Shree Siddarameshwara Hirematha, Kerutagi

Shree Siddarameshwara Hirematha, Kerutagi Claimed

ಶ್ರೀ ಸಿದ್ದರಾಮೇಶ್ವರ ಹಿರೇಮಠ, ಕೆರುಟಗಿ

Average Reviews

Description

ಶ್ರೀ ಸಿದ್ದರಾಮೇಶ್ವರ ಹಿರೇಮಠ, ಕೆರುಟಗಿ

ಕರ್ತೃ – ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು

ವಿಜಯಪುರ ಜಿಲ್ಲೆಯ ಕೆರುಟಗಿ ಗ್ರಾಮದಲ್ಲಿ ಇತ್ತೀಚಿನ ಶತಮಾನಗಳಲ್ಲಿ ಶ್ರೀಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಸಿದ್ಧರಾಮೇಶ್ವರಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಜನರಲ್ಲಿಧಾರ್ಮಿಕ ಪ್ರಜ್ಞೆ ಮೂಡಿಸುತ್ತಿದೆ. ಶ್ರೀಮಠವು ಶ್ರೀ ಉಜ್ಜಯಿನಿ ಪೀಠದ ಶಾಖಾ ಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ˉÉೂೀಕಸಂಚಾರ ಕೈಗೊಂಡು ಅಲ್ಲಲ್ಲಿ ಅನುಷ್ಠಾನಗೊಳ್ಳುತ್ತಾ ಕೊಪ್ಪಳಕ್ಕೆ ಆಗಮಿಸಿ ಅಲ್ಲಿ ಕೆಲವು ದಿನನೆˉÉಸಿ ನಂತರ ಕೆರುಟಗಿ ಗ್ರಾಮಕ್ಕೆ ಆಗಮಿಸುತ್ತಾರೆ. ಕೆರುಟಗಿಗೆ ಆಗಮಿಸಿ ಅನುಷ್ಠಾನಗೊಂಡಗುರುಗಳು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ಸೆಳೆದು ಶ್ರೀಮಠವನ್ನುಸ್ಥಾಪಿಸಿ ಧಾರ್ಮಿಕ ಕಾರ್ಯಗಳನ್ನು ಮುಂದುವರೆಸಿದ್ದಾರೆ.ಕರ್ತೃಗುರುಗಳ ನಂತರ ಶ್ರೀ ಷ.ಬ್ರ. ಲಿಂಗಯ್ಯ ಶಿವಾಚಾರ್ಯ ಸ್ವಾಮಿಗಳುಶ್ರೀಮಠವನ್ನು ಅಭಿವೃದ್ಧಿಪಡಿಸಿ, ಶ್ರೀ ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಾಧಿಕಾರಿಗಳನ್ನಾಗಿ ಮಾಡಿ ಲಿಂಗೈಕ್ಯರಾಗಿದ್ದಾರೆ. ಗುರುಗಳ ಆಶೀರ್ವಾದ ಬಲದಿಂದ ಶ್ರೀಮಠದಪಟ್ಟಾಧಿಕಾರವನ್ನು ವಹಿಸಿಕೊಂಡ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳುಸಂಸ್ಕøತ ವೇದಾಧ್ಯಯನ ಮಾಡಿ ಪಾಂಡಿತ್ಯವನ್ನು ಸಂಪಾದಿಸಿಕೊಂಡಿದ್ದರು.ಶ್ರೀಗಳು ಶ್ರೀಮಠದ ಅಧಿಕಾರವನ್ನು ವಹಿಸಿಕೊಂಡು ವೀರಶೈವ ಧರ್ಮದಆಚರಣೆಗಳನ್ನು ಕಾರ್ಯರೂಪಕ್ಕೆ ತರುವಂತೆ ಮಾಡಿ ಧರ್ಮವನ್ನು ಬೆಳೆಸಿದ್ದಾರೆ. ಶ್ರೀಗಳುತಮ್ಮ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಾಗೂ ತಮ್ಮ ಅನುಷ್ಠಾನ ಬಲದಿಂದಶ್ರೀಮಠಕ್ಕೆ ಭಕ್ತರನ್ನು ಸೆಳೆದು ಅವರಿಗೆ ಸನ್ಮಾರ್ಗ ತೋರಿ 1970 ರಲ್ಲಿ ಲಿಂಗೈಕ್ಯರಾದರು. ಇವರಪ್ರಭಾವದಿಂದ ಶ್ರೀಮಠಕ್ಕೆ ಶ್ರೀ ಸಿದ್ದರಾಮೇಶ್ವರ ಹಿರೇಮಠವೆಂದು ಹೆಸರಾಗಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಸ್ವಾಮಿಗಳು ಶಿವಯೋಗಮಂದಿರ ಹಾಗೂ ಹುಬ್ಬಳ್ಳಿಗಳಲ್ಲಿ ಸಂಸ್ಕøತ ವೇದಾಧ್ಯಯನ ಮಾಡಿದ್ದು, ಶ್ರೀಮಠದ ಅಧಿಕಾರವಹಿಸಿಕೊಂಡ ನಂತರ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುತ್ತಿದ್ದಾರೆ.ಹಾಗೂ ತಮ್ಮ ಧರ್ಮೋಪದೇಶಗಳಿಂದ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಶಿವಬಸವ ಶಿವಾಚಾರ್ಯ ಸ್ವಾಮಿಗಳು
Date of Birth :
10-12-1956
Place :
ಕೆರುಟಗಿ, ಸಿಂಧಗಿ ತಾ||
Pattadikara :
1980
Photo :

Programs

ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಮತ್ತು ಭಜನೆ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ. ಹಾಗೂ ಪುರಾಣ ಪ್ರವಚನ.
ಕಾರ್ತೀಕ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ.

Photos

Full Address Kannada

ಶ್ರೀ ಸಿದ್ದರಾಮೇಶ್ವರ ಹಿರೇಮಠ
ಕೆರುಟಗಿ - 586 118
ಸಿಂಧಗಿ ತಾ||, ವಿಜಯಪುರ ಜಿ||

Map

Near by Places

ದೇವರಹಿಪ್ಪರಗಿ - 30 ಕಿ.ಮೀ.
ಸಿಂಧಗಿ - 23 ಕಿ.ಮೀ.
ವಿಜಯಪುರ - 70 ಕಿ.ಮೀ.

Statistic

1 Views
0 Rating
0 Favorite
0 Share
error: Content is protected !!