Shree Siddalingeshwara Swami Matha

Shree Siddalingeshwara Swami Matha Claimed

ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಮಠ

Average Reviews

Description

ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಮಠ

ಕರ್ತೃ – ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು

ತುಮಕೂರು ಜಿಲ್ಲಾ ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ ರಾಮೇನಹಳ್ಳಿಗ್ರಾಮದ ಮಧ್ಯಭಾಗದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಠವು ತನ್ನಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪ್ರಚಲಿತದಲ್ಲಿದೆ. 15ನೇಶತಮಾನದಲ್ಲಿ ಶ್ರೀ ಯಡೆಯೂರು ಸಿದ್ದಲಿಂಗೇಶ್ವರರ ಶಿಷ್ಯರಿಂದ ಶ್ರೀ ಮಠವುಸ್ಥಾಪಿತಗೊಂಡಿದೆಯೆಂದು ತಿಳಿದು ಬರುತ್ತದೆ.ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು ಧರ್ಮ ಪ್ರಸಾರಕ್ಕಾಗಿ ಸಂಚಾರಹೊರಟವರು. ಹೀಗೆ ಸಂಚರಿಸುತ್ತಾ ರಾಮೇನಹಳ್ಳಿ ಗ್ರಾಮಕ್ಕೆ ಆಗಮಿಸುವ ಶ್ರೀಗಳುಅನುಷ್ಠಾನಕ್ಕೆ ಕೂರುತ್ತಾರೆ. ಇಲ್ಲಿನ ಪರಿಸರ, ಭಕ್ತರ ಪ್ರೀತಿಗೆ ಮನಸೋತ ಶ್ರೀಗಳು ಕೆಲ ಕಾಲನೆಲೆನಿಂತು ಇಲ್ಲಿಯೇ ತಮ್ಮ ಸಮಾದಿ ಗದ್ದುಗೆಯಾಗಬೇಕೆಂದು ಕ್ರಿಯಾ ಗದ್ದುಗೆಯನ್ನುಸ್ಥಾಪಿಸಲು ಆದೇಶಿಸುತ್ತಾರೆ. ಆದರೆ ನಂತರ ಶ್ರೀಗಳು ಈ ಸ್ಥಳವನ್ನು ತೊರೆದು ಸಂಚಾರಹೊರಟಿದ್ದು ಇವರ ಕ್ರಿಯಾ ಗದ್ದುಗೆಯ ಸ್ಥಳದಲ್ಲಿಯೇ ಶ್ರೀ ಮಠವು ಸ್ಥಾಪನೆಗೊಂಡಿತುಎಂಬ ಕಥೆಯು ಕೇಳಿಬರುತ್ತದೆ ಹಾಗೂ ಇಂದಿಗೂ ಶ್ರೀ ಮಠದ ಭಕ್ತರು ಶ್ರೀಗಳಿಗೆ ಗಟ್ಟಿಸ್ವಾಮಿಗಳೆಂದೇ ಕರೆಯುತ್ತಾ ಬಂದಿದ್ದಾರೆ.ಇದಾದ ನಂತರ ಹಲವಾರು ಶ್ರೀಗಳು ಶ್ರೀ ಮಠದ ಅಧಿಕಾರ ನಡೆಸಿದ್ದರಾದರೂಅವರುಗಳ ಬಗ್ಗೆ ತಿಳಿದು ಬರುವುದಿಲ್ಲ. ಶಿವಮೊಗ್ಗ ಕಡೆಯಿಂದ ಸಂಚಾರ ಬಂದ ಶ್ರೀ ಮ. ನಿ.ಪ್ರ. ಶಿವಯೋಗಿ ಪಂಚಾಕ್ಷರಿ ಸ್ವಾಮಿಗಳು ಶ್ರೀ ಮಠದಲ್ಲಿ ನೆಲೆನಿಂತು ಧಾರ್ಮಿಕಆಚರಣೆಗಳನ್ನು ನಡೆಸುತ್ತಾ ಧರ್ಮಜಾಗೃತಿ ಕಾರ್ಯ ಕೈಗೊಂಡಿದ್ದು ಶ್ರೀಗಳು 1971ರನವೆಂಬರ್ 26ರಂದು ಲಿಂಗದೊಳಗಾದರು. ಅಂದೇ ಶ್ರೀ ಮಠಕ್ಕೆ ಉತ್ತರಾಧಿಕಾರಿಗಳಾಗಿನೇಮಕಗೊಂಡವರು ಈಗಿನ ಶ್ರೀಗಳು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ.ಸ್ವ. ಶಿವಪಂಚಾಕ್ಷರಿ ಸ್ವಾಮಿಗಳು 1972ರಮಾರ್ಚ್ನಲ್ಲಿ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ರಥೋತ್ಸವದ ದಿವಸ ಶ್ರೀ ಮಠದಪಟ್ಟಾಧಿಕಾರ ಸ್ವೀಕರಿಸಿದ್ದು ಶ್ರೀ ಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ. ಶ್ರೀಗಳುಸಿದ್ದಗಂಗೆಯಲ್ಲಿ ವಿಧ್ಯಾಭ್ಯಾಸ ಮಾಡಿ, ಸಂಸ್ಕøತ, ವೇದ, ಆಗಮಗಳನ್ನು ಅಭ್ಯಸಿಸಿದವರು.ತಮ್ಮ ಉಪದೇಶಗಳಿಂದ ಭಕ್ತರನ್ನು ಸಂಘಟಿಸಿ ಅವರ ಸಹಕಾರದಿಂದ ಶ್ರೀ ಮಠ ಹಾಗೂಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರರತೋರುಗದ್ದುಗೆ ಹಾಗೂ ಮೂರ್ತಿ ಪ್ರತಿಷ್ಠಾಪಿಸಿ ನಿತ್ಯ ಪೂಜೆಗೆ ಒಳಪಡಿಸಲಾಗುತ್ತಿದೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಶಿವಪಂಚಾಕ್ಷರಿ ಸ್ವಾಮಿಗಳು
Date of Birth :
23-02-1953
Place :
ಎಲೆರಾಂಪುರ, ಕೊರಟಗೆರೆ ತಾ||
Pattadikara :
ಮಾರ್ಚ್ 1972
Photo :

Programs

ವಿಜಯದಶಮಿಯಲ್ಲಿ ಬನ್ನಿಪೂಜೆ ಪ್ರತಿ ಸೋಮವಾರ ವಿಶೇಷ ಕಾರ್ಯಕ್ರಮ ಚೈತ್ರ ಮಾಸದಲ್ಲಿ ಶ್ರೀ ಮಠದ ಜಾತ್ರೆ ಶ್ರಾವಣ ಮಾಸದಲ್ಲಿ ನಾಲ್ಕೂ ಸೋಮವಾರ ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ನಿತ್ಯ ವಿಶೇಷ ಪೂಜೆ ಹಾಗೂ ಅಮವಾಸೆಯಿಂದ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಮಠ ರಾಮೇನಹಳ್ಳಿ, ಹೆಬ್ಬೂರು ಅಂಚೆ - 572 120 ತುಮಕೂರು ತಾ|| ಮತ್ತು ಜಿಲ್ಲೆ

Map

Near by Places

ಹೆಬ್ಬೂರು - 4 ಕಿ.ಮೀ. ತುಮಕೂರು - 20 ಕಿ.ಮೀ. ಕುಣಿಗಲ್ - 18 ಕಿ.ಮೀ.

Statistic

119 Views
0 Rating
0 Favorite
0 Share
error: Content is protected !!