Shree Virakta Matha – Shegunagi

Shree Virakta Matha – Shegunagi Claimed

ಶ್ರೀ ವಿರಕ್ತ ಮಠ - ಶೇಗುಣಸಿ

Average Reviews

Description

ಶ್ರೀ ವಿರಕ್ತ ಮಠ – ಶೇಗುಣಸಿ

ಕರ್ತೃ – ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶೇಗುಣಸಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ.ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ವಿರಕ್ತಮಠವುಸುಮಾರು 300 ವರ್ಷಗಳ ಇತಿಹಾಸ ಹೊಂದಿದ್ದು ಹಿಂದಿನ ಗುರುಗಳಾದ ಶ್ರೀ. ಮ.ನಿ.ಪ್ರ.ಮುರುಘೇಂದ್ರ ಮಹಾಸ್ವಾಮಿಗಳಿಂದ ಹೆಚ್ಚಿನ ಪ್ರಸಿದ್ದಿ ಪಡೆದಿದೆ.ಕರ್ತೃಗುರುಗಳಾದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳ ನಿರ್ಧಿಷ್ಟಕಾಲಮಾನದಬಗ್ಗೆ ಹಾಗೂ ಅವರ ನಂತರದ ಗುರುಪರಂಪರೆಯ ಗುರುಗಳ ಬಗ್ಗೆಯಾಗಲೀ ನಿಖರವಾದಮಾಹಿತಿಗಳು ಲಭ್ಯವಿಲ್ಲ. ಇತ್ತೀಚಿನ ಎರಡು ತಲೆಮಾರುಗಳ ಹಿಂದೆ ಶ್ರೀಮಠದಅಧಿಕಾರದಲ್ಲಿದ್ದ ಶ್ರೀ. ಮ.ನಿ.ಪ್ರ. ಶಂಕರ ಮಹಾಸ್ವಾಮಿಗಳಿಂದ ಮುಂದಿನ ಇತಿಹಾಸಲಭ್ಯವಿದೆ. ಶ್ರೀ ಶಂಕರ ಮಹಾಸ್ವಾಮಿಗಳು ಘನಶಿವೋಪಾಸಕರು. ಇವರು ತ್ರಿಕಾಲಜ್ಞಾನಿಗಳಾಗಿದ್ದರೆಂದು ಜನ ಬಣ್ಣಿಸುವರು. ತಾವು ಲಿಂಗೈಕ್ಯರಾಗುವ ಮಿತಿಯನ್ನು ಎರಡುವರ್ಷಗಳ ಮೊದಲೇ ಭಕ್ತರಿಗೆ ತಿಳಿಸಿದ್ದರು ಎಂದು ಹೇಳಲಾಗುತ್ತದೆ.ಶ್ರೀ ಶಂಕರ ಮಹಾಸ್ವಾಮಿಗಳು ಶ್ರೀ ಚನ್ನಬಸವಯ್ಯನೆಂಬ ಆರು ವರ್ಷದಮಗುವನ್ನು ಮಠಕ್ಕೆ ತಂದು ಉತ್ತರಾಧಿಕಾರಿಯಾಗಿಸಿದರು. ಅವರೇ ಮುಂದೆ ಶೇಗುಣಸಿ ಶ್ರೀಮುರುಘೇಂದ್ರ ಶಿವಯೋಗಿಗಳಾಗಿ ಪ್ರಖ್ಯಾತಗೊಂಡರು. 1934ರಲ್ಲಿ ಶ್ರೀಮಠದಅಧಿಕಾರವಹಿಸಿಕೊಂಡ ಶ್ರೀಗಳದು ಜ್ಯಾತ್ಯಾತೀತ ಧೋರಣೆ. ಎಲ್ಲಾ ಜಾತಿ-ಧರ್ಮದವರಿಗೂಮಠದಲ್ಲಿ ಮುಕ್ತಪ್ರವೇಶ. ವಿವಿದ ರೂಪಗಳಲ್ಲಿರುವ ದೇವರು ಒಬ್ಬನೇ ಎಂಬುದು ಇವರಬಲವಾದ ಪ್ರತಿಪಾದನೆ. ಪೂಜ್ಯರು ನಡೆ-ನುಡಿಗಳಲ್ಲಿ ತುಂಬ ಸರಳರು. ಅವರು ಬಡವರನ್ನುಪ್ರೀತಿಸಿ ಅವರಲ್ಲೇ ಹರನನ್ನು ಕಾಣುತ್ತಿದ್ದರು. ಜಂಗಮ ನಿರಾಭಾರಿಯಾಗಿರಬೇಕೆಂದುಹೇಳುತ್ತಿದ್ದರು. ಮಠಗಳು ಗುರುಮನೆಗಳಾಗಿರಬೇಕೇ ಹೊರತು ಅರಮನೆಗಳಾಗಿರಬಾರದುಎಂದು ಅಭಿಪ್ರಾಯ ಪಡುತ್ತಿದ್ದ ಶ್ರೀಗಳು 1953ರ ನವೆಂಬರ್ 14ರಂದು ಲಿಂಗದೊಳಗಾದರು.ಈಗಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಶಂಕರ ಸ್ವಾಮಿಗಳು ಸುಮಾರು ಮೂರುದಶಕಗಳ ಕಾಲ ಖಾಲಿ ಉಳಿದಿದ್ದ ಮಠಕ್ಕೆ 1981ರಲ್ಲಿ ಅಧಿಕಾರವಹಿಸಿಕೊಂಡು ಬಂದುಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುತ್ತಿದ್ದಾರೆ ಹಾಗೂ ಅವರಾತ್ರಿಅಮವಾಸೆಗೆ ಶ್ರೀಮಠದ ಜಾತೆಯನ್ನು ನಡೆಸುತ್ತಿದ್ದು ಅಪಾರ ಸಂಖ್ಯೆಯ ಭಕ್ತರುಪಾಲ್ಗೊಳ್ಳುತ್ತಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಶಂಕರ ಸ್ವಾಮಿಗಳು
Date of Birth :
01-10-1948
Place :
ಭಿರಡಿ, ರಾಯಭಾಗ ತಾ||
Pattadikara :
1981
Photo :

Programs

ಪ್ರತಿ ಅಮವಾಸೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಅವರಾತ್ರಿ ಅಮಾವಾಸೆಗೆ ಶ್ರೀಮಠದ ಜಾತ್ರೆ

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ವಿರಕ್ತ ಮಠ
ಶೇಗುಣಸಿ - 591 220
ಅಥಣಿ ತಾ||, ಬೆಳಗಾವಿ ಜಿಲ್ಲೆ

Map

Near by Places

ತೇರದಾಳ - 8 ಕಿ.ಮೀ.
ರಬಕವಿ 15 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!