ಕರ್ತೃ – ಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯ ಸ್ವಾಮಿಗಳು
ಕನ್ನೋಳ್ಳಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ಸಿದ್ದಲಿಂಗೇಶ್ವರ ಹಿರೇಮಠವುಅಸ್ತಿತ್ವದಲ್ಲಿದ್ದು, ಶ್ರೀ ಉಜ್ಜಯಿನಿ ಪೀಠದ ಶಾಖಾಮಠವಾಗಿ ಈ ಭಾಗದ ಜನರಲ್ಲಿ ಧಾರ್ಮಿಕಅರಿವನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಶ್ರೀಮಠದ ಕರ್ತೃಗುರುಗಳೆಂದುಶ್ರೀ ಷ.ಬ್ರ. ಗುರುಪಾದೇಶ್ವರ ಶಿವಾಚಾರ್ಯ ಸ್ವಾಮಿಗಳನ್ನು ಹೆಸರಿಸˉÁಗುತ್ತದೆ.ಸುಮಾರು 9-10ನೇ ಶತಮಾನದಲ್ಲಿ ಸ್ಥಾಪಿತಗೊಂಡಿದೆಯೆಂದು ಹೇಳˉÁಗುವಶ್ರೀಮಠವು ಇಂದಿನವರೆಗೂ ಮುಂದುವರೆದುಕೊಂಡು ಬಂದಿದೆ. ಕರ್ತೃಗುರುಗಳು ಸಂಚಾರದಿಂದ ಈ ಪ್ರದೇಶಕ್ಕೆ ಬಂದವರಾಗಿದ್ದು ಈ ಪ್ರದೇಶದಲ್ಲಿದ್ದ ಕಾಡು ಜನಾಂಗವನ್ನು ಸಂಸ್ಕಾರವಂತರನ್ನಾಗಿ ಮಾಡಲು ಬಹಳ ಶ್ರಮಪಟ್ಟರು. ಕಾಡು ಜನರನ್ನೆˉÁ್ಲ ಒಂದೆಡೆ ಸೇರಿಸಲುಪ್ರತಿದಿನ ಶಿವಾನುಭವಗೋಷ್ಠಿಗಳನ್ನು ಮಾಡುವ ಮೂಲಕ ಆಚಾರ-ವಿಚಾರ ಮತ್ತುಅಹಿಂಸಾವಾದವನ್ನು ಬೋಧಿಸಿ ಅವರ ಮನಸ್ಸನ್ನು ಪರಿವರ್ತಿಸಿದರು.ಶ್ರೀಮಠದಲ್ಲಿ 13 ಜನ ಶ್ರೀಗಳು ಅಧಿಕಾರ ನಡೆಸಿದರೆಂದು ಹೇಳˉÁಗಿದ್ದು,ಸ್ಪಷ್ಟತೆಯಿಲ್ಲ. ಹಿಂದಿನ ಗುರುಗಳಾದ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳುತಪೋನಿಷ್ಠರಾಗಿದ್ದು ತಮ್ಮ ಪಾಂಡಿತ್ಯದಿಂದ ಪಂಚಪೀಠಾಧೀಶರರ ಮೆಚ್ಚುಗೆಗೆ ಪಾತ್ರರಾಗಿದ್ದರು. ಶ್ರೀಗಳು ತಮ್ಮ ಪಾಂಡಿತ್ಯದಿಂದ, ತಪೋಶಕ್ತಿಯಿಂದ ಶ್ರೀಮಠವನ್ನು ಅಭಿವೃದ್ಧಿಪಡಿಸಿದ್ದು ಶ್ರೀಗಳ ಹೆಸರಿನಿಂದˉÉೀ ಶ್ರೀಮಠವನ್ನು ಗುರುತಿಸˉÁಗುತ್ತಿದೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು1933ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡವರು. ತದನಂತರ ಯಾದಗಿರಿಯ ಸಂಸ್ಕøತ ಕಾˉÉೀಜಿನಲ್ಲಿ ಶ್ರೀ ಚಂದ್ರಶೇಖರಸ್ವಾಮಿಗಳಿಂದ ಸಂಸ್ಕøತಾಭ್ಯಾಸ ಮಾಡಿ 1947ರಲ್ಲಿ ಶ್ರೀಮಠಕ್ಕೆ ಮರಳಿದರು. ಆ ವೇಳೆಗಾಗˉÉೀಹಿರಿಯ ಗುರುಗಳು ಲಿಂಗೈಕ್ಯರಾಗಿ ಮಠವು ಜೀರ್ಣಾವಸ್ಥೆಗೆ ತಲುಪಿತ್ತು. ಶ್ರೀಗಳುಶ್ರೀಮಠವನ್ನು ಜೀರ್ಣಾಭಿವೃದ್ಧಿಗೊಳಿಸಿ ಮಠದ ಆಸ್ತಿಯನ್ನು ಶಿಸ್ತುಬದ್ದಗೊಳಿಸಿ ಕಾಯಕಯೋಗದಿಂದ ಅಭಿವೃದ್ಧಿಗೊಳಿಸಿದ್ದಾರೆ. ತೀರ ಇತ್ತೀಚೆಗೆ ಶ್ರೀಮಠದ ಉತ್ತರಾಧಿಕಾರಿಗಳನ್ನಾಗಿಶ್ರೀ ಗುರುಲಿಂಗ ದೇವರನ್ನು ನೇಮಕ ಮಾಡಿಕೊಳ್ಳˉÁಗಿದೆ.
Swamiji
Swamiji Name :
ಶ್ರೀ ಷ.ಬ್ರ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
1-8-1919
Place :
ಬೊಮ್ಮನಜೋಗಿ, ಸಿಂಧಗಿ ತಾ||
Pattadikara :
1933
Photo :
Programs
ಯುಗಾದಿ ಆದ ಐದನೇ ದಿನಕ್ಕೆ ಪುರಾಣ ಪ್ರಾರಂಭ.
ಬಸವ ಜಯಂತಿ ಆಚರಣೆ ಮತ್ತು ಮರುದಿನ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.
ಶ್ರೀ ದಾರುಕಾಚಾರ್ಯರ ಜಯಂತಿಯಂದು ಶ್ರೀಮಠದ ರಥೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ವಿಶೇಷ ಪೂಜೆ.