ಮೈಸೂರು ಜಿˉÉ್ಲ ಟಿ.ನರಸೀಪುರ ತಾಲ್ಲೂಕು ಕೇಂದ್ರದಿಂದ ಕೇವಲ 03 ಕಿ.ಮೀ.ದೂರದಲ್ಲಿರುವ ಕರೋಹಟ್ಟಿ ಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ವಿರಕ್ತಮಠವುತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದ ಭಕ್ತರಲ್ಲಿಸಾಮಾಜಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿದೆ. ಶ್ರೀಮಠದ ಸ್ಥಾಪಕರು ದೇವನೂರಿನಪೂಜ್ಯ ಶ್ರೀ ಭಿಕ್ಷದಾರ್ಯರು ಹಾಗೂ ಶ್ರೀಮಠದ ಸ್ಥಾಪಿತ ಕಾಲಮಾನ ಕ್ರಿ.ಶ. 1919.1919ರಲ್ಲಿ ದೇವನೂರಿನ ಪೂಜ್ಯ ಶ್ರೀ ಭಿಕ್ಷದಾರ್ಯರಿಂದ ಶ್ರೀ ಭಿಕ್ಷದ ಮಠವಾಗಿಪ್ರಾರಂಭಗೊಂಡ ಶ್ರೀಮಠವು ನಂತರದಲ್ಲಿ ಬೆಟ್ಟದಪುರದ ಶ್ರೀಗಳಿಂದ ಶ್ರೀ ವಿರಕ್ತಮಠವಾಗಿಪರಿವರ್ತಿತಗೊಂಡಿತು. ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಗುರುಲಿಂಗದೇಶಿಕೇಂದ್ರ ಮಹಾಸ್ವಾಮಿಗಳ ಪೂರ್ವದಲ್ಲಿ ಕೆಲವು ಭಿಕ್ಷದ ಸ್ವಾಮಿಗಳು ನೇಮಕಗೊಂಡುಕಂತೆಭಿಕ್ಷೆ ಕಾಯಕದಿಂದ ಮಠವನ್ನು ಬೆಳೆಸಿದ್ದರೆಂದು ತಿಳಿದುಬರುತ್ತದೆ.ಹಿಂದಿನ ಶ್ರೀಗಳಾದ ಶ್ರೀ ನಿ.ಪ್ರ.ಸ್ವ. ಗುರುಲಿಂಗ ದೇಶಿಕೇಂದ್ರ ಸ್ವಾಮಿಗಳುಅಧಿಕಾರಕ್ಕೆ ಬಂದ ಮೇˉÉ ಅನೇಕ ಸತ್ಕಾರ್ಯಗಳನ್ನು ನಡೆಸಿ ಭಕ್ತರಿಗೆ ಧಾರ್ಮಿಕಮಾರ್ಗದರ್ಶಕರಾಗಿ ಮಠವನ್ನು ಹಾಗೂ ಸಮಾಜವನ್ನು ಅಭಿವೃದ್ದಿಪಡಿಸಿದರು. ಇವರಕಾˉÁವಧಿಯಲ್ಲಿ ಮಠಕ್ಕೆ ನೂತನ ಕಟ್ಟಡ ನಿರ್ಮಿತಗೊಂಡಿದ್ದು ಶ್ರೀ ಮಠವುಸರ್ವಾಂಗೀಣವಾಗಿ ಅಭಿವೃದ್ದಿಗೊಂಡಿದೆ. ಶ್ರೀಗಳು ತಮ್ಮ ಉತ್ತರಾಧಿಕಾರಿಗಳಿಗೆ ಮಠದಆಡಳಿತ ಒಪ್ಪಿಸಿ 1986ರ ಸೆಪ್ಟಂಬರ್ 5 ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀ ನಿ.ಪ್ರ.ಸ್ವ. ಶಿವಲಿಂಗ ದೇಶಿಕೇಂದ್ರ ಸ್ವಾಮಿಗಳು 1986ರ ಆಗಸ್ಟ್ 24ರಲ್ಲಿಹಿಂದಿನ ಗುರುಗಳಿರುವಾಗˉÉೀ ಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹ ಪಡೆದಿದ್ದು ಮಠದಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ವಿಸ್ತರಿಸಿದರು. ಜ್ಯೋತಿಷ್ಯ ಹಾಗೂವೇದ ಪಾರಂಗತರಾದ ಶ್ರೀಗಳು ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ಇತ್ತೀಚೆಗೆಶ್ರೀಮಠವನ್ನು ಜೀರ್ಣಾಭಿವೃದ್ದಿಗೊಳಿಸಿರುವ ಶ್ರೀಗಳು ಮಠದಲ್ಲಿ ನಿತ್ಯ ಭಜನೆ, ಕೀರ್ತನೆನಡೆಸುತ್ತಾ ಬರುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ.ಸ್ವ. ಶಿವಲಿಂಗ ದೇಶಿಕೇಂದ್ರ ಸ್ವಾಮಿಗಳು
Date of Birth :
1957
Place :
ಜಾಲಹಳ್ಳಿ, ಟಿ.ನರಸೀಪುರ ತಾ||
Pattadikara :
24-08-1986
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ
Photos
Full Address Kannada
ಶ್ರೀ ವಿರಕ್ತಮಠ
ಕರೋಹಟ್ಟಿ - 571 124
ಟಿ.ನರಸೀಪುರ ತಾ||, ಮೈಸೂರು ಜಿಲ್ಲೆ