ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಕೇಂದ್ರದಿಂದಘೋಡಗೇರಿ ಗ್ರಾಮದ ಹೊರವಲಯದಲ್ಲಿ ಪೂಜ್ಯ ಶ್ರೀ ಚನ್ನಬಸವಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಶಿವಾನಂದ ಮಠವು ತನ್ನ ಧಾರ್ಮಿಕಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಶ್ರೀಮಠವುಗದಗದ ಶ್ರೀ ಶಿವಾನಂದ ಮಠದ ಪರಂಪರೆಗೆ ಸೇರಿದ ಮಠವಾಗಿದೆ.ಕರ್ತೃ ಶ್ರೀ ಚನ್ನಬಸವ ಮಹಾಸ್ವಾಮಿಗಳು ಗದಗದ ಶಿವಾನಂದ ಮಠದಪರಮಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳ ಶಿಷ್ಯರು. ಗುರುಗಳ ಸೇವೆಯಲ್ಲಿ ಜೀವನಸಾರ್ಥಕ್ಯ ಕಂಡ ಶ್ರೀಗಳು ಅನೇಕ ವರ್ಷ ಶಿವಾನಂದ ಮಠದಲ್ಲಿಯೇ ನೆಲೆನಿಂತಿದ್ದರು.ಆನಂತರ ಅಲ್ಲಿಂದ ಸಂಚಾರ ಹೊರಟು ಘೋಡಗೇರಿಗೆ ಆಗಮಿಸಿ 1988ರಲ್ಲಿ ಭಕ್ತರಸಹಕಾರದೊಂದಿಗೆ ಊರ ಹೊರವಲಯದಲ್ಲಿ ಶ್ರೀ ಶಿವಾನಂದ ಮಠವನ್ನು ಸ್ಥಾಪಿಸಿದರು.ಕೆಲಕಾಲ ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿದ ಶ್ರೀಗಳು 1992ರ ಜನವರಿ25ರಂದು ಈಗಿನ ಶ್ರೀಗಳಾದ ಪೂಜ್ಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳಿಗೆ ಉತ್ತರಾಧಿಕಾರತ್ವನೀಡಿ ಅದೇ ವರ್ಷ ಡಿಸೆಂಬರ್ನಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮಲ್ಲಯ್ಯ ಸ್ವಾಮಿಗಳು ಚಿಕ್ಕ ವಯಸ್ಸಿನಲ್ಲಿಯೇ ಗದಗದ ಶ್ರೀಶಿವಾನಂದ ಮಠಕ್ಕೆ ಒಪ್ಪಿಸಲ್ಪಟ್ಟವರು. ನಂತರದಲ್ಲಿ ಬಿಜಾಪುರ ಜ್ಞಾನಯೋಗಾಶ್ರಮದವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸೇವೆಯಲ್ಲಿ ನಿರತರಾಗಿ ಅವರಲ್ಲೇಆಧ್ಯಾತ್ಮದ ಅರಿವನ್ನು ಪಡೆದು, ಅವರಿಂದಲೇ ದೀಕ್ಷೆಯನ್ನು ಪಡೆದವರು. ಶ್ರೀಗಳುಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಸಂಸ್ಕøತ ಸ್ನಾತಕೋತ್ತರ ಪದವಿಯನ್ನುಪಡೆದಿದ್ದಾರೆ.ಹೀಗೆ ಗುರುಗಳ ಸೇವೆ, ಅಧ್ಯಯನಗಳಲ್ಲಿ ನಿರತರಾಗಿದ್ದ ಶ್ರೀ ಮಲ್ಲಯ್ಯಸ್ವಾಮಿಗಳುಘೋಡಗೇರಿಯ ಶ್ರೀ ಶಿವಾನಂದ ಮಠಕ್ಕೆ ಆಗಮಿಸಿ ಇಲ್ಲಿ ಹೊಸ ವಾತಾವರಣ ಸೃಷ್ಠಿಮಾಡಿದರು. ಶ್ರೀಮಠವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದರು. ಸದಾಚಟುವಟಿಕೆಯ ಕೇಂದ್ರವನ್ನಾಗಿ ಮಾಡಿದರು. ಈ ಎಲ್ಲಾ ಕಾರ್ಯಚಟುವಟಿಕೆಗಳಿಂದಾಗಿಭಕ್ತರು ಶ್ರೀಮಠದತ್ತ ಹರಿದು ಬಂದು ಶ್ರೀಮಠದ ಅಭಿವೃದ್ದಿ ಕಾರ್ಯ ಚುರುಕುಗೊಂಡಿತು.ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿತು ಹಾಗೂ ಅನುಭವ ಮಂಟಪವೆಂಬ ಸಾಂಸ್ಕøತಿಕಭವನವು ನಿರ್ಮಾಣಗೊಂಡಿತು.
Swamiji
Swamiji Name :
ಪೂಜ್ಯ ಶ್ರೀ ಮಲ್ಲಯ್ಯ ಸ್ವಾಮಿಗಳು
Date of Birth :
22-07-1959
Place :
ಗದಗ
Pattadikara :
25-01-1992
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
ಜನವರಿ 01 ರಿಂದ 25ರ ವರೆಗೆ ಶ್ರೀ ಮಠದ ಜಾತ್ರೆ
ಮಹಾನವಮಿಗೆ ನಿತ್ಯ ಶ್ರೀದೇವಿ ಪುರಾಣ ಪ್ರವಚನ
ಗಣೇಶ ಚತುರ್ತಿಗೆ 9 ದಿನಗಳ ಕಾಲ ಪ್ರವಚನ
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ಶಿವಾನಂದ ಮಠ
ಘೋಡಗೇರಿ - 591 107
ಹುಕ್ಕೇರಿ ತಾ||, ಬೆಳಗಾವಿ ಜಿಲ್ಲೆ