Shree Shidlehalli Daruka Maha Samsthana Matha

Shree Shidlehalli Daruka Maha Samsthana Matha Claimed

ಶ್ರೀ ಶಿಡ್ಲೆಹಳ್ಳಿ ದಾರುಕಾ ಮಹಾಸಂಸ್ಥಾನ ಮಠ

Average Reviews

Description

ಶ್ರೀ ಶಿಡ್ಲೆಹಳ್ಳಿ ದಾರುಕಾ ಮಹಾಸಂಸ್ಥಾನ ಮಠ

ಕರ್ತೃ – ಶ್ರೀ ಶ್ರೀ ಸಿದ್ದಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು

ಕರ್ನಾಟಕದ ಪ್ರಾಚೀನ ವೀರಶೈವ ಮಠಗಳಲ್ಲಿ ತಿಪಟೂರು ತಾಲ್ಲೂಕು ಶ್ರೀಮದ್ದಾರುಕಾಚಾರ್ಯ ಗುರುವರಾನ್ವಯಾನ್ವಿತ ಸುಕ್ಷೇತ್ರ ತಿಪಟೂರು. ಸಿಡ್ಲೆಹಳ್ಳಿ ಸಂಸ್ಥಾನಮಠವೂ ಒಂದು. ತಮ್ಮಡಿಹಳ್ಳಿ ಮಠಸ್ಥ ಜಂಗಮ ದಂಪತಿಗಳ ಗರ್ಭದಲ್ಲಿ ಜನಿಸಿದ ಶ್ರೀಸಿದ್ದಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳನ್ನು ತಮ್ಮಡಿಹಳ್ಳಿ ಶ್ರೀ ಸಂಸ್ಥಾನ ವಿರಕ್ತಮಠಾಧ್ಯಕ್ಷರಾಗಿದ್ದ ಮುಪ್ಪಿನ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮಿಗಳವರಅಣತಿಯಂತೆ ಹಾಗಲವಾಡಿ ಸಂಸ್ಥಾನದ ಅರಸು ಎರಡನೇ ಮುದಿಯಷ್ಟ ಪ್ರಭುವು (1720-1740) ಹಾಗಲವಾಡಿಗೆ ಕರೆದುಕೊಂಡು ಹೋಗಿ ಮಠವನ್ನು ಕಟ್ಟಿಸಿಕೊಟ್ಟುರಾಜಗುರುಗಳನ್ನಾಗಿ ಮಾಡಿಕೊಂಡನೆಂದು ಪ್ರತೀತಿ ಇದೆ. ಪ್ರಭುಗಳು ಶ್ರೀ ಮಠಕ್ಕೆದಾನದತ್ತಿಗಳನ್ನು ಕೊಟ್ಟಿದ್ದಲ್ಲದೆ ಶ್ರೀ ಮಠದ ಶ್ರೀಗಳು ಭಕ್ತರುಗಳಿಂದ ಕೋರು ರೂಪದಲ್ಲಿದವಸ, ಧಾನ್ಯಗಳನ್ನು ಪಡೆಯುತ್ತಿದ್ದರಿಂದ ಭಕ್ತರು ಶ್ರೀ ಮಠವನ್ನು ಕೋರು ಮಠವೆಂದುಕರೆಯುತ್ತಿದ್ದರು.ಹೀಗೆ ಹಾಗಲವಾಡಿ ಸಂಸ್ಥಾನ ರಾಜಗುರುಗಳಾಗಿ ಶ್ರೀ ಸಿದ್ದಲಿಂಗ ದೇಶಿಕೇಂದ್ರಮಹಾಸ್ವಾಮಿಗಳಿಂದ ಪ್ರಾರಂಭಗೊಂಡ ಮಠದ ಪರಂಪರೆ ತದನಂತರ ಶಿಡ್ಲೆಹಳ್ಳಿಗೆಸ್ಥಳಾಂತರಗೊಂಡು ಪ್ರಸ್ತುತ ತಿಪಟೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ತೃ ಶ್ರೀಗಳ ನಂತರಶ್ರೀ ಮಠಕ್ಕೆ ಪಟ್ಟಾಧಿಕಾರಿಗಳಾಗಿ ಶ್ರೀ ಮಠವನ್ನು ಮುನ್ನಡೆಸಿದ ಶ್ರೀ ನಂಜುಂಡ ದೇಶಿಕೇಂದ್ರ 85ಮಹಾಸ್ವಾಮಿಗಳವರ ಕಾಲಮಾನ (ಕ್ರಿ.ಶ. 1745-1770). ಈ ಮಹಾತ್ಮರ ಗದ್ದುಗೆಯುಹೊಸದುರ್ಗ ತಾಲ್ಲೂಕಿನ ಮತ್ತೋಡಿಯಲ್ಲಿದ್ದು ನಿತ್ಯ ಪೂಜೆಗೆ ಒಳಪಟ್ಟಿದೆ.ತದನಂತರ ಬಂದ ಶ್ರೀ ಗುರುಸಿದ್ದ ದೇಶಿಕೇಂದ್ರ ಮಹಾಸ್ವಾಮಿ (1770-1844)ಗಳಕಾಲದಲ್ಲಿ ಶ್ರೀ ಮಠವು ಹಾಗಲವಾಡಿಯಿಂದ ಶಿಡ್ಲೆಹಳ್ಳಿಗೆ ತನ್ನ ಕಾರ್ಯಚಟುವಿಟಕೆಗಳನ್ನುಸ ್ಥಳಾಂತರಗೊಳಿಸಿತು. ಶ್ರೀಗಳು ತಪೋನಿಷ ್ಠರಾಗಿದ್ದು ಶಿಡೆ ್ಲಹಳ್ಳಿಯಲ್ಲಿಅನುಷ್ಠಾನಗೊಂಡಿದ್ದರು. ಹೀಗೆ ಶ್ರೀಗಳು ಅನುಷ್ಠಾನಗೊಂಡ ಜಾಗದಲ್ಲಿ ಭಕ್ತರೇ ಮಠವನ್ನುಕಟ್ಟಿಸಿ ಧಾರ್ಮಿಕ ಚಟುವಟಿಕೆಗಳು ಪ್ರಾರಂಭಗೊಳ್ಳುವಂತೆ ಮಾಡಿದರು. ಶ್ರೀಗಳು ತಮ್ಮಡಿಹಳ್ಳಿಸಮೀಪದ ತಗಚೇಘಟ್ಟದ ಪ್ರಶಾಂತ ಸ್ಥಳದಲ್ಲಿ ಅನುಷ್ಠಾನಗೊಂಡು ಲಿಂಗದೊಳಗಾಗಿದ್ದುಇವರ ಗದ್ದುಗೆ ತಗಚೇಘಟ್ಟದ ಬಿಲ್ವವನದಲ್ಲಿ ಸ್ಥಾಪಿತಗೊಂಡಿದೆ.ನಂತರದ ಶ್ರೀ ಸಿದ್ದಮಲ್ಲಾರ್ಯ ದೇಶಿಕೇಂದ್ರ ಮಹಾಸ್ವಾಮಿಗಳವರು (1844-1908) ಹಠಯೋಗ ಹಾಗೂ ಶಿವಯೋಗಗಳಲ್ಲಿ ಪರಿಣಿತರಾಗಿದ್ದರು. ತಪೋನಿಷ್ಠರಾಗಿದ್ದಶ್ರೀಗಳು ಸದಾ ಭಕ್ತರ ಶ್ರೇಯಸ್ಸನ್ನೇ ಬಯಸುತ್ತಾ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು. ಸುಕ್ಷೇತ್ರದಲ್ಲಿಶ್ರೀ ಸಿದ್ದಲಿಂಗೇಶ್ವರ ದೇವಾಲಯವನ್ನು ಕಟ್ಟಿಸಿದ ಶ್ರೀಗಳು ಶತಾಯುಷಿಗಳಾಗಿ ಸಾರ್ಥಕಜೀವನ ನಡೆಸಿದರು. 1908ರಲ್ಲಿ ಶ್ರೀ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳಿಗೆ ಶ್ರೀ ಮಠದಪಟ್ಟಾಧಿಕಾರವನ್ನು ನೀಡಿ ಲಿಂಗೈಕ್ಯರಾಗಿದ್ದು ಇವರ ಗದ್ದುಗೆಯು ಶಿಡ್ಲೇಹಳ್ಳಿ ಮಠದಲ್ಲಿದ್ದುನಿತ್ಯ ಪೂಜೆಗೆ ಒಳಪಟ್ಟಿದೆ.1903ರಲ್ಲಿ ಪಟ್ಟಕ್ಕೆ ಬಂದ ಶ್ರೀ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳುಮಹಾವಿದ್ವಾಂಸರು, ಕಾಶಿಯಲ್ಲಿ ವಿದ್ವತ್, ತರ್ಕ, ನ್ಯಾಯ, ಸಂಸ್ಕøತ, ವೇದಾಂತ,ತತ್ತ್ವಶಾಸ್ತ್ರಗಳನ್ನು ಆಳವಾಗಿ ಅಧ್ಯಯನಗೈದು ವಿದ್ವತ್ ಪಂಡಿತರೆಂದೇ ಪ್ರಸಿದ್ದರಾಗಿದ್ದರು. ಈರೀತಿ ವಿದ್ಯಾ ಸಂಪನ್ನರಾದ ಗುರುಗಳು ಸದಾ ಸಮಾಜದ ಏಳಿಗೆಗೆ ದುಡಿದವರಾಗಿದ್ದರು.1914ರಲ್ಲಿ ವೀರಶೈವರಲ್ಲಿ ಒಡಕನ್ನುಂಟು ಮಾಡಲು ಕೆಲವು ಕುಹಕಿಗಳು ಸಮಾಜದಲ್ಲಿ ಭಕ್ತಮತ್ತು ಜಂಗಮ ಎಂಬ, ಭೇದ ಭಾವವನ್ನಿಟ್ಟು ಹಾವೇರಿ ನ್ಯಾಯಾಲಯಕ್ಕೆ ಹೋದರುಕೆಲಕಾಲ ಹೈಕೋರ್ಟಿನ ತನಕ ಹೋದ ವ್ಯಾಜ್ಯ ಪುನಃ ಹಾವೇರಿ ನ್ಯಾಯಾಲಯಕ್ಕೆ ಬಂದಾಗ1913ರಲ್ಲಿ ಶ್ರೀ ಕರಿಬಸವ ದೇಶಿಕೇಂದ್ರ ಸ್ವಾಮಿಗಳು ವಾದ ಮಾಡಿ ಜಂಗಮ ಎಂಬುದು ಜಾತಿಸೂತಕವಲ್ಲ. ಅದು ನಮ್ಮ ಸಂಸ್ಕಾರದಿಂದ ಉಂಟಾಗಿರುವುದು ಎಂದು ವಾದ ಮಂಡಿಸಿಜಯಗಳಿಸಿದರು. ಇದರಲ್ಲೇ ಗೊತ್ತಾಗುವುದು ಗುರುಗಳ ವಿದ್ವತ್ ಎಂತದ್ದೆಂದು.ಮಹಾನ್ ವಿದ್ವಾಂಸರಾದ ಶ್ರೀ ಕರಿಬಸವ ಸ್ವಾಮಿಗಳ ಕಾಲದಲ್ಲಿ ಶ್ರೀ ಮಠವು ತನ್ನವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತು. ಆಗ ಶ್ರೀಗಳು 1922ರಲ್ಲಿ ಶ್ರೀ ಮಠದ ಆಡಳಿತವನ್ನುತಿಪಟೂರು ಪಟ್ಟಣಕ್ಕೆ ಸ್ಥಳಾಂತರಿಸುತ್ತಾರೆ. ತಿಪಟೂರಿನಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಿಉಚಿತ ದಾಸೋಹ ನೀಡಿದರು. ಇವರ ಕಾರ್ಯಪಾಂಡಿತ್ಯವನ್ನು ಕಂಡ ಮೈಸೂರಿನ ರಾಜರುಇವರಿಗೆ ರಾಜಮರ್ಯಾದೆ ನೀಡಿದ್ದಾರೆ. ಶ್ರೀಗಳು ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಹಾಸನ, ನಂದಿಗುಡಿ ಮತ್ತು ಚಿಲ್ಕೂರುಗಳಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿದರು.ಈ ರೀತಿಯಾಗಿ ತಮ್ಮ ಪಾಂಡಿತ್ಯದ ಮೂಲಕ ಹಾಗೂ ಕಾರ್ಯಕ್ರಮಗಳ ಮೂಲಕಸಮಾಜದ ಒಳಿತಿಗಾಗಿ ಶ್ರಮಿಸಿದ ಶ್ರೀಗಳು ಸಮಾದಿ ಗದ್ದುಗೆಯು ತಿಪಟೂರಿನ ಶ್ರೀ ವೀರಶೈವಗುರುಕುಲಾನಂದಾಶ್ರಮದ ಮಧ್ಯಭಾಗದಲ್ಲಿ ರಾರಾಜಿಸುತ್ತಿದೆ.ಆದರೆ ಶ್ರೀ ಕರಿಬಸವ ಸ್ವಾಮಿಗಳ ನಂತರ ಶ್ರೀ ಮಠದ ಉತ್ತರಾಧಿಕಾರಿಗಳುಯಾರೂ ಇಲ್ಲದ ಕಾರಣ ಶ್ರೀ ಮಠದ ಆಡಳಿತವನ್ನು ಬಳ್ಳೇಕಟ್ಟೆ ಮಠದ ಶ್ರೀಚನ್ನಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮಿಗಳು ನೋಡಿಕೊಳ್ಳತೊಡಗಿ ನಂತರದಲ್ಲಿ ಶ್ರೀಗಳುಎರಡೂ ಮಠಗಳನ್ನು ಒಂದೇ ಆಡಳಿತಕ್ಕೆ ತಂದರು. 1932ರಲ್ಲಿ ಬಳ್ಳೇಕಟ್ಟೆ ಮಠದಅಧಿಕಾರವನ್ನು ಸ್ವೀಕರಿಸಿದ್ದ ಶ್ರೀಗಳು ಸ್ವತಃ ಕಾಯಕಯೋಗಿಗಳಾಗಿ ಬಳ್ಳೇಕಟ್ಟೆ ಮಠವನ್ನುಅಭಿವೃದ್ಧಿಯೆಡೆಗೆ ಮುನ್ನಡೆಸಿದರು. ಶ್ರೀ ಮಠಕ್ಕೆ ನೂತನ ಕಟ್ಟಡವನ್ನು 1953ರಲ್ಲಿ ಕಟ್ಟಿಸಿದ್ದರು.ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡುಯಶಸ್ಸುಗಳಿಸಿದ ಶ್ರೀಗಳು 1990ರಲ್ಲಿ ಬಳ್ಳೇಕಟ್ಟೆ ಮಠದ ಆಡಳಿತವನ್ನು ಶ್ರೀ ಸಿದ್ದಲಿಂಗಶಿವಾಚಾರ್ಯರಿಗೆ ನೀಡಿ ತಾವು ತಿಪಟೂರಿನ ಶಿಡ್ಲೆಹಳ್ಳಿ ಮಠದಲ್ಲಿ ವಿಶ್ರಾಂತ ಜೀವನಸಾಗಿಸತೊಡಗಿದರು. ತದನಂತರ ಭಕ್ತರ ಒತ್ತಾಸೆಯಂತೆ 1993ರಲ್ಲಿ ತಿಪಟೂರಿನ ಶಿಡ್ಲೆಹಳ್ಳಿಮಠ ಮತ್ತು ಬಳ್ಳೇಕಟ್ಟೆ ಮಠಗಳೆರಡಕ್ಕೂ ಇವರನ್ನೇ ಉತ್ತರಾಧಿಕಾರಿಗಳನ್ನಾಗಿ ನೇಮಿಸಿ1994ರ ನವೆಂಬರ್ 21ರಂದು ಲಿಂಗೈಕ್ಯರಾದರು.ಗುರುಗಳ ಮಾರ್ಗದರ್ಶನದಲ್ಲಿ ಪರಿಪಕ ್ವಗೊಂಡ ಶ್ರೀ ಸಿದ್ದಲಿಂಗಶಿವಾಚಾರ್ಯರು 1996ರ ನವೆಂಬರ್ 10ರಂದು ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರಮಹಾಸ್ವಾಮಿಗಳೆಂದು ಅಭಿದಾನ ಪಡೆದು ಶ್ರೀ ಮಠದ ಪಟ್ಟಾಧಿಕಾರ ಸ್ವೀಕರಿಸಿದರು. ಶಿಡ್ಲೆಹಳ್ಳಿತಿಪಟೂರು, ಬಳ್ಳೇಕಟ್ಟೆ ಈ ಮೂರು ಸ್ಥಳಗಳಲ್ಲಿನ ಆಸ್ತಿಯನ್ನು ಅಭಿವೃದ್ಧಿಪಡಿಸಿರುವ ಶ್ರೀಗಳುತಿಪಟೂರಿನ ಶ್ರೀ ವೀರಶೈವ ಗುರುಕುಲಾನಂದಾಶ್ರಮವನ್ನು ತಮ್ಮ ಕೇಂದ್ರ ಕಛೇರಿಯನ್ನಾಗಿಮಾಡಿಕೊಂಡಿದ್ದಾರೆ.

Swamiji

Swamiji Name :
ಶ್ರೀ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳು
Place :
ಚಿಕ್ಕಮಾರಪ್ಪನಹಳ್ಳಿ, ತಿಪಟೂರು ತಾ||
Pattadikara :
10-11-1996

Programs

ಪ್ರತಿ ಹುಣ್ಣಿಮೆಗೆ "ಶರಣ ಧರ್ಮ ಚಿಂತನಗೋಷ್ಠಿ" ಕಾರ್ಯಕ್ರಮ ನವಂಬರ್ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳ ಪೀಠಾರೋಹಣ ಮತ್ತು ಸಾಮೂಹಿಕ ವಿವಾಹಗಳು, ವಿವಿಧ ಧಾ.ಸಾಂ.ಕಾರ್ಯಕ್ರಮಗಳು ಪ್ರತಿ ವರ್ಷ ಶ್ರೀಗಳ ಪೀಠಾರೋಹಣ ಸಂದರ್ಭದಲ್ಲಿ ಸಮಾಜದ ಅತ್ಯುತ್ತಮ ಸಮಾಜ ಸೇವಕ ಗಣ್ಯರಿಗೆ "ಗುರುಕುಲಶ್ರೀ" ಗೌರವ ಸಮರ್ಪಣೆ

Institutions

ಐ.ಟಿ.ಐ. / ಡಿ.ಐ.ಡಿ.ಕಾಲೇಜು ಸಂಸ್ಕøತ ಪಾಠಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ನಿಲಯ

Full Address Kannada

ಶ್ರೀ ಶಿಡ್ಲೆಹಳ್ಳಿ ದಾರುಕಾ ಮಹಾಸಂಸ್ಥಾನ ಮಠ ಕೆ.ಆರ್.ಬಡಾವಣೆ, ತಿಪಟೂರು - 572 202 ತಿಪಟೂರು ತಾ||, ತುಮಕೂರು ಜಿಲ್ಲೆ

Map

Near by Places

ಕೆ.ಬಿ.ಕ್ರಾಸ್ - 22 ಕಿ.ಮೀ. ತುರುವೇಕೆರೆ - 25 ಕಿ.ಮೀ. ತುಮಕೂರು - 75 ಕಿ.ಮೀ.

Statistic

58 Views
0 Rating
0 Favorite
1 Share
error: Content is protected !!