Shree Shivayogishwara Matha – Nadi Ingalagavi

Shree Shivayogishwara Matha – Nadi Ingalagavi Claimed

ಶ್ರೀ ಶಿವಯೋಗೀಶ್ವರ ಮಠ - ನದಿ ಇಂಗಳಗಾವಿ

Average Reviews

Description

ಶ್ರೀ ಶಿವಯೋಗೀಶ್ವರ ಮಠ – ನದಿ ಇಂಗಳಗಾವಿ

ಕರ್ತೃ ಶ್ರೀ ಮ.ನಿ.ಪ್ರ. ಮುರುಘೇಂದ್ರ ಶಿವಯೋಗಿಗಳು

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನದಿ ಇಂಗಳಗಾವಿ ಗ್ರಾಮವು ತಾಲ್ಲೂಕುಕೇಂದ್ರದಿಂದ 15 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿರುವ ಶ್ರೀ ಶಿವಯೋಗೀಶ್ವರ ಮಠವುಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಜನ್ಮ ಸ್ಥಳವಾಗಿ ಬೇಡಿ ಬಂದ ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವ ಜಾಗೃತ ಸ್ಥಳವಾಗಿದೆ.ನದಿ ಇಂಗಳಗಾವಿ ಗ್ರಾಮದಲ್ಲಿ ಜನ್ಮತಾಳಿದಮಹಾಮಹಿಮ ಶಿವಶರಣರೇ ಶ್ರೀ ಮುರುಘೇಂದ್ರಶಿವಯೋಗಿಗಳು. ಇವರ ಕಾಲಮಾನ 1836-1921. ಇಲ್ಲಿನಭಾಗೋಜಿ ಮಠ ಮನೆತನದ ಶ್ರೀ ರಾಚಯ್ಯ ಮತ್ತು ಶ್ರೀಮತಿನೀಲಮ್ಮ ದಂಪತಿಗಳೇ ಶಿವಯೋಗಿಗಳಿಗೆ ಜನ್ಮ ನೀಡಿದಪುಣ್ಯದಂಪತಿಗಳು. ಶ್ರೀಗಳನ್ನು ಅವರ ಎಂಟನೇವಯಸ್ಸಿನಲ್ಲಿಯೇ ಶ್ರೀ ಗಚ್ಚಿನ ಮಠಕ್ಕೆ ಸಮರ್ಪಿಸಿದರು ಈಪುಣ್ಯದಂಪತಿಗಳು.ಶ್ರೀ ಗಚ್ಚಿನ ಮಠಕ್ಕೆ ಸಮರ್ಪಿತಗೊಂಡ ಶಿವಯೋಗಿಗಳು ತಮ್ಮ 16ನೇವಯಸ್ಸಿನಲ್ಲಿ ಗುರುಗಳಿಂದ ಅನುಗ್ರಹಪಡೆದು ನಂತರ ತಮ್ಮ 20ನೇ ವಯಸ್ಸಿನಲ್ಲಿ ಶ್ರೀ ಗಚ್ಚಿನಮಠದ ಶ್ರೀ ಗುರುಶಾಂತ ಮಹಾಸ್ವಾಮಿಗಳಿಂದ ಶಿವದೀಕ್ಷೆ ಪಡೆದು ಲೋಕಸಂಚಾರಕ್ಕೆಹೊರಟರು. ಸಂಚಾರದಲ್ಲಿ ಪರಿಪಕ್ವಗೊಂಡು ಶ್ರೀಮಠಕ್ಕೆ ಮರಳಿದ ಶ್ರೀಗಳು ಶ್ರೀ ಗಚ್ಚಿನಮಠದ ಪೀಠವನ್ನು ನಿರಾಕರಿಸಿ ಅಲ್ಲಿಯೇ ಉಳಿದು ಭಕ್ತರನ್ನು ಉದ್ದರಿಸಿ ತಮ್ಮಪವಾಡಗಳಿಂದ ಪ್ರಖ್ಯಾತಗೊಂಡು 1921ರ ಏಪ್ರಿಲ್ 23ರಲ್ಲಿ ಲಿಂಗೈಕ್ಯರಾದರು.ಇಂತ ಮಹಾಮಹಿಮ ಶಿವಶರಣರ ಜನ್ಮಸ್ಥಳದಲ್ಲಿ ಆ ಮನೆತನದವರು ಧಾರ್ಮಿಕಆಚರಣೆಗಳನ್ನು ನಡೆಸಿಕೊಂಡು ಬಂದಿದ್ದು ಇತ್ತೀಚೆಗೆ 2005ರ ಫೆಬ್ರವರಿ 21ರಲ್ಲಿಶ್ರೀ. ಮ.ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳನ್ನು ಅಧಿಕಾರಕ್ಕೆ ತಂದಿದ್ದಾರೆ. ಶ್ರೀಗಳುಅಧಿಕಾರ ಸ್ವೀಕರಿಸಿದ ನಂತರ ಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತಚಿತ್ತ ಹರಿಸಿದ್ದಾರೆ. ಶ್ರೀಮಠವು ಅಥಣಿ ಶಿವಯೋಗಿಗಳ ಕರ್ತೃತ್ವ ಶಕ್ತಿಯಿಂದಾಗಿ ಭಕ್ತರಸಮಸ್ಯೆಗಳಿಗೆ ಪರಿಹಾರವಾಗಿದ್ದು ಅಪಾರ ಸಂಖ್ಯೆಯ ಭಕ್ತರನ್ನು ಸೆಳೆಯುತ್ತಿದೆ. ಶ್ರೀಮಠದಲ್ಲಿಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಶಿವರಾತ್ರಿಗೆ ರುದ್ರಾಭಿಷೇಕ, ಪುರಾಣ ಪ್ರವಚನಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜನಗೊಳ್ಳುತ್ತವೆ.

Swamiji

Swamiji Name :
ಶ್ರೀ ಮ.ನಿ.ಪ್ರ.ಸ್ವ. ಸಿದ್ದಲಿಂಗ ಮಹಾಸ್ವಾಮಿಗಳು
Date of Birth :
01-06-1967
Place :
ನದಿ ಇಂಗಳಗಾವಿ, ಅಥಣಿ ತಾ||
Pattadikara :
21-02-2005
Photo :

Programs

ಪ್ರತಿ ಅಮಾವಾಸ್ಯೆ, ಹುಣ್ಣಿಮೆಗೆ ವಿಶೇಷ ಪೂಜೆ
ಶಿವರಾತ್ರಿಗೆ ರುದ್ರಾಭಿಷೇಕ, ಪುರಾಣ ಪ್ರವಚನ, ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ಪೂರ್ವ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಶಿವಯೋಗೀಶ್ವರ ಮಠ
ನದಿ ಇಂಗಳಗಾವಿ,
ಅಥಣಿ ತಾ||, ಬೆಳಗಾವಿ ಜಿಲ್ಲೆ

Map

Near by Places

ದರೂರು 03 ಕಿ.ಮೀ.
ಅಥಣಿ 15 ಕಿ.ಮೀ.
ಹಾರೋಗೇರಿ 18 ಕಿ.ಮೀ.
ಬೆಳಗಾಂ 150 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!