Shree Viraktamatha, Sindgi

Shree Viraktamatha, Sindgi Claimed

ಶ್ರೀ ವಿರಕ್ತಮಠ, ಸಿಂಧಗಿ

Average Reviews

Description

ಶ್ರೀ ವಿರಕ್ತಮಠ, ಸಿಂಧಗಿ

ಕರ್ತೃ – ಶ್ರೀ ಮ.ನಿ.ಪ್ರ. ಪ್ರಸನ್ನೇಶ್ವರ ಸ್ವಾಮಿಗಳು

ವಿಜಯಪುರ ಜಿˉÉ್ಲಯ ಸಿಂಧಗಿ ಪಟ್ಟಣದಲ್ಲಿ ಶ್ರೀ ಮ.ನಿ.ಪ್ರ. ಪ್ರಸನೇಶ್ವರ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ವಿರಕ್ತ ಮಠವು ಈ ಭಾಗದ ಜನರಲ್ಲಿ ತನ್ನ ಆಚರಣೆಗಳಮೂಲಕ ಧಾರ್ಮಿಕ ಅರಿವನ್ನು ಮೂಡಿಸುವ ಕಾರ್ಯನಿರ್ವಹಿಸುತ್ತಿದೆ. ಕರ್ತೃಗುರುಗಳುˉÉೂೀಕಸಂಚಾರದಿಂದ ಸಿಂಧಗಿಗೆ ಆಗಮಿಸಿ ನೆˉÉನಿಂತು ತಮ್ಮ ಧಾರ್ಮಿಕ ಆಚರಣೆಗಳಿಂದಹಾಗೂ ಆಧ್ಯಾತ್ಮಿಕ ಶಕ್ತಿಯಿಂದಾಗಿ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಶ್ರೀ ಪ್ರಸನ್ನೇಶ್ವರ ಸ್ವಾಮಿಗಳ ಆಧ್ಯಾತ್ಮ ಶಕ್ತಿಗೆ ಮಾರುಹೋದ ಗ್ರಾಮದ ಧನಿಕ ಶ್ರೀಪಟ್ಟಣಶೆಟ್ಟಿ ಎಂಬುವರು ಗುರುಗಳಿಗಾಗಿ ಶ್ರೀಮಠವನ್ನು ಕಟ್ಟಿಸಿಕೊಟ್ಟು ಧಾರ್ಮಿಕ ಕಾರ್ಯಗಳಿಗೆ ನೆರವಾಗಿದ್ದಾರೆ. ಹಾಗೂ ಗುರುಗಳ ಧಾರ್ಮಿಕ ಸಾಮಾಜಿಕ ಕಾರ್ಯಗಳನ್ನುಗಮನಿಸಿದ ವಿಕ್ಟೋರಿಯ ರಾಣಿಯು ಭೂಮಿಯನ್ನು ಉಂಬಳಿಯಾಗಿ ನೀಡಿ ಶ್ರೀ ಮಠವುಶ್ರೀಮಂತಗೊಳ್ಳುವಂತೆ ಮಾಡಿದರು ಎಂದು ಹೇಳˉÁಗುತ್ತದೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಬಂದಿರುವ ಶ್ರೀ ಷಣ್ಮುಖ ಸ್ವಾಮಿಗಳುಶ್ರೀಮಠವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದು ನಂತರದಲ್ಲಿ ಶ್ರೀ ಸಿದ್ದಲಿಂಗ ಸ್ವಾಮಿಗಳುಶ್ರೀಮಠವನ್ನು ಪ್ರಸಿದ್ಧಿಗೆ ತಂದಿದ್ದಾರೆ. ತದನಂತರ ಶ್ರೀ ಗುರುಬಸವ ದೇವರು ಈ ಮಠದಧಾರ್ಮಿಕ ಹಾಗೂ ಆಡಳಿತ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದರೂ ಇವರಿಗೆಪಟ್ಟಾಧಿಕಾರ ಆಗಿರಲಿಲ್ಲ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು 1988ರ ಜುˉÉೈ15ರಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಜಗದ್ಗುರು ಗಂಗಾಧರರಾಜಯೋಗೇಂದ್ರ ಸ್ವಾಮಿಗಳಿಂದ ಅನುಗ್ರಹವನ್ನು ಪಡೆದು ಅಧಿಕಾರಕ್ಕೆ ಬಂದಿದ್ದಾರೆ.ಶ್ರೀಗಳು ಹುಬ್ಬಳ್ಳಿ ಮೂರುಸಾವಿರ ಮಠ, ಗದಗ ಮತ್ತು ಶಿವಮೊಗ್ಗಗಳಲ್ಲಿ ವಿದ್ಯಾಭ್ಯಾಸ ಮಾಡಿಪಾಂಡಿತ್ಯ ಸಂಪಾದಿಸಿಕೊಂಡಿದ್ದಾರೆ. ಶ್ರೀಗಳು ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತ ಹರಿಸಿದ್ದು, ಜೊತೆಯಲ್ಲಿ ಮಠದ ಧಾರ್ಮಿಕ ಕಾರ್ಯಕ್ರಮಗಳನ್ನುನಡೆಸುತ್ತಾ ಬಂದಿದ್ದಾರೆ. ಶ್ರೀಮಠದಲ್ಲಿ ಬಸವಜಯಂತಿ ಆಚರಣೆ ಜರುಗುತ್ತಿದ್ದು ಆ ಸಮಯದಲ್ಲಿ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ಪುರಾಣ ಪ್ರವಚನ ನಡೆಯುತ್ತದೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಸಿದ್ದಲಿಂಗ ಸ್ವಾಮಿಗಳು
Date of Birth :
20-10-1970
Place :
ಗಬ್ಬಸಾವಳಗಿ, ಸಿಂಧಗಿ ತಾ||
Pattadikara :
15-7-1988
Photo :

Programs

ಬಸವ ಜಯಂತಿ ಆಚರಣೆ.
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ.

Photos

Full Address Kannada

ಶ್ರೀ ವಿರಕ್ತಮಠ-ಗಚ್ಚಿನಮಠ
ಸಿಂಧಗಿ - 586 128 ವಿಜಯಪುರ ಜಿ||

Map

Near by Places

ದೇವರಹಿಪ್ಪರಗಿ - 21 ಕಿ.ಮೀ.
ಜೇವರ್ಗಿ - 60 ಕಿ.ಮೀ.
ವಿಜಯಪುರ - 60 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!