ರಾಯಚೂರು ಜಿˉÉ್ಲ ಲಿಂಗಸೂಗೂರು ತಾಲ್ಲೂಕಿನ ಯರಡೋಣಾ ಕ್ರಾಸ್,ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ. ದೂರದಲ್ಲಿದ್ದು ಇಲ್ಲಿ ತೀರಾ ಇತ್ತೀಚೆಗೆ 2010ರಫೆಬ್ರªರಿ 11 ರಂದು ಸ್ಥಾಪಿತಗೊಂಡಿರುವ ಶ್ರೀ ಸಿದ್ದರಾಮೇಶ್ವರ ಗುರುಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಬಹುಬೇಗನೆ ಪ್ರಚಲಿತಕ್ಕೆಬಂದಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ.ಶ್ರೀಮಠವನ್ನು ಇಲ್ಲಿ ಸ್ಥಾಪಿಸಿದವರು ಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳು. ಶ್ರೀಗಳು 1992ರ ಮೇ 22 ರಲ್ಲಿ ಇಲ್ಲಿಗೆ ಸಮೀಪದ ಹಟ್ಟಿ ಗೋˉï್ಡ ಮೈನ್ಸ್ ಪ್ರದೇಶದಲ್ಲಿಮುಗುಳಕೋಡದ ಶ್ರೀ ಷ.ಬ್ರ. ಸಿದ್ಧರಾಮೇಶ್ವರ ಶಿವಯೋಗಿಗಳ ಕೃಪಾಶೀರ್ವಾದದಿಂದಜನಿಸಿದವರಾಗಿದ್ದು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿ ಶಿವಮೊಗ್ಗ ಜಿˉÉ್ಲಸಾಗರದ ಸಮೀಪದ ವೀರಾಪುರಕ್ಕೆ ತೆರಳಿ ಅಲ್ಲಿನ ಹಿರೇಮಠದಲ್ಲಿ ಆಧ್ಯಾತ್ಮ ಸಾಧನೆಕೈಗೊಂಡು ಗುರುಗಳ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ.ಶ್ರೀಗಳು ಐದು ವರ್ಷಗಳ ಹಿಂದೆ ಯರಡೋಣ ಕ್ರಾಸ್ಗೆ ಆಗಮಿಸಿ ಅನುಷ್ಠಾನಕೈಗೊಂಡು ಭಕ್ತರ ಸಹಕಾರದೊಂದಿಗೆ ಶ್ರೀ ಸಿದ್ಧರಾಮೇಶ್ವರ ಗುರುಮಠವನ್ನು ಸ್ಥಾಪಿಸಿದ್ದಾರೆ.ಶ್ರೀಗಳಿಗೆ ಆಧ್ಯಾತ್ಮದ ಗುರುಗಳಾಗಿ ಹಾಗೂ ದೀಕ್ಷಾ ಗುರುಗಳಾಗಿ ದೀಕ್ಷೆ ನೀಡಿದವರುಮುಗುಳಕೋಡದ ಶ್ರೀ ಷ.ಬ್ರ. ಸಿದ್ದರಾಮೇಶ್ವರ ಶಿವಯೋಗಿಗಳು. ಹಾಗಾಗಿ ಶ್ರೀಗಳುಶ್ರೀಮಠಕ್ಕೆ ತಮ್ಮ ಗುರುಗಳ ಹೆಸರನ್ನೇ ಇಟ್ಟುಕೊಂಡು ಗುರುಭಕ್ತಿ ಮೆರೆದಿದ್ದಾರೆ. ಶ್ರೀಗಳುಇನ್ನೂ ಯುವಕರಾಗಿದ್ದು ಹೆಚ್ಚು ಕ್ರಿಯಾಶೀಲತೆಯಿಂದ ಚಿಕ್ಕವಯಸ್ಸಿನಲ್ಲಿಯೇ ಆಧ್ಯಾತ್ಮಸಾಧನೆ ಮಾಡಿದ್ದು ಆ ಮೂಲಕ ಶ್ರೀಮಠಕ್ಕೆ ಭಕ್ತರನ್ನು ಸಂಪಾದಿಸಿಕೊಂಡು ಅವರಿಗೆ ಸೂಕ್ತಮಾರ್ಗದರ್ಶನ ನೀಡುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆ,ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ನವರಾತ್ರಿಯಲ್ಲಿ ಪುರಾಣ ಪ್ರವಚನ, ಧರ್ಮಸಭೆ ಹಾಗೂಪ್ರತಿವರ್ಷ ಮೇ 23ಕ್ಕೆ ಸಾಮೂಹಿಕ ವಿವಾಹಗಳೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ.
Swamiji
Swamiji Name :
ಪೂಜ್ಯ ಶ್ರೀ ಮುರುಘೇಂದ್ರ ಶಿವಯೋಗಿಗಳು
Date of Birth :
22-5-1992
Place :
ಹಟ್ಟಿ ಗೋˉï್ಡ ಮೈನ್ಸ್, ಲಿಂಗಸೂಗೂರು ತಾ||
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ. £ವ Àರಾತ್ರಿ ಉತ್ಸವ, ಪುರಾಣ, ಧರ್ಮಸಭೆ. ಮೇ 23ರಂದು ಧರ್ಮಸಭೆ, ಸಾಮೂಹಿಕ ವಿವಾಹಗಳು ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.