Shree Viraktamatha, Mamadapura

Shree Viraktamatha, Mamadapura Claimed

ಶ್ರೀ ವಿರಕ್ತಮಠ, ಮಮದಾಪುರ

Average Reviews

Description

ಶ್ರೀ ವಿರಕ್ತಮಠ, ಮಮದಾಪುರ

ಕರ್ತೃ – ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು

ಮಮದಾಪುರ ಗ್ರಾಮದ ಮಧ್ಯಭಾಗದಲ್ಲಿ ಅಥಣಿಯ ಗಚ್ಚಿನಮಠದ ಶ್ರೀಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳಿಂದ 16ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿದೆಎಂದು ಹೇಳˉÁಗಿರುವ ಶ್ರೀ ವಿರಕ್ತಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಹಾಗೂಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ.ಶ್ರೀ ಮುರುಘೇಂದ್ರ ಸ್ವಾಮಿಗಳ ನಂತರ ಶ್ರೀ ಮುಪ್ಪಿನ ಸ್ವಾಮಿಗಳು, ಶ್ರೀ ಸಿದ್ದಲಿಂಗಸ್ವಾಮಿಗಳು, ಶ್ರೀ ಗುರುಬಸವ ಸ್ವಾಮಿಗಳು ಅಧಿಕಾರ ನಡೆಸಿದ್ದಾರೆಂದು ಹೇಳˉÁದರೂಅವರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ. ನಂತರ ಬಂದ ಶ್ರೀ ಮ.ನಿ.ಪ್ರ.ಮಹಾದೇವ ಸ್ವಾಮಿಗಳು 1937ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ನಂತರದಲ್ಲಿಬೆಂಗಳೂರಿನ ಸರ್ಪಭೂಷಣ ಮಠದ ಅಧಿಕಾರಿಗಳಾಗಿ ಬೆಂಗಳೂರಿಗೆ ತೆರಳಿದರು.ಶ್ರೀಗಳು ಬೆಂಗಳೂರಿನಲ್ಲಿದ್ದರೂ ಶ್ರೀ ವಿರಕ್ತಮಠದ ನಂಟು ಬಿಡದೇ ಇಲ್ಲಿಯಕಾರ್ಯಕ್ರಮಗಳಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿದ್ದರು. ಶ್ರೀಗಳು ಸ್ವತಃˉÉೀಖಕರಾಗಿದ್ದು ವಚನ ಸಾಹಿತ್ಯದ ಬಗ್ಗೆ ಅನೇಕ ಕೃತಿಗಳನ್ನು ರಚಿಸಿದರು. 1951ರಲ್ಲಿ ಶ್ರೀವಿರಕ್ತಮಠಕ್ಕೆ ಶ್ರೀ ಮೃತ್ಯುಂಜಯ ಸ್ವಾಮಿಗಳನ್ನು ಅಧಿಕಾರಕ್ಕೆ ತಂದು 1961ರಲ್ಲಿ ಬೆಂಗಳೂರಿನಸರ್ಪಭೂಷಣ ಮಠದಲ್ಲಿ ಲಿಂಗೈಕ್ಯರಾದರು.ಶ್ರೀ ಮೃತ್ಯುಂಜಯ ಸ್ವಾಮಿಗಳು ವಚನ ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನನಡೆಸಿದ್ದವರು. ಶ್ರೀಗಳು ಅಧಿಕಾರ ವಹಿಸಿಕೊಂಡ ನಂತರ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವಲ್ಲಿ ಶ್ರಮಿಸಿದ್ದಾರೆ. ಶಿಥಿಲಗೊಂಡಿದ್ದ ಕಟ್ಟಡವನ್ನು ಹಂತಹಂತವಾಗಿಅಭಿವೃದ್ಧಿಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು ಶ್ರೀಮಠದಅಧಿಕಾರವನ್ನು ವಹಿಸಿಕೊಂಡು, ಹಿಂದಿನ ಶ್ರೀಗಳಿಂದ ಪ್ರಾರಂಭಗೊಂಡ ಅಭಿವೃದ್ಧಿಕಾರ್ಯಗಳನ್ನು ಮುಂದುವರೆಸಿದ್ದಾರೆ. ಶ್ರೀಮಠದಲ್ಲಿ ಪ್ರತಿ ಅಮಾವಾಸ್ಯೆಗೆ ವಿಶೇಷ ಪೂಜೆ,ನವರಾತ್ರಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸˉÁಗುತ್ತಿದ್ದು, ಶ್ರಾವಣಮಾಸದಲ್ಲಿ ನಿತ್ಯ ಪುರಾಣ ಪ್ರವಚನಗಳು ನಡೆಯುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು
Date of Birth :
9-8-1983
Place :
ಧಾರವಾಡ
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ, ಸಾಮೂಹಿಕ ಲಿಂಗ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳು. ಬಸವಜಯಂತಿ ಆಚರಣೆ.
ನವರಾತ್ರಿಗೆ ವಿಶೇಷ ಪೂಜೆ.

Photos

Full Address Kannada

ಶ್ರೀ ವಿರಕ್ತಮಠ
ಮಮದಾಪುರ - 586 113
ವಿಜಯಪುರ ತಾ||, ಜಿ||

Map

Near by Places

ಬಬಲೇಶ್ವರ ಕ್ರಾಸ್ - 12 ಕಿ.ಮೀ.
ವಿಜಯಪುರ - 35 ಕಿ.ಮೀ.
ಜಮಖಂಡಿ - 45 ಕಿ.ಮೀ.

Statistic

113 Views
0 Rating
0 Favorite
5 Shares
error: Content is protected !!