ಇತಿಹಾಸ ಪ್ರಸಿದ್ದ ಬಾದಾಮಿಯು ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಚಾಲುಕ್ಯರ ರಾಜಧಾನಿಯಾಗಿ ತನ್ನ ಸುವರ್ಣಯುಗವನ್ನು ಕಂಡಿತ್ತು. ಹಾಗೂ ಆ ಕಾಲದಿಂದಲೂ ಈ ಭಾಗದಲ್ಲಿ ವೀರಶೈವ ಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿದ್ದುದನ್ನು ಕಾಣಬಹುದು. ಇಂತಹ ಐತಿಹಾಸಿಕ ಹಾಗೂ ಪುರಾತನ ಪಟ್ಟಣದಲ್ಲಿ ಶ್ರೀ ಶಿವಪೂಜಾಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ನವಗ್ರಹ ಹಿರೇಮಠವು ಜಿಲ್ಲೆಯಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.ಕರ್ತೃಗುರುಗಳಾದ ಶ್ರೀ ಶಿವಪೂಜಾ ಶಿವಚಾಂiÀರ್iರು ತಪೋನಿಷ್ಠರು, ವಿದ್ವತ್ಪಂಡಿತರೂ ಆಗಿದ್ದು ಸದಾ ಲೋಕಸಂಚಾರ ಕೈಗೊಳ್ಳುತ್ತಾ ವೀರಶೈವ ಧರ್ಮವನ್ನುಪಸರಿಸಿದ್ದಾರೆ. ಹೀಗೆ ಶ್ರೀಗಳು ಸಂಚಾರ ಮಾಡುತ್ತಾ ಬಾದಾಮಿಗೆ ಬಂದು ನೆಲೆಸಿ ಶ್ರೀನವಗ್ರಹ ಹಿರೇಮಠವನ್ನು ಸ್ಥಾಪಿಸಿದ್ದು ತಮ್ಮ ಅನುಷ್ಠಾನ ಬಲದಿಂದ, ಧಾರ್ಮಿಕಚಿಂತನೆಗಳಿಂದ ಹಾಗೂ ವಿದ್ವತ್‍ಪೂರ್ಣ ಪ್ರವಚನಗಳಿಂದ ಹೆಸರಾಗಿದ್ದರು.ಕರ್ತೃಗುರುಗಳ ನಂತರದ ಪರಂಪರೆಯ ಕುರಿತು ನಿಖರವಾದ ಮಾಹಿತಿಗಳುಲಭ್ಯವಿಲ್ಲದಿರುವುದು ಬೇಸರದ ಸಂಗತಿ. ಸಿಕ್ಕಿರುವ ಮಾಹಿತಿಗಳ ಪ್ರಕಾರ ಈಗಿನ ಶ್ರೀಗಳುಏಳನೆಯವರೆಂದು ಹೇಳಬಹುದು. ಪರಂಪರೆಯಲ್ಲಿ ಬರುವ ಶ್ರೀ ಚಂದ್ರಮೌಳೇಶ್ವರಶಿವಾಚಾರ್ಯರು ಶ್ರೀಮಠದ ಆಡಳಿತವನ್ನು ವಹಿಸಿಕೊಂಡು ತಮ್ಮ ಧಾರ್ಮಿಕ ಆಚರಣೆಗಳಮೂಲಕ ಶ್ರೀಮಠವನ್ನು ಮುನ್ನಡೆಸಿ ರೋಣ ತಾಲ್ಲೂಕಿನ ಹೊಳೆಹಡಗಲಿ ಗ್ರಾಮದಲ್ಲಿಲಿಂಗೈಕ್ಯರಾಗಿದ್ದು ಅಲ್ಲಿ ಈಗ ಶ್ರೀ ಚಂದ್ರಮೌಳೇಶ್ವರ ಮಠವು ಸ್ಥಾಪಿತಗೊಂಡಿದೆ.ಹಿಂದಿನ ಶ್ರೀಗಳಾದ ಶ್ರೀ ಶಾಂತವೀರ ಸ್ವಾಮಿಗಳು ಶ್ರೀ ಮಠವನ್ನು ಧಾರ್ಮಿಕಆಚರಣೆಗಳ ಜೊತೆಗೆ ಆರ್ಥಿಕವಾಗಿಯೂ ಅಭಿವೃದ್ಧಿಗೊಳಿಸಿದ್ದು 1995ರ ಫೆಬ್ರವರಿ 9ರಲ್ಲಿಶ್ರೀ ಶಿವಪೂಜಾ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಕ್ಕೆ ತಂದು ಲಿಂಗೈಕ್ಯರಾದರು. ಶ್ರೀಶಿವಪೂಜಾ ಶಿವಾಚಾರ್ಯರು ಹಿರಿಯ ಗುರುಗಳು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದುಶ್ರೀಮಠದ ಸಮಗ್ರ ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ. ಶ್ರೀಗಳು ಶಿವಯೋಗಿ ಮಂದಿರದಲ್ಲಿಧಾರ್ಮಿಕ ಶಿಕ್ಷಣವನ್ನು ಪಡೆದವರಾಗಿದ್ದು ತಮ್ಮ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳ ಮೂಲಕ ಶ್ರೀಮಠಕ್ಕೆ ಭಕ್ತರನ್ನು ಸೆಳೆದು ಮಠವನ್ನು ಮುನ್ನಡೆಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಿವಪೂಜಾ ಶಿವಾಚಾರ್ಯ ಸ್ವಾಮಿಗಳು
Date of Birth :
11-1-1975
Place :
ಬಾದಾಮಿ, ಬಾಗಲಕೋಟೆ ಜಿ||
Pattadikara :
9-2-1995
Photo :
Programs
ಪ್ರತಿ ತಿಂಗಳು ಎರಡನೇ ರವಿವಾರ ಶ್ರೀಮಠದಲ್ಲಿ ಶಿವಾನುಭವ ಗೋಷ್ಠಿ.
ಮಾಘ ಶುದ್ಧ ನವಮಿಗೆ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ.
ವೈಶಾಖ ಮಾಸದಲ್ಲಿ ಕರ್ತೃಗುರುಗಳಾದ ಶ್ರೀ ಷ.ಬ್ರ. ಶಿವಪೂಜಾ ಶಿವಾಚಾರ್ಯರ ಜಯಂತ್ಯೋತ್ಸವ
ಹಾಗೂ ಸಾಮೂಹಿಕ ವಿವಾಹ, ಸಾಂಸ್ಕøತಿಕ ಕಾರ್ಯಕ್ರಮಗಳು. ಶ್ರೀ ನವಗ್ರಹ ಹಿರೇಮಠ