ಹಾಸನ ಜಿಲ್ಲೆ ಆಲೂರು ತಾಲ್ಲೂಕು ಕೇಂದ್ರದಿಂದ 11 ಕಿ.ಮೀ. ದೂರದಲ್ಲಿರುವಕಾರ್ಜುವಳ್ಳಿ ಗ್ರಾಮದ ಹೊರವಲಯದಲ್ಲಿ ಕಳೆದ ಶತಮಾನದಿಂದೀಚೆಗೆಸ್ಥಾಪಿತಗೊಂಡಿರುವ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠವು, ಶ್ರೀ ರಂಭಾಪುರಿ ಪೀಠದಸಂಪ್ರದಾಯಗಳನ್ನು, ಪರಂಪರೆಯನ್ನು ಪಾಲಿಸಿಕೊಂಡು ಬಂದಿದ್ದು ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿದೆ. ಶ್ರೀಮಠವು ಸುಮಾರು ಒಂದು ಶತಮಾನದಷ್ಟುಹಳೆಯದಾಗಿದ್ದು ಕರ್ತೃ ಗುರುಗಳ ಬಗ್ಗೆ ತಿಳಿದು ಬರುವುದಿಲ್ಲ.ಶ್ರೀಮಠದ ಮೂಲ ಮಠವು ಇದೇ ಗ್ರಾಮದ ಮzs À್ಯಭಾಗದಲ್ಲಿಸ್ಥಾಪಿತಗೊಂಡಿತ್ತೆಂದು ಹೇಳಲಾಗಿದ್ದು ಈಗ್ಗೆ 58 ವರ್ಷಗಳ ಹಿಂದೆ ಈಗಿರುವ ಸ್ಥಳದಲ್ಲಿಶ್ರೀಮಠವು ಸ್ಥಳಾಂತರವಾಗಿ ನಿರ್ಮಿತಗೊಂಡಿತೆಂದು ತಿಳಿದು ಬರುತ್ತದೆ. ಈಗಲೂ ಊರಒಳಗೆ ಮಠದ ಹೆಸರಿನಲ್ಲಿ ಬಾವಿ ಇರುವುದನ್ನು ಕಾಣಬಹುದು. ಈ ಕಾರಣಗಳಿಂದಾಗಿಶ್ರೀಮಠದ ಪರಂಪರೆಯ ಬಗ್ಗೆ ನಿಖರವಾಗಿ ಹೇಳಲು ಬರುವುದಿಲ್ಲ.ಕರ್ತೃ ಗುರುಗಳ ನಂತರದಲ್ಲಿ ಕೆಲ ಶ್ರೀಗಳು ಅಧಿಕಾರ ನಡೆಸಿರಬಹುದಾಗಿದ್ದುಮಾಹಿತಿಗಳು ಲಭ್ಯವಿಲ್ಲ. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯಸ್ವಾಮಿಗಳು ಶ್ರೀಮಠವನ್ನು ಧಾರ್ಮಿಕ ಆಚರಣೆಗಳೊಂದಿಗೆ ಅಭಿವೃದ್ದಿಗೊಳಿಸಿದ್ದು ಈಭಾಗದಲ್ಲಿ ಮನೆ ಮಾತಾಗಿದ್ದರು. ತಮ್ಮ ಆಚರಣೆಗಳ ಮೂಲಕ ಭಕ್ತರನ್ನು ಸನ್ಮಾರ್ಗದಲ್ಲಿಮುನ್ನಡೆಸಿದ ಶ್ರೀಗಳು 1978ರಲ್ಲಿ ಲಿಂಗೈಕ್ಯರಾಗಿದ್ದು, ಇವರ ಐಕ್ಯಾ ನಂತರ ಶ್ರೀ ಮಠವುಸುಮಾರು 28 ವರ್ಷಗಳ ಕಾಲ ಖಾಲಿ ಉಳಿಯಿತು. ಆ ಸಮಯದಲ್ಲಿ ಮಠದ ಭಕ್ತರೇಮಠವನ್ನು ನೋಡಿಕೊಂಡು ಬಂದಿದ್ದಾರೆ.ಈvನ ಶ್ರೀಗಳಾದ ಶ್ರೀ ಷ.ಬ್ರ. ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳು2006ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ್ದು ಇವರಿಗೆ ಅಧಿಕಾರ ನೀಡಿದವರುಈಗಿನ ರಂಭಾಪುರಿ ಜಗದ್ಗುರುಗಳು. ಶ್ರೀ ಶಂಭುಲಿಂಗ ಶಿವಾಚಾರ್ಯರು ಶ್ರೀಮಠದ ಪಟ್ಟಕ್ಕೆಬಂದ ನಂತರ ಶ್ರೀಮಠವು ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿದೆ. ಶ್ರೀ ಮಠವಿರುವಆವರಣದಲ್ಲಿ ಮಠದಮ್ಮನ ಚಿಕ್ಕದೇವಸ್ಥಾನವಿದ್ದು ಮಠದಲ್ಲಿ ಏನೇ ಕಾರ್ಯಕ್ರಮಗಳುನಡೆದರು ಮೊದಲು ಮಠದಮ್ಮಳಿಗೆ ಪೂಜೆ ಸಲ್ಲಿಸಿ ಮುಂದುವರೆಯುವ ಸಂಪ್ರದಾಯಮಠದಲ್ಲಿ ಬೆಳೆದು ಬಂದಿದೆ.
Swamiji
Swamiji Name :
ಶ್ರೀ ಷ.ಬ್ರ. ಶಂಬುಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
22-01-1984
Place :
ಹಳಿಯಾಳ ತಾ||
Pattadikara :
2006
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಮಾಘ ಮಾಸದ ಕೊನೆಯ ಸೋಮವಾರ ಶ್ರೀ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ