Shree Ujjeshwara Samthana Hirematha

Shree Ujjeshwara Samthana Hirematha Claimed

ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠ

Average Reviews

Description

ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠ – ಪಾಚ್ಚಾಪುರ

ಕರ್ತೃ – ಪೂಜ್ಯ ಶ್ರೀ ಉಜ್ಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಪಾಚ್ಚಾಪುರ ಗ್ರಾಮವು ತಾಲ್ಲೂಕುಕೇಂದ್ರದಿಂದ 30 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಮಧ್ಯಭಾಗದಲ್ಲಿ ಪುರಾತನ ಕಾಲದಪರಮಪೂಜ್ಯ ಶ್ರೀ ಉಜ್ಜೇಶ್ವರ ಶಿವಾಚಾರ್ಯರಿಂದ ಸ್ಥಾಪಿತಗೊಂಡಿದೆಯೆಂದುಹೇಳಲಾಗುವ ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠವು ಅಸ್ತಿತದಲ್ಲಿದ್ದು ತನ್ನ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ.ಶ್ರೀಮದ್ ಕಾಶೀ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿಬೆಳೆದು ಬಂದಿರುವ ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠದ ಕರ್ತೃಗುರುಗಳು ಹಾಗೂಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಹೊರತಾಗಿಇನ್ನಾವುದೇ ಗುರುಗಳ ಬಗ್ಗೆ ನಿಖರವಾದ ಮಾಹಿತಿಗಳು ದೊರೆಯುವುದಿಲ್ಲಇಲ್ಲಿಯವರೆಗೂ ಶ್ರೀ ಮಠದ ಪರಂಪರೆಯಲ್ಲಿ 12 ಜನ ಶ್ರೀಗಳು ಅಧಿಕಾರಕ್ಕೆಬಂದಿರಬಹುದೆಂದು ಹೇಳಲಾಗುತ್ತದೆ.ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳುಶ್ರೀಮಠಕ್ಕೆ ಪಟ್ಟಾಧಿಕಾರದ ಅನುಗ್ರಹವನ್ನು ಪಡೆದು ಬಂದು ತಮ್ಮ ಧಾರ್ಮಿಕ ಆಚರಣೆಗಳಮೂಲಕ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಶ್ರೀಗಳು ಸದಾ ಧಾರ್ಮಿಕಕಾರ್ಯಗಳನ್ನು ಹಾಗೂ ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ಭಕ್ತರಿಗೆತಿಳಿಸಿಕೊಡುತ್ತಾ ಅಲೌಕಿಕತೆಯಲ್ಲೇ ಹೆಚ್ಚು ತೃಪ್ತಿಕೊಂಡಿರುವಂತೆ ಕಾಣುತ್ತಿದ್ದು ಶ್ರೀಮಠವುಹೆಚ್ಚಿನ ಅಭಿವೃದ್ಧಿ ಕಾಣಬೇಕಿದೆ.ಪ್ರಸ್ತುತ 1978ರ ಜನವರಿ 13ರಲ್ಲಿ ಅಥಣಿಯಲ್ಲಿ ಜನಿಸಿದ ಪೂಜ್ಯ ಶ್ರೀ ವಿಶ್ವಾರಾಧ್ಯಸ್ವಾಮಿಗಳು ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಮಠದ ಧಾರ್ಮಿಕಕಾರ್ಯಗಳನ್ನು ಮುನ್ನಡೆಸುತ್ತಿದ್ದಾರೆ ಹಾಗೂ ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆಯೋಜನೆ ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದು ಭಕ್ತರ ಸಲಹೆ ಸಹಕಾರಗಳೊಂದಿಗೆಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶ್ರಾವಣ ಮಾಸದಲ್ಲಿಪ್ರತಿನಿತ್ಯ ರುದ್ರಾಭಿಷೇಕ ಹಾಗೂ ಮಾರ್ಗಶಿರ ಮಾಸ ಶುಕ್ಲಪಕ್ಷದ ಷಷ್ಠಿಗೆ ಶ್ರೀ ಹಿರಿಯಗುರುಗಳ ಪುಣ್ಯಾರಾzs Àನೆ ಮಹೋತ ್ಸವಗಳು ಆಯೋಜನೆಗೊಂಡು ¨s Àಕ ್ತರಸಹಕಾರದೊಂದಿಗೆ ನಡೆಯುತ್ತಿವೆ.

Swamiji

Swamiji Name :
ಪೂಜ್ಯ ಶ್ರೀ ವಿಶ್ವಾರಾಧ್ಯ ಸ್ವಾಮಿಗಳು
Date of Birth :
13-01-1978
Place :
ಅಥಣಿ, ಬೆಳಗಾವಿ ಜಿಲ್ಲೆ
Photo :

Programs

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ
ಮಾರ್ಘಶಿರ ಮಾಸ ಶುಕ್ಲಪಕ್ಷದ ಷಷ್ಠಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Institutions

ಕಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಉಜ್ಜೇಶ್ವರ ಸಂಸ್ಥಾನ ಹಿರೇಮಠ
ಪಾಚ್ಚಾಪುರ, ಕುಂದರಗಿ ಪೋ.-591122
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಅಂಕಲಗಿ - 12 ಕಿ.ಮೀ
ಕಾಕ್ - 25 ಕಿ.ಮೀ
ಹುಕ್ಕೇರಿ - 30 ಕಿ.ಮೀ
ಬೆಳಗಾವಿ - 39 ಕಿ.ಮೀ

Statistic

1 Views
0 Rating
0 Favorite
0 Share
error: Content is protected !!