ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಶಿಡಿಗಳಲೆ ಗ್ರಾಮದಹೊರವಲಯದಲ್ಲಿ 2 ಕಿ.ಮೀ. ಅಂತರದಲ್ಲಿ ಸ್ಥಾಪಿತಗೊಂಡು ಈ ಭಾಗದ ಭಕ್ತರಲ್ಲಿಧಾರ್ಮಿಕ ಅರಿವನ್ನು ಮೂಡಿಸಲು ಶ್ರಮಿಸುತ್ತಿರುವ ಶ್ರೀ ಶಿಡಿಗಳಲೆ ಮಠವು ಪುರಾತನಕಾಲದಲ್ಲಿ ಸ್ಥಾಪಿತಗೊಂಡಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ ಹಾಗೂ ಶ್ರೀಮಠದಕರ್ತೃಗುರುಗಳ ಕುರಿತಾಗಿ ಜಾನಪದ ಕಥೆಯಿದ್ದು ಅವರ ಹೆಸರಾಗಲೀ ಅವರ ಮೂಲದಕುರಿತಾಗಲೀ ತಿಳಿದು ಬರುವುದಿಲ್ಲ.ಶ್ರೀಮಠದ ಕರ್ತೃಗುರುಗಳು ಮೊದಲು ಇದ್ದ ಗ್ರಾಮದಲ್ಲಿ ಊರಿನ ಜನರುಖಾಯಿಲೆಗಳಿಂದ ತೊಂದರೆಗೆ ಒಳಗಾಗಿ ಆ ಊರನ್ನು ಬಿಟ್ಟು ಅಲ್ಲಿಂದ ಗುಳೆಹೊರಟಾಗಗುರುಗಳೂ ತಮ್ಮ ಐದು ಜನ ಶಿಷ್ಯರೊಳಗೂಡಿ ಸಂಚಾರ ಹೊರಟು ಶಿಡಿಗಳಲೆ ಭಾಗದಲ್ಲಿಅನುಷ್ಠಾನ ಮಾಡುತ್ತಾರೆ. ಆ ಸಮಯದಲ್ಲಿ ಗುರುಗಳ ಕುರಿತಾಗಿ ವಿಷಯ ತಿಳಿದು ಈಭಾಗದ ರಾಜರು ಶ್ರೀಗಳನ್ನು ಕಂಡು ಅವರಿಗೆ ಮಠವನ್ನು ಕಟ್ಟಿಸಿ 15 ಎಕರೆ ಭೂಮಿಯನ್ನುನೀಡಿದರು ಎಂದು ಹೇಳಲಾಗುತ್ತದೆ. ಆದರೆ ಈ ಕುರಿತು ಯಾವುದೇ ಅಧಿಕೃತಮಾಹಿತಿಗಳಿಲ್ಲ.ಕರ್ತೃಗುರುಗಳು ಐಕ್ಯವಾದ ನಂತರ ಅನೇಕ ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದು ಅವರುಗಳ ಕುರಿತು ಮಾಹಿತಿಗಳು ಲಭ್ಯವಿಲ್ಲ. ಪರಂಪರೆಯ ಹಿಂದಿನಶ್ರೀಗಳಾದ ಶ್ರೀ ನಿ.ಪ್ರ. ಬಸವರಾಜ ಸ್ವಾಮಿಗಳು ಪವಾಡ ಪುರುಷರಾಗಿದ್ದು ತಮ್ಮ ಆಚರಣೆಗಳಮೂಲಕ ಪ್ರಸಿದ್ದಿಗೊಂಡಿದ್ದರು. ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸಿದ ಶ್ರೀಗಳು ಈಗ್ಗೆ 25ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ.ಹಿಂದಿನ ಶ್ರೀಗಳು ಲಿಂಗೈಕ್ಯರಾದ ನಂತರ ಶ್ರೀಮಠವು ಬಹುಕಾಲ ಖಾಲಿಉಳಿದಿದ್ದು ಮಠವು ಅವ್ಯವಸ್ಥೆಯಿಂದ ಕೂಡಿತ್ತು. ತುಂಬಾಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆಪ್ರಸ್ತುತ ಶ್ರೀಗಳನ್ನು 2004ರ ಮೇ 28ರಂದು ಶ್ರೀ ಸಿದ್ದಗಂಗಾ ಶ್ರೀಗಳ ಮಾರ್ಗದರ್ಶನದಲ್ಲಿಕಿರಿಕೊಡ್ಲಿ ಶ್ರೀಮಠದ ಶ್ರೀ ಸದಾಶಿವ ಸ್ವಾಮಿಗಳು, ಶ್ರೀ ಕಲ್ಲುಮಠದ ಮಹಾಂತ ಸ್ವಾಮಿಗಳನೇತೃತ್ವದಲ್ಲಿ ಊರಿನ ಭಕ್ತರ ಸಹಕಾರದೊಂದಿಗೆ ಪಟ್ಟಾಧಿಕಾರ ಮಾಡಲಾಯಿತು. ಶ್ರೀ ನಿ.ಪ್ರ.ಇಮ್ಮಡಿ ಶಿವಲಿಂಗ ಸ್ವಾಮಿಗಳು ಶ್ರೀಮಠವನ್ನು ಜೀರ್ಣೋದ್ದಾರಗೊಳಿಸಿದ್ದು ಶ್ರೀ ಮಠದಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ನಿ.ಪ್ರ. ಇಮ್ಮಡಿ ಶಿವಲಿಂಗ ಸ್ವಾಮಿಗಳು
Date of Birth :
15-02-1989
Place :
ಚಿಕ್ಕಕುಂದ, ಸೋಮವಾರಪೇಟೆ ತಾ||
Pattadikara :
28-05-2004
Photo :
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
Photos
Full Address Kannada
ಶ್ರೀ ಶಿಡಿಗಳಲೆ ಮಠ
ಶಿಡಿಗಳಲೆ, ನಿಡ್ತ ಪೋ - 571 235
ಶನಿವಾರಸಂತೆ ಹೋಬಳಿ
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ