ರಾಮದುರ್ಗ ಪಟ್ಟಣದ ನವಿಪೇಟೆ ಬಡಾವಣೆಯಲ್ಲಿ ಸುಮಾರು 300ವರ್ಷಗಳ ಹಿಂದೆ ಶ್ರೀ ಮ.ನಿ.ಪ್ರ. ಮಹಾಲಿಂಗ ಮಹಾಸ್ವಾಮಿಗಳೆಂಬ ಶಿವಯೋಗಿಗಳಿಂದಸ್ಥಾಪಿಸಲ್ಪಟ್ಟಿರುವ ಶ್ರೀ ಶಿವಮೂರ್ತೇಶ್ವರ ವಿರಕ್ತಮಠವು ಭಕ್ತೋದ್ಧಾರಕ್ಕಾಗಿ ಶ್ರಮಿಸುತ್ತಿದೆ.ಶ್ರೀಮಠದ ಮೂಲ ಮಠವು ಹಂಪಿಹೊಳೆಯಲ್ಲಿದ್ದು ಅಲ್ಲಿಂದ ಸಂಚಾರ ಕೈಗೊಂಡ ಶ್ರೀಮಹಾಲಿಂಗ ಮಹಾಸ್ವಾಮಿಗಳು ಇಲ್ಲಿಗೆ ಬಂದು ನೆಲೆಸಿ ಶ್ರೀಮಠವನ್ನು ಸ್ಥಾಪಿಸಿದ್ದಾರೆ. ಸದಾಸಂಚಾರದಲ್ಲಿರುತ್ತಿದ್ದ ಶ್ರೀಗಳು ವೀರಶೈವ ಧರ್ಮಾಚರಣೆಗಳ ಮಹತ್ವವನ್ನು ನಾಡಿನತುಂಬೆಲ್ಲ ಪ್ರಚುರಪಡಿಸಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಶ್ರೀಮಠದ ಅಧಿಕಾರವಹಿಸಿಕೊಂಡಿದ್ದ ಶ್ರೀ ಮ.ನಿ.ಪ್ರ. ಶಿವಮೂರ್ತೇಶ್ವರ ಮಹಾಸ್ವಾಮಿಗಳಿಂದಾಗಿ ಶ್ರೀಮಠವುಪ್ರಸಿದ್ದಿಗೆ ಬಂದಿದ್ದು ಶ್ರೀಗಳು ಶ್ರೀಮಠವನ್ನು ಜೀರ್ಣಾಭಿವೃದ್ದಿಗೊಳಿಸಿದ್ದರು. ಶ್ರೀಗಳುಮಹಾತಪಸ್ವಿಗಳಾಗಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳ ಜೊತೆಗೆ ಸಾಮಾಜಿಕಕಾರ್ಯಗಳನ್ನು ನಡೆಸುತ್ತಾ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಶ್ರೀಗಳ ಕಾಲದಲ್ಲಿಧರ್ಮೋಪದೇಶ ಹಾಗೂ ಅನ್ನದಾಸೋಹವು ನಿರಂತರವಾಗಿ ನಡೆಯತೊಡಗಿ ಶ್ರೀಮಠವುಪ್ರಬುದ್ದಮಾನಕ್ಕೆ ಬಂದಿದ್ದರಿಂದ ಮಠವನ್ನು ಅವರ ಹೆಸರಿನಿಂದಲೇ ಗುರುತಿಸಲಾಗುತ್ತಿದೆ.ಶ್ರೀ ಶಿವಮೂರ್ತೇಶ್ವರ ಮಹಾಸ್ವಾಮಿಗಳ ನಂತರ ಅನೇಕ ಗುರುಗಳು ಅಧಿಕಾರನಡೆಸಿದ್ದ ಮಾಹಿತಿ ದೊರೆಯುತ್ತಿದ್ದು ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಗಂಗಾಧರಮಹಾಸ್ವಾಮಿಗಳು ಶ್ರೀಮಠದ ಜೊತೆಯಲ್ಲಿ ಸಮಾಜದ ಶ್ರೇಯೋಭಿವೃದ್ದಿಗೂಶ್ರಮವಹಿಸಿರುವುದು ಕಂಡು ಬರುತ್ತದೆ. ಶ್ರೀಗಳು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸಮಾಡಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಅಭಿವೃದ್ದಿಗೊಳಿಸಿದ್ದಾರೆ.ಈಗಿನ ಗುರುಗಳಾದ ಶ್ರೀ ಮ.ನಿ.ಪ್ರ. ಶಾಂತವೀರ ಸ್ವಾಮಿಗಳು 1993ರ ಜನವರಿ29ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಹಿಂದಿನ ಪರಂಪರೆಯ ಗುರುಗಳ ಹಾದಿಯಲ್ಲಿಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಮಠದ ಅಭಿವೃದ್ದಿಗೆ ಯೋಜನೆ ರೂಪಿಸಿಕೊಂಡುಕಾರ್ಯತತ್ಪರರಾಗಿದ್ದು ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದಾರೆ. ಶ್ರೀಮಠದಲ್ಲಿ ಶ್ರಾವಣಮಾಸದಲ್ಲಿ ಲಿಂ|| ಶ್ರೀ ಶಿವಮೂರ್ತಿ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ಪುರಾಣಪ್ರವಚನಗಳನ್ನು ಆಯೋಜಿಸಲಾಗುತ್ತಿದ್ದು ಕಾರ್ತೀಕ ಮಾಸದಲ್ಲಿ ದೀಪೋತ್ಸವವನ್ನುಹಮ್ಮಿಕೊಳ್ಳಲಾಗುತ್ತದೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಶಾಂತವೀರ ಸ್ವಾಮಿಗಳು
Date of Birth :
01-07-1956
Place :
ಅವರಾಧಿ, ರಾಮದುರ್ಗ ತಾ||
Pattadikara :
29-01-1993
Photo :
Programs
ಶ್ರಾವಣ ಮಾಸದಲ್ಲಿ ಲಿಂ|| ಶ್ರೀ ಮ.ನಿ.ಪ್ರ. ಶಿವಮೂರ್ತಿ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ಪುರಾಣ ಪ್ರವಚನ ಕಾರ್ತಿಕ ಮಾಸದಲ್ಲಿ ದೀಪೋತ್ಸವ
Photos
Full Address Kannada
ಶ್ರೀ ಶಿವಮೂರ್ತೇಶ್ವರ ವಿರಕ್ತ ಮಠ
ನವಿಪೇಟೆ, ರಾಮದುರ್ಗ - 591 123
ರಾಮದುರ್ಗ ತಾ||, ಬೆಳಗಾವಿ ಜಿಲ್ಲೆ