Shree Shanta Mallikarjuna Swami Virakta Matha

Shree Shanta Mallikarjuna Swami Virakta Matha Claimed

ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ವಿರಕ್ತ ಮಠ

Average Reviews

Description

ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ವಿರಕ್ತಮಠ – ಹುಲ್ಲಹಳ್ಳಿ

ಕರ್ತೃ – ಪೂಜ್ಯ ಶ್ರೀ ರುದ್ರಮುನಿ ಶಿವಯೋಗಿಗಳು

ಕಪಿˉÁನದಿಯ ಬಲದಂಡೆಯ ಮೇˉÉ ಹೊಯ್ಸಳ ದಂಡಾಧೀಶ ಹುಳ್ಳನಿಂದಸ್ಥಾಪಿತವಾದ ಊರು ಹುಳ್ಳನಹಳ್ಳಿ ಕ್ರಮೇಣ ರೂಢಿಗತವಾಗಿ ಹುಲ್ಲಹಳ್ಳಿ ಎಂಬುದಾಗಿದೆ. ಈಹುಲ್ಲಹಳ್ಳಿ ಗ್ರಾಮದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಶಾಂತಮಲ್ಲಿಕಾರ್ಜುನಸ್ವಾಮಿ ವಿರಕ್ತಮಠದಇತಿಹಾಸ ದೊಡ್ಡದು. ಈ ಮಠದ ಮೂಲ ಪುರುಷರೆಂದು ಪೂಜ್ಯ ಶ್ರೀ ರುದ್ರಮುನಿಶಿವಯೋಗಿಗಳನ್ನು ಗುರುತಿಸˉÁಗುತ್ತಿದ್ದು ಇಲ್ಲಿಯವರೆಗೂ 26 ಜನ ಶ್ರೀಗಳು ಶ್ರೀಮಠವನ್ನುಮುನ್ನಡೆಸಿದ್ದಾರೆಂದು ಹೇಳˉÁಗುತ್ತದೆ.ಹೀಗೆ ಬೆಳೆದುಬಂದಿರುವ ಶ್ರೀಮಠದ ಪರಂಪರೆಯಲ್ಲಿ ಪ್ರಮುಖವಾಗಿ ಶ್ರೀಚನ್ನವೀರಣಾರ್ಯ, ಶ್ರೀ ಶಾಂತವೀರಣಾರ್ಯ, ಶ್ರೀ ಗುರುಸಿದ್ದ ದೇಶಿಕರು, ಶ್ರೀಸರ್ಪಭೂಷಣ ಸ್ವಾಮಿಗಳು, ಶ್ರೀ ಚನ್ನಮಲ್ಲಿಕಾರ್ಜುನ ದೇಶಿಕರು ಕಂಡು ಬರುತ್ತಾರೆ.ಇವರಲ್ಲಿ ಶ್ರೀ ಶಾಂತವೀರಣಾರ್ಯರು ಉತ್ತಮ ಕವಿಗಳಾಗಿದ್ದು 1630ರ ಸುಮಾರಿಗೆಚಿತ್ರದುರ್ಗದ ಮುರುಘಾ ಮಠದ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ ಹಾಗೂ ನಂತರದ ಶ್ರೀಗುರುಸಿದ್ದ ದೇಶಿಕರು “ಇಮ್ಮಡಿ ಶಾಂತವೀರ ಗುರುಸಿದ್ದದೇಶಿಕ”ರೆಂಬ ಹೆಸರಿನಲ್ಲಿ ಚಿತ್ರದುರ್ಗಮುರುಘಾ ಮಠದ ಪೀಠಾಧಿಪತಿಗಳಾಗಿ ಪ್ರಸಿದ್ದರಾಗಿದ್ದರೆಂದು ತಿಳಿದುಬರುತ್ತದೆ.ಶ್ರೀಮಠದ ಹಿಂದಿನ ಶ್ರೀಗಳಾದ ಲಿಂ. ಶ್ರೀ ನಿ.ಪ್ರ.ಸ್ವ. ಶಿವಾನುಭವ ಚರಮೂರ್ತಿಸದಾಶಿವ ಸ್ವಾಮಿಗಳು 1942ರ ಫೆಬ್ರವರಿ 18ರಂದು ಶ್ರೀಮಠದ ಪಟ್ಟಾಭಿಷೇಕವನ್ನು ತಮ್ಮಗುರುಗಳಾದ ಶತಾಯುಷಿ ಶ್ರೀ ನಿ.ಪ್ರ.ಸ್ವ. ಚನ್ನಮಲ್ಲಿಕಾರ್ಜುನ ದೇಶಿಕರಿಂದ ಸ್ವೀಕರಿಸಿದರು.ಗುರುಗಳು ಕಾಯಕಯೋಗಿಗಳಾಗಿ ದುಡಿದು ಮಠದ ಸರ್ವಾಂಗೀಣ ಅಭಿವೃದ್ದಿಗೆಕಾರಣೀಭೂತರಾಗಿದ್ದಾರೆ. ಅರ್ಧ ಶತಮಾನಕ್ಕೂ ಅಧಿಕ ಕಾಲ ಆಡಳಿತ ನಡೆಸಿದ ಶ್ರೀಸದಾಶಿವ ಸ್ವಾಮಿಗಳು 1979ರˉÉ್ಲೀ ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ನಿ.ಪ್ರ.ಸ್ವ. ಇಮ್ಮಡಿಚನ್ನಮಲ್ಲದೇಶಿಕೇಂದ್ರ ಮಹಾಸ್ವಾಮಿಗಳನ್ನು ಪಟ್ಟಕ್ಕೆ ತಂದು ಇತ್ತೀಚೆಗೆ 2007ರ ಜೂನ್25ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳು ಧೀರ್ಘಕಾಲ ಗುರುಗಳ ಸೇವೆಯಲ್ಲಿ ನಿರತರಾಗಿ ಅಪಾರ ಜ್ಞಾನಸಂಪಾದಿಸಿಕೊಂಡು ಪರಿಪಕ್ವಗೊಂಡು ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ ಹಾಗೂಶ್ರೀಮಠದ ಕಟ್ಟಡವನ್ನು ಜೀರ್ಣೋದ್ದಾರಗೊಳಿಸಿದ್ದಲ್ಲದೇ ಸಮುದಾಯ ಭವನವನ್ನುನಿರ್ಮಿಸಿ ಶ್ರೀಮಠವನ್ನು ಪ್ರಗತಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ.

Swamiji

Swamiji Name :
ಶ್ರೀ ನಿ.ಪ್ರ.ಸ್ವ. ಇಮ್ಮಡಿ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
22-07-1960
Place :
ಹುಲ್ಲಹಳ್ಳಿ, ನಂಜನಗೂಡು ತಾ||
Pattadikara :
1979
Photo :

Programs

ಪ್ರತಿ ಅಮವಾಸೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ
ಚೈತ್ರ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ವಿರಕ್ತ ಮಠ
ಹುಲ್ಲಹಳ್ಳಿ - 571 314
ನಂಜನಗೂಡು ತಾ||, ಮೈಸೂರು ಜಿಲ್ಲೆ

Map

Near by Places

ನಂಜನಗೂಡು 14 ಕಿ.ಮೀ.
ಮೈಸೂರು 24 ಕಿ.ಮೀ.

Statistic

12 Views
0 Rating
0 Favorite
0 Share
error: Content is protected !!