Shree Tengina Matha / Tekina Matha

Shree Tengina Matha / Tekina Matha

ಶ್ರೀ ಟೆಂಗಿನ ಮಠ / ಟೀಕಿನ ಮಠ

Average Reviews

Description

ಶ್ರೀ ಟೆಂಗಿನ ಮಠ / ಟೀಕಿನ ಮಠ

ಕರ್ತೃ- ಶ್ರೀ ಮ.ನಿ.ಪ್ರ. ರಾಚೋಟಿ ಮಹಾಸ್ವಾಮಿಗಳು

ಬಾಗಲಕೋಟೆ ನಗರದ ಮಧ್ಯಬಾಗದಲ್ಲಿರುವ ಹೊಸಪೇಟೆ ಬಡಾವಣೆಯಲ್ಲಿಸುಮಾರು 275 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಟೆಂಗಿನ ಮಠ ಮತ್ತು ಶ್ರೀ ಟೀಕಿನಮಠಗಳೆಂಬ ಅವಳಿ ಮಠಗಳು ಅಸ್ತಿತ್ವದಲ್ಲಿದ್ದು ಉಭಯ ಮಠಗಳು ಒಂದೇ ಆಡಳಿತಕ್ಕೆಒಳಪಟ್ಟು ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿವೆ.ಉಭಯ ಮಠಗಳ ಕರ್ತೃಗುರುಗಳು ಹಾಗೂ ಇತಿಹಾಸದ ಬಗ್ಗೆ ನಿಖರವಾದಮಾಹಿತಿಗಳಿಲ್ಲ, ಹಾಗೂ ಶ್ರೀಮಠಗಳ ಗುರು ಪರಂಪರೆಯ ಬಗ್ಗೆಯೂ ಸ್ಪಷ್ಟ ಮಾಹಿತಿಗಳುಲಭ್ಯವಿ¯್ಲ, ಆದರೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಶ್ರೀ ಟೆಂಗಿನ ಮಠದ ಕರ್ತೃಗುರುಗಳುಶ್ರೀ ರಾಚೋಟಿ ಸ್ವಾಮಿಗಳು ಮತ್ತು ಶ್ರೀ ಟೀಕಿನ ಮಠದ ಕರ್ತೃಗುರುಗಳು ಶ್ರೀ ಚನ್ನವೀರಸ್ವಾಮಿಗಳೆಂದು ಹೇಳಬಹುದು. ಉಭಯ ಮಠಗಳು ಅಕ್ಕಪಕ್ಕದಲ್ಲಿಯೇ ಸ್ಥಾಪಿಸಲ್ಪಟ್ಟಿದ್ದು ಈ ಮಠಗಳ ಆಚರಣೆಗಳು ಹಾಗೂ ಪದ್ಧತಿಗಳು ಒಂದೇ ತೆರನಾಗಿದ್ದವು. ಶ್ರೀ ಟೆಂಗಿನ ಮಠದ 4ನೇ ಶ್ರೀಗಳಾದ ಶ್ರೀರಾಚೋಟಿ ಸ್ವಾಮಿಗಳು ಮುಂಡರಗಿಯ ಶ್ರೀ ಅನ್ನದಾನೇಶ್ವರ ಮಠಕ್ಕೆ ಪಟ್ಟ ವಹಿಸಿಕೊಂಡಾಗಶ್ರೀಗಳು ಶ್ರೀ ಟೆಂಗಿನ ಮಠದ ಜವಾಬ್ದಾರಿಯನ್ನು ಶ್ರೀ ಟೀಕಿನ ಮಠದ 4ನೇ ಗುರುಗಳಾಗಿದ್ದಶ್ರೀ ರೇವಣಸಿದ್ದ ಸ್ವಾಮಿಗಳಿಗೆ ವಹಿಸಿದರು. ಶ್ರೀ ರೇವಣಸಿದ್ದ ಸ್ವಾಮಿಗಳು ಟೆಂಗಿನ ಮಠಕ್ಕೆತಮ್ಮ ಕರಕಮಲ ಸಂಜಾತರಾಗಿದ್ದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳನ್ನು ಅಧಿಕಾರಕ್ಕೆ ತಂದರು.ನಂತರ ಶ್ರೀ ರೇವಣಸಿದ್ದ ಸ್ವಾಮಿಗಳು ತಮ್ಮ ಕಾಲಾನಂತರ ಎರಡೂ ಮಠಗಳನ್ನುಶ್ರೀ ಮಲ್ಲಿಕಾರ್ಜುನ ಸ್ವಾಮಿಗಳೇ ನೋಡಿಕೊಳ್ಳತಕ್ಕದ್ದು ಹಾಗೂ ಮುಂದೆ ಕೂಡ ಇದೇರೀತಿಯಲ್ಲಿ ಮುಂದುವರಿಯಬೇಕೆಂದು ಅಭಿಲಾಷೆ ಪಟ್ಟರು. ಇದಕ್ಕೆ ಭಕ್ತರೂ ಸಹ ಸಂತೋಷದಿಂದಲೇ ಒಪ್ಪಿದ್ದು ಇತಿಹಾಸ. ಹೀಗೆ ಒಂದಾದ ಪರಂಪರೆಯಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿಗಳಿಂದ ಮುಂದುವರೆದ ಪರಂಪರೆ ಇಂದಿಗೂ ಮುಂದುವರೆದುಕೊಂಡು ಬಂದಿದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ರೇವಣಸಿದ್ದ ಸ್ವಾಮಿಗಳು ಶಿವಯೋಗಮಂದಿರದಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ 1994ರಲ್ಲಿ ಪಟ್ಟಾಧಿಕಾರಗೊಂಡರು. ಗುರುಗಳು ಅಧಿಕಾರಕ್ಕೆ ಬಂದ ಮೇಲೆ ಎರಡೂ ಮಠಗಳನ್ನು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸಿ ಧಾರ್ಮಿಕ ಆಚರಣೆಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ರೇವಣಸಿದ್ಧ ಮಹಾಸ್ವಾಮಿಗಳು
Date of Birth :
1-12-1955
Place :
ಗುಳೇದಗುಡ್ಡ, ಬಾದಾಮಿ ತಾ||
Pattadikara :
14-4-1994
Photo :

Programs

ಪ್ರತಿ ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ಎರಡನೇ ಸೋಮವಾರ
ಐಯ್ಯಾಚಾರ, ಲಿಂಗದೀಕ್ಷೆ ಹಾಗೂ ರುದ್ರಾಕ್ಷಿ ಧಾರu
(ಪ್ರಸ್ತುತ ವರ್ಷದಿಂದ ಪ್ರಾರಂಭ).
ಪುಷ್ಯ ಬಹುಳ ಏಕಾದಶಿಯಂದು
ಲಿಂ. ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳ ಪುಣ್ಯಾರಾಧನೆ
(10ದಿನ ಪುರಾಣ ಪ್ರವಚನ, ಧಾರ್ಮಿಕ ಕಾರ್ಯಕ್ರಮಗಳು)

Photos

Full Address Kannada

ಶ್ರೀ ಟೆಂಗಿನ ಮಠ / ಟೀಕಿನ ಮಠ
ಹುಂಡೇಕಾರ ಓಣಿ,
ಹೊಸಪೇಟೆ ಬಡಾವಣೆ ಬಾಗಲಕೋಟೆ - 587 101

Map

Near by Places

ಬೀಳಗಿ - 30 ಕಿ.ಮೀ.
ಬಾದಾಮಿ - 38 ಕಿ.ಮೀ.
ಹುನಗುಂದ - 46 ಕಿ.ಮೀ.
ಮುಧೋಳಗಿ - 70 ಕಿ.ಮೀ.

Statistic

10 Views
0 Rating
0 Favorite
0 Share
error: Content is protected !!