ಬಳ್ಳಾರಿ ನಗರವು ಕರ್ನಾಟಕದ ಪ್ರಮುಖ ನಗರಗಳಲ್ಲೊಂದಾಗಿದ್ದು ಬಳ್ಳಾರಿನಗರದ ಗ್ರಹಂ ರಸ್ತೆಯಲ್ಲಿ ಆಂಧ್ರದ ಉರವಕೊಂಡ ಮಠದ ಶಾಖಾಮಠವಾಗಿರುವಶ್ರೀ ಕರಿಬಸವರಾಜೇಂದ್ರ ಮಹಾಸ್ವಾಮಿಗಳಿಂದ 18ನೇ ಶತಮಾನದಲ್ಲಿ ಸ್ಥಾಪಿತಗೊಂಡಿರಬಹುದಾದ ಶ್ರೀ ಶಿವಲಿಂಗ ಸ್ವಾಮಿ ಮಠವು ಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ವೀರಶೈವಧರ್ಮದ ಬೆಳವಣಿಗೆಗೆ ಕಾರಣವಾಗಿದೆ.ಕರ್ತೃಗುರುಗಳಾದ ಶ್ರೀ ಕರಿಬಸವರಾಜೇಂದ್ರ ಮಹಾಸ್ವಾಮಿಗಳು ತಮ್ಮ ಕರ್ತೃತ್ವಶಕ್ತಿಯಿಂದಾಗಿ ಈ ಭಾಗದಲ್ಲಿ ವೀರಶೈವ ಧರ್ಮವನ್ನು ಪ್ರಚುರಗೊಳಿಸಿದ್ದಾರೆ. ಶ್ರೀಗಳುತಪೋನಿಷ್ಠರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ಭಕ್ತರನ್ನು ಶ್ರೀಮಠಕ್ಕೆಸೆಳೆದಿದ್ದಾರೆ. ಶ್ರೀಗಳ ನಂತರದ ಗುರುಪರಂಪರೆಯಲ್ಲಿ ಬಂದಂತಹ ಶ್ರೀ ಶಿವಲಿಂಗೇಶ್ವರಮಹಾಸ್ವಾಮಿಗಳು ಮಹಾಪುರುಷರಾಗಿದ್ದು ತಮ್ಮ ಅನುಷ್ಠಾನಬಲದಿಂದ ಹಾಗೂ ತಮ್ಮಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದಲ್ಲಿ ಮನೆಮಾತಾಗಿದ್ದರು. ಆದ್ದರಿಂದಲೇ ಶ್ರೀಶಿವಲಿಂಗೇಶ್ವರ ಮಹಾಸ್ವಾಮಿಗಳ ಹೆಸರಿನಿಂದಲೇ ಶ್ರೀಮಠವನ್ನು ಗುರುತಿಸಲಾಯಿತು.ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು ಶ್ರೀಮಠದಲ್ಲಿ ಧಾರ್ಮಿಕ, ಸಾಂಸ್ಕøತಿಕಹಾಗೂ ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರನ್ನು ಸೆಳೆದು ಭಕ್ತರಸಹಕಾರದೊಂದಿಗೆ ಮಠವನ್ನು ಅಭಿವೃದ್ಧಿಗೊಳಿಸಿ ಈ ಭಾಗದಲ್ಲಿ ಪ್ರಸಿದ್ಧಿಗೊಳಿಸಿದ್ದಾರೆ.ಆದರೆ ನಂತರದ ಪರಂಪರೆಯ ಗುರುಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲದಾಗಿದೆ.ಈಗಿನ ಶ್ರೀಗಳಾದ ಶ್ರೀ ಡಾ|| ಕರಿಬಸವರಾಜೇಂದ್ರ ಮಹಾಸ್ವಾಮಿಗಳು 1997ರಆಗಸ್ಟ್ 5 ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳೊಂದಿಗೆಸಾಮಾಜಿಕವಾಗಿಯೂ ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳುಶ್ರೀಮಠದಲ್ಲಿ ಪ್ರತಿ ತಿಂಗಳ 2ನೇ ಶನಿವಾರ “ಅರಿವು ಆಚಾರ” ಎಂಬ ಶಿವಾನುಭವ ಗೋಷ್ಠಿಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಶಿವರಾತ್ರಿ, ಬಸವಜಯಂತಿ, ನವರಾತ್ರಿ ಮತ್ತುಶ್ರಾವಣ ಮಾಸಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಡಾ. ಕರಿಬಸವರಾಜೇಂದ್ರ ಮಹಾಸ್ವಾಮಿಗಳು
Date of Birth :
1-3-1968
Place :
ಮರಕುಂಬಿ, ಸವದತ್ತಿ ತಾ||
Pattadikara :
5-8-1997
Photo :
Programs
ಪ್ರತಿ ತಿಂಗಳ ಎರಡನೇ ಶನಿವಾರ "ಅರಿವು ಆಚಾರ-ಶಿವಾನುಭವ ಗೋಷ್ಠಿ".
ಶಿವರಾತ್ರಿ ಮತ್ತು ನವರಾತ್ರಿಗೆ ವಿಶೇಷ ಪೂಜೆ.
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ. ಪ್ರತಿ ವರ್ಷ ಡಿಸೆಂಬರ್ 15ರಿಂದ ಜನವರಿ 15ರ ತನಕ ಪ್ರವಚನ
Photos
Full Address Kannada
ಶ್ರೀ ಶಿವಲಿಂಗ ಸ್ವಾಮಿ ಮಠ
ಗ್ರಹಂ ರಸ್ತೆ, ಬಳ್ಳಾರಿ -583 101