ಬಾಗಲಕೋಟೆ ಜಿಲ್ಲೆ ಮುದೋಳ ತಾಲ್ಲೂಕಿನ ಇಂಗಳಗಿ ಗ್ರಾಮವು ತಾಲ್ಲೂಕುಕೇಂದ್ರದಿಂದ 9 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಷ.ಬ್ರ. ಉದ್ದೇಶಪ್ಪನವರಿಂದಸ್ಥಾಪಿತಗೊಂಡಿರುವ ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾದ ಶ್ರೀ ಉದ್ದೇಶಪ್ಪನವರಹಿರೇಮಠವು ಅಸ್ತಿತ್ವದಲ್ಲಿದ್ದು ಹೆಚ್ಚು ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಭಕ್ತರನ್ನುಶ್ರೀಮಠಕ್ಕೆ ಸೆಳೆಯುತ್ತಿದೆ.ಕರ್ತೃಗುರುಗಳಾದ ಶ್ರೀ ಉದ್ದೇಶಪ್ಪನವರು ಮಹಾಮಹಿಮ ಪುರಷರಾಗಿದ್ದುತಮ್ಮ ಅನುಷ್ಠಾನಗಳಿಂದ, ಧಾರ್ಮಿಕ ಆಚರಣೆಗಳಿಂದ ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡಿ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಿದ್ದಾರೆ. ಆದರೆನಂತರ ಬಂದಿರಬಹುದಾದ ಯಾವುದೇ ಗುರುಗಳ ಬಗ್ಗೆ ಹೆಚ್ಚಿನ ಮಾಹಿತಿಗಳುದೊರೆಯುವುದಿಲ್ಲವಾದ್ದರಿಂದ ಶ್ರೀಮಠದ ಇತಿಹಾಸವನ್ನು ಸೂಕ್ತವಾಗಿ ದಾಖಲಿಸಲುಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ ಶ್ರೀಮಠವನ್ನು ಕರ್ತೃಗುರುಗಳ ಹೆಸರಿನಿಂದಲೇಗುರುತಿಸಲಾಗುತ್ತಿದ್ದು ಶ್ರೀಮಠಕ್ಕೆ ಶ್ರೀ ಉದ್ದೇಶಪ್ಪನವರ ಹಿರೇಮಠವೆಂದು ಕರೆಯಲಾಗುತ್ತಿದೆ.ಶ್ರೀಮಠವು ಪುರಾತನ ಕಾಲದ್ದೆಂದು ಹೇಳಲಾಗುತ್ತಿದ್ದರೂ ಶ್ರೀಮಠದಲ್ಲಿ ಅದಕ್ಕೆಸಂಬಂಧಿಸಿದಂತೆ ಯಾವುದೇ ಮಾಹಿತಿಗಳಿಲ್ಲ. ಬಹುಶಃ ಶ್ರೀಮಠವು ಬಹುಕಾಲ ಖಾಲಿಉಳಿದಿರುವುದರಿಂದ ಶ್ರೀಮಠವು ಜೀರ್ಣಗೊಂಡಿತ್ತೆಂದು ತಿಳಿದುಬರುತ್ತದೆ. ಬಹುಸಮಯದನಂತರ ಶ್ರೀಮಠಕ್ಕೆ ಬಂದು ನೆಲೆಸುವ ಈಗಿನ ಶ್ರೀಗಳಾದ ಪೂಜ್ಯ ಶ್ರೀ ನಿಜಗುಣ ಸ್ವಾಮಿಗಳುಶ್ರೀಮಠವನ್ನು ಭಕ್ತರ ಸಹಕಾರದೊಂದಿಗೆ ಹಾಗೂ ತಮ್ಮ ಪುರಾಣ ಪ್ರವಚನ ಕಲೆಯಿಂದಜೀರ್ಣಾಭಿವೃದ್ಧಿ ಗೊಳಿಸಿದ್ದು ತಿಳಿದುಬರುತ್ತದೆ.ಶ್ರೀಗಳು ತಮ್ಮ ಮಠದ ಹಿನ್ನೆಲೆಯ ಬಗ್ಗೆ ಹಾಗೂ ಗುರು ಪರಂಪರೆಯ ಬಗ್ಗೆಸಂಶೋಧನೆ ನಡೆಸುತ್ತಿದ್ದು ಶೀಘ್ರದಲ್ಲಿಯೇ ಅದನ್ನು ಸಾಧಿಸುವ ಪ್ರಯತ್ನದಲ್ಲಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ, ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನಹಾಗೂ ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣದಂತಹ ವಿವಿಧ ಕಾರ್ಯಕ್ರಮಗಳನ್ನುಹಮ್ಮಿಕೊಂಡು ಆ ಮೂಲಕ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುತ್ತಿದ್ದಾರೆ.
Swamiji
Swamiji Name :
ಪೂಜ್ಯ ಶ್ರೀ ನಿಜಗುಣ ಸ್ವಾಮಿಗಳು
Date of Birth :
11-5-1948
Place :
ವಿಜಯಪುರ, ವಿಜಯಪುರ ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಹಾಗೂ ವಿಶೇಷ ಪೂಜೆ.
ದಸರಾದಲ್ಲಿ 9 ದಿನಗಳ ಕಾಲ ಶ್ರೀದೇವಿ ಪುರಾಣ ಪಾರಾಯಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.