ಮೈಸೂರು ಜಿˉÉ್ಲ ನಂಜನಗೂಡು ಪಟ್ಟಣದ ದೇವೀರಮ್ಮನ ಬಡಾವಣೆಯಲ್ಲಿಇತ್ತೀಚೆಗೆ 2001ರ ಎಪ್ರಿˉï 04ರಂದು ಅಸಿತ್ತ್ವಕ್ಕೆ ಬಂದಿರುವ ಶ್ರೀ ಶರಣ ಸಂಗಮ ಮಠವುತನ್ನ ಆಚರಣೆಗಳ ಮೂಲಕ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ಶ್ರೀಶರಣಸಂಗಮ ಮಠವು ಶ್ರೀ ಶ್ರೀಶೈಲ ಪೀಠದ ಶಾಖಾ ಮಠವಾಗಿ ಪಂಚಪೀಠಗಳಪರಂಪರೆಯನ್ನು ಪಾಲಿಸಿಕೊಂಡು ಬರುತ್ತಿದೆ.ಶ್ರೀ ಷ.ಬ್ರ. ನಾಗರಾಜೇಂದ್ರ ಮಹಾಸ್ವಾಮಿಗಳು ನಂಜನಗೂಡು ತಾಲ್ಲೂಕುಎಸ್.ಹೊಸಕೋಟೆ ಗ್ರಾಮದವರಾಗಿದ್ದು ಬಾಲ್ಯದಿಂದಲೂ ಆಧ್ಯಾತ್ಮದತ್ತ ಒಲವುಹೊಂದಿದವರು. ಶ್ರೀಗಳು ನವಿಲೂರ ಪಟ್ಟದ ಮಠದ ಲಿಂ. ಶ್ರೀ ಮಲ್ಲಿಕಾರ್ಜುನಮಹಾಸ್ವಾಮಿಗಳ ಬಳಿಯಲ್ಲಿ 25 ವರ್ಷಗಳ ಕಾಲ ಸೇವೆ ಮಾಡಿಕೊಂಡಿದ್ದವರು ಹಾಗೂನವಿಲೂರು ಮತ್ತು ಕುರಹಟ್ಟಿ ಮಠದಲ್ಲಿ 14 ವರ್ಷಗಳ ಕಾಲ ಕಂತೆಭಿಕ್ಷೆಯನ್ನು ಮಾಡಿದ್ದರು.ಶ್ರೀ ಷ.ಬ್ರ. ನಾಗರಾಜೇಂದ್ರ ಮಹಾಸ್ವಾಮಿಗಳು ನವಿಲೂರ ಮಠದಲ್ಲಿ ಗುರುಗಳಸೇವೆಯಲ್ಲಿರುವಾಗˉÉೀ ಮನದಲ್ಲಿ ಸಂಕಲ್ಪ ಮಾಡಿಕೊಂಡು ಭಕ್ತರ ಸಹಕಾರದೊಂದಿಗೆ2001ರ ಏಪ್ರಿˉï 08ರಂದು ನಂಜನಗೂಡಿನಲ್ಲಿ ಶ್ರೀ ಶರಣಸಂಗಮ ಮಠವನ್ನು ಸ್ಥಾಪಿಸಿದರುಹಾಗೂ 2005ರ ಫೆಬ್ರವರಿ 24ರಲ್ಲಿ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಶ್ರೀಮಠದಪಟ್ಟಾಧಿಕಾರ ಅನುಗ್ರಹವನ್ನು ಸ್ವೀಕರಿಸಿದರು.ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿದ ನಂತರ ನಿರಂತರವಾಗಿ ಧಾರ್ಮಿಕ ಹಾಗೂಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದು 2010ರಅಕ್ಟೋಬರ್ 29ರಲ್ಲಿ ಶ್ರೀಮಠದಲ್ಲಿ 108 ಶಿವಲಿಂಗಗಳ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದಾರೆಹಾಗೂ ಪ್ರತಿವರ್ಷ ಏಪ್ರಿˉï 08ರಂದು ಶ್ರೀಮಠದ ವಾರ್ಷಿಕೋತ್ಸವ ಮತ್ತುಮಹಾಶಿವರಾತ್ರಿಗೆ ಶ್ರೀಮಠದ ಜಾತ್ರೆ ಪ್ರಯುಕ್ತ ವಿವಿದ ಧಾರ್ಮಿಕ ಸಾಂಸ್ಕøತಿಕಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ನಾಗರಾಜೇಂದ್ರ ಸ್ವಾಮಿಗಳು
Date of Birth :
07-03-1959
Place :
ಎಸ್.ಹೊಸಕೋಟೆ, ನಂಜನಗೂಡು ತಾ||
Pattadikara :
24-02-2005
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ
ಶಿವರಾತ್ರಿಗೆ ಜಾಗರಣೆ, ಮಠದ ಜಾತ್ರೆ, ವಿವಿದ ಧಾರ್ಮಿಕ
ಸಾಂಸ್ಕøತಿಕ ಕಾರ್ಯಕ್ರಮಗಳು
ಕಾರ್ತಿಕ ಮಾಸದಲ್ಲಿ ನಾಲ್ಕು ಸೋಮವಾರ ವಿಶೇಷ ಕಾರ್ಯಕ್ರಮಗಳು
ಧನುರ್ಮಾಸದಲ್ಲಿ ನಿತ್ಯ ವಿಶೇಷ ಕಾರ್ಯಕ್ರಮ
ಏಪ್ರಿಲ್ 08ರಂದು ಶ್ರೀಮಠದ ವಾರ್ಷಿಕೋತ್ಸª
Photos
Full Address Kannada
ಶ್ರೀ ಶರಣಸಂಗಮ ಮಠ
ದೇವಿರಮ್ಮನ ಬಡಾವಣೆ,
ನಂಜನಗೂಡು - 571 118 ಮೈಸೂರು ಜಿಲ್ಲೆ