ಬಳ್ಳಾರಿ ನಗರದ ಹೊರವಲಯದಲ್ಲಿರುವ ಅಲ್ಲೀಪುರದ ಬಳಿ ಶ್ರೀ ತಾತನ ಮಠವುಇದ್ದು ಮಹಾ ಶರಣ ಶ್ರೀ ಸದ್ಗುರು ಮಹಾದೇವ ತಾತನವರ ಪುಣ್ಯಭೂಮಿಯಾಗಿದೆ.ಶ್ರೀಮಠದ ಕರ್ತೃ ಗದ್ದುಗೆಯು ಸದಾ ಭಕ್ತರ ಕಷ್ಟಗಳನ್ನು ಬಗೆಹರಿಸುವ, ಅವರಸಮಸ್ಯೆಗಳನ್ನು ಪರಿಹರಿಸುವ ಬಳ್ಳಾರಿಯ ಪ್ರಮುಖ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ.ಮೂಲತಃ ಶ್ರೀ ತಾತನವರು ಮೈಸೂರು ಜಿಲ್ಲೆಯವರು ಎಂದು ತಿಳಿದುಬರುತ್ತದೆ.ಶ್ರೀ ತಾತನವರು ಬಾಲವಿರಾಗಿಗಳಾಗಿದ್ದು ಸಣ್ಣವಯಸ್ಸಿನಲ್ಲಿಯೇ ತಮ್ಮವರನ್ನು ಕಳೆದುಕೊಂಡು ಸಂಚಾರ ಹೊರಟವರು. ಹಾಗೆ ಹೊರಟು ಧಾರ್ಮಿಕ ಕ್ಷೇತ್ರಗಳನ್ನು ದರ್ಶಿಸುತ್ತಾಸಾಧುಸಂತರ ಆಶೀರ್ವಾದ ಪಡೆಯುತ್ತಾ ಮುಂದೆ ಮೈಸೂರು ಸೀಮೆಗೆ ವಾಪಸ್ಸಾದರೆಂದು,ಮೈಸೂರು ರಾಜರ ಆಶ್ರಯ ಪಡೆದು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿದರೆಂದು ತಿಳಿದುಬರುತ್ತದೆ. ಅಲ್ಲಿಂದ ಮುಂದೆ ಮುಂಬಯಿ ಪ್ರಾಂತ್ಯ ಹಾಗೂ ಆಂಧ್ರದ ನಗದೂರಿನಲ್ಲಿ ಕೆಲವುದಿನ ಅನುಷ್ಠಾನಗೊಂಡು ಪ್ರಸಿದ್ಧಿ ಪಡೆದು ಕೊನೆಯಲ್ಲಿ ಅಲ್ಲೀಪುರಕ್ಕೆ ಬಂದವರಾಗಿದ್ದಾರೆ.ತಾತನವರು ಕರ್ನಾಟಕದಾದ್ಯಂತ ತಮ್ಮ ಅನುಷ್ಠಾನ ಬಲದಿಂದ ಪ್ರಸಿದ್ಧಿಪಡೆದಿದ್ದರು. ಸಮಕಾಲೀನ ಮಹಾಪುರುಷರು ತಾತನವರ ದರ್ಶನಕ್ಕೆ ಬರುತ್ತಿದ್ದರು.ಇಂತಹ ಮಹಾಮಹಿಮ ಪುರುಷರು ಕೊನೆ ದಿನಗಳಲ್ಲಿ ಮೈಸೂರು ಜಿಲ್ಲೆಯ ಶಿವಪುರದಲ್ಲಿನೆಲೆನಿಂತು 1987ರ ಡಿಸೆಂಬರ್ 31ರಂದು ಲಿಂಗದೊಳಗೆ ಲೀನರಾದರು. ಭಕ್ತರ ಪ್ರಕಾರತಾತನವರು ಲಿಂಗೈಕ್ಯರಾಗುವ ವೇಳೆಗೆ ಅವರಿಗೆ 200 ವರ್ಷಕ್ಕೂ ಅಧಿಕ ವಯಸ್ಸಾಗಿತ್ತುಎಂದು ಹೇಳಲಾಗುತ್ತದೆ.ಶ್ರೀ ತಾತನವರ ಭವ್ಯವಾದ ಸಮಾಧಿ ಗದ್ದುಗೆಯು ಶಿವಪುರದಲ್ಲಿದ್ದುತೋರುಗದ್ದುಗೆಗಳು ಅಲ್ಲೀಪುರ, ಆದವಾನಿ, ನಗದೂರು, ಶಿವಕಂಚಿ ಮಠ, ಧಾರವಾಡಮುಂತಾದ ಕಡೆಗಳಲ್ಲಿದ್ದು, ದಿನನಿತ್ಯ ಭಕ್ತರ ಸಮಸ್ಯೆಗಳಿಗೆ ಪರಿಹಾರವಾಗಿದ್ದಾರೆ. ಅಲ್ಲೀಪುರಶ್ರೀ ತಾತನ ಮಠವು ಭವ್ಯವಾಗಿ ನಿರ್ಮಿತಗೊಂಡಿದ್ದು ಪ್ರತಿನಿತ್ಯ ಭಕ್ತರು ದರ್ಶನಪಡೆಯುತ್ತಾರೆ. ಅಮವಾಸ್ಯೆಗಳಲ್ಲಿ ಸಾವಿರಾರು ಭಕ್ತರು ಬಂದು ದರ್ಶನ ಪಡೆದುಪುನೀತರಾಗುತ್ತಾರೆ. ಈಗ ಶ್ರೀ ಸದ್ಗುರು ತಾತನ ಮಠದ ಟ್ರಸ್ಟ್ ಕಮಿಟಿಯು ಅಸ್ತಿತ್ವದಲ್ಲಿದೆ.
Swamiji
Swamiji Name :
ಶ್ರೀ ಶ್ರೀ ಶ್ರೀ ಸದ್ಗುರು ಮಹಾದೇವ ತಾತನವರು
Photo :
Programs
ಪ್ರತಿ ಅಮವಾಸ್ಯೆಯಂದು ವಿಶೇಷ ಪೂಜೆ,
ಸಾವಿರಾರು ಭಕ್ತರಿಗೆ ಮಹಾಪ್ರಸಾದ.
ಪುಷ್ಯ ಮಾಸ ಶುದ್ಧ ಏಕಾದಶಿಗೆ ಶ್ರೀಮಠದ ಜಾತ್ರೆ.
Institutions
ಸಂಸ್ಕøತ, ವೈದಿಕ, ಜ್ಯೋತಿಷ್ಯ ಪಾಠಶಾಲೆ.
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಸದ್ಗುರು ಮಹಾದೇವ ತಾತನವರ ಮಠ (ಟ್ರಸ್ಟ್)
ಜ್ಞಾನ ರಂಭಾಪುರಿ ಶಿವಕ್ಷೇತ್ರ, ಸುವರ್ಣಘಾಟ್,
ಮೂಲಮಠ ಅಲ್ಲೀಪುರ, ಬಳ್ಳಾರಿ -583 104