ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಹಂದಿಗುಂದ ಗ್ರಾಮದಲ್ಲಿ ಸುಮಾರು200 ವರ್ಷಗಳ ಹಿಂದೆ ಶ್ರೀ ಸಿದ್ದೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀಸಿದ್ದೇಶ್ವರ ಮಠವು ತನ್ನ ಕರ್ತೃತ್ವ ಶಕ್ತಿಯಿಂದಾಗಿ ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳಿಂದಾಗಿ ಈ ಭಾಗದ ಜನರನ್ನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುತ್ತಿದೆ.ಕರ್ತೃಗುರುಗಳಾದ ಪೂಜ್ಯ ಶ್ರೀ ಸಿದೆ ್ದೀಶ ್ವರ ಶಿವಯೋಗಿಗಳುಲೋಕಸಂಚಾರದಲ್ಲಿದ್ದ ಸಮಯದಲ್ಲಿ ಹಂದಿಗುಂದ ಗ್ರಾಮದ ಪ್ರಶಾಂತ ಸ್ಥಳದಲ್ಲಿದೀರ್ಘಾನುಷ್ಠಾನಕ್ಕೆ ಕುಳಿತಿದ್ದರು. ಇವರ ದೀರ್ಘಾನುಷ್ಠಾನದಿಂದ ಪ್ರಭಾವಿತರಾಗಿದ್ದಗ್ರಾಮದ ಜನರು ಗುರುಗಳಿಗೆ ಭಕ್ತರಾಗಿ ಅವರಿಗೆ ಸಹಾಯ ಮಾಡುತ್ತಾ ಧನ್ಯರಾಗುತ್ತಿದ್ದರು.ಹೀಗೆ ಶ್ರೀ ಸಿದ್ದೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡ ಶ್ರೀಮಠವು ಇಲ್ಲಿಯವರೆಗೂಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು ಪರಂಪರೆಯ 4ನೇಗುರುಗಳಾಗಿದ್ದು 1960ರ ಆಗಸ್ಟ್ 15ರಲ್ಲಿ ಮಹಾರಾಷ್ಟ್ರದ ಮುತ್ನಾಳ ಗ್ರಾಮದಲ್ಲಿಜನಿಸಿದವರಾಗಿ, ಸಣ್ಣ ವಯಸ್ಸಿನಲ್ಲೇ ಆಧ್ಯಾತ್ಮಿಕತೆಯ ಒಲವು ಹೊಂದಿದ್ದವರು. ಶ್ರೀಗಳುಹುಬ್ಬಳ್ಳಿ ಹಾಗೂ ಶಿವಯೋಗ ಮಂದಿರದಲ್ಲಿ ಸಂಸ್ಕøತ ಹಾಗೂ ವೇದಾಧ್ಯಯನವನ್ನುಮಾಡಿದ್ದು ನಂತರದಲ್ಲಿ 1998ರ ಏಪ್ರಿಲ್ 18ರಂದು ಶ್ರೀಮಠದ ಪೀಠಾಧಿಪತಿಗಳಾಗಿಅಧಿಕಾರ ಸ್ವೀಕರಿಸಿದರು.ಶ್ರೀಗಳು ಮಠಕ್ಕೆ ಬಂದಾಗ ಶ್ರೀಮಠದ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಮಠದಕಟ್ಟಡವು ಶಿಥಿಲಗೊಂಡಿತ್ತು. ಶ್ರೀಗಳು ಶ್ರೀಮಠದ ಜೀರ್ಣಾಭಿವೃದ್ಧಿಯನ್ನು ಮಾಡಿ ಧಾರ್ಮಿಕಕಾರ್ಯಗಳು ನಡೆಯುವಂತೆ ಮಾಡಿದ್ದಾರೆ. ಶ್ರೀಗಳು ಅಧಿಕಾರ ವಹಿಸಿಕೊಂಡು ನಂತರ ಪ್ರತಿವರ್ಷ ಮಾಘ ಶುದ್ಧ ತ್ರಯೋದಶಿಯಂದು ಶ್ರೀಮಠದ ರಥೋತ್ಸವವನ್ನು ನಡೆಸುತ್ತಿದ್ದು ಆಸಮಯದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ ಹಾಗೂಶ್ರಾವಣ ಮಾಸದಲ್ಲಿ ನಿತ್ಯರುದ್ರಾಭಿಷೇಕ, ಶಿವಭಜನೆ, ಪುರಾಣ ಪ್ರವಚನಗಳನ್ನುನಡೆಸಲಾಗುತ್ತಿದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಿವಾನಂದ ಸ್ವಾಮಿಗಳು
Date of Birth :
15-08-1960
Place :
ಮುತ್ನಾಳ, ಗಾಡಿಂಗ್ಲಜ್ ತಾ|| (ಮಹಾರಾಷ್ಟ್ರ)
Pattadikara :
18-04-1998
Photo :
Programs
ಮಾಘ ಶುದ್ಧ ತ್ರಯೋದಶಿಯಂದು ಶ್ರೀ ಮಠದ ರಥೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಶಿವ ಭಜನೆ, ಪುರಾಣ ಪ್ರವಚನ, ವಿಶೇಷ ಪೂಜೆ
ಶಿವರಾತ್ರಿಗೆ ಜಾಗರಣೆ
Institutions
ಸಂಸ್ಕøತ ವೇದ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
Photos
Full Address Kannada
ಶ್ರೀ ಸಿದ್ಧೇಶ್ವರ ಮಠ
ಹಂದಿಗುಂದ - 591 235
ರಾಯಭಾಗ ತಾ||, ಬೆಳಗಾವಿ ಜಿಲ್ಲೆ