಿಲ್ಲೆ