ತಿಪಟೂರು ಪಟ್ಟಣದ ಕಂಚೆಘಟ್ಟ ಪ್ರದೇಶದಲ್ಲಿ ಅಸ್ತಿತ್ವದಲ್ಲಿರುವ ಷಡಕ್ಷರ ಮಠವು1950ರಲ್ಲಿ ಕರ್ತೃ ಶ್ರೀ ಮ. ನಿ. ಪ್ರ. ಷಡಕ್ಷರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿದ್ದು ಕೇವಲ6 ದಶಕಗಳಲ್ಲಿ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ. ಇದಕ್ಕೆಪ್ರಮುಖ ಕಾರಣ ಶ್ರೀ ಮಠದ ಈಗಿನ ಶ್ರೀಗಳಾದ ಶ್ರೀ ಮ. ನಿ. ಪ್ರ. ರುದ್ರಮುನಿಮಹಾಸ್ವಾಮಿಗಳು.ಕ್ರಿ.ಶ. 1896ರಲ್ಲಿ ಬಳ್ಳಾರಿ ಜಿಲ್ಲೆಯ ಸೊಕ್ಕೆ ಗ್ರಾಮದಲ್ಲಿ ಜನ್ಮ ತಳೆದ ಕರ್ತೃ ಶ್ರೀಷಡಕ್ಷರ ಸ್ವಾಮಿಗಳು ಎಳೆ ವಯಸ್ಸಿನಲ್ಲಿಯೇ ಆಧ್ಯಾತ್ಮದೆಡೆಗೆ ಮನಸ್ಸು ಮಾಡಿ ಮನೆ ತೊರೆದುಸಂಚಾರ ಹೊರಟರು. ಅಲ್ಲಲ್ಲಿ ನೆಲೆ ನಿಲ್ಲುತ್ತಾ ಪ್ರವಚನ ನೀಡುತ್ತಾ ದಕ್ಷಿಣದೆಡೆಗೆ ಬಂದಶ್ರೀಗಳು ತಿಪಟೂರಿಗೆ ಬಂದು ನೆಲೆನಿಂತಾಗ ಅವರ ವಯಸ್ಸು 36. ಶ್ರೀಗಳು ನೀಡುತ್ತಿದ್ದಪ್ರವಚನಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸತೊಡಗಿ ಶ್ರೀಗಳ ಪರಮ ಭಕ್ತರಾಗಿದ್ದನಿರ್ವಾಣ ಶೆಟ್ಟರು ಒಂದು ಎಕರೆ ಭೂಮಿ ದಾನ ನೀಡಿದರು.ಶ್ರೀಗಳು ದಾನವಾಗಿ ಬಂದ ಭೂಮಿಯಲ್ಲಿ ಕುಟೀರ ಸ್ಥಾಪಿಸಿಕೊಂಡುಅಭಿವೃದ್ಧಿಪಡಿಸುತ್ತಾ, ಪ್ರವಚನ ನೀಡುತ್ತಾ 1950ರ ಸುಮಾರಿಗೆ ಸಣ್ಣ ಮಠವನ್ನು ಕಟ್ಟಿಚಿತ್ರದುರ್ಗದ ಜಗದ್ಗುರುಗಳಿಂದ ಪ್ರವೇಶೋತ್ಸವ ಮಾಡಿಸಿದರು. ಮುಂದೆ ಹುಬ್ಬಳ್ಳಿಮೂರುಸಾವಿರ ಮಠದ ಜಗದ್ಗುರು ಡಾ. ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳಕೃಪೆಯುಂಟಾಗಿ ಅವರಿಂದ 1955ರಲ್ಲಿ ವಿರಕ್ತಾಶ್ರಮಾಧಿಕಾರಿ ಸ್ವೀಕರಿಸಿ ಶ್ರೀ ಮ. ನಿ. ಪ್ರ.ಷಡಕ್ಷರ ಮಹಾಸ್ವಾಮಿಗಳೆಂಬ ಅಭಿದಾನ ಹೊಂದಿದರು.ಸಾಧು ಶ್ರೇಷ್ಠರಾದ ಶ್ರೀ ಷಡಕ್ಷರ ಸ್ವಾಮಿಗಳು ತಮ್ಮ ಸಾಹಸದಿಂದ ಶ್ರೀ ಮಠದಬೆಳವಣಿಗೆಗೆ ತಳಹದಿಯನ್ನು ಹಾಕಿದರು. ಆರ್ಥಿಕ, ಸಾಮಾಜಿಕ, ಧಾರ್ಮಿಕ ದೃಷ್ಠಿ,ಧ್ಯೇಯಗಳಿಂದ ಶ್ರೀ ಮಠವನ್ನು ಬೆಳೆಸಿದರು. ತಾವು ಲಿಂಗೈಕ್ಯರಾಗುವವರೆಗೂ ಸಮಾಜದಹಿತವನ್ನೇ ಮುಖ್ಯವಾಗಿಟ್ಟುಕೊಂಡು ಕಾರ್ಯನಿರ್ವಹಿಸಿದರು. ಇಂತಹ ಸಾದು ಶ್ರೇಷ್ಠ ಶ್ರೀಷಡಕ್ಷರಿ ಮಹಾಸ್ವಾಮಿಗಳು 1985ರ ಆಗಸ್ಟ್ 07ರಲ್ಲಿ ಲಿಂಗದೊಳಗಾದರು.ಶ್ರೀ ಷಡಕ್ಷರಿ ಮಠವು ಮೊದಲು ಹುಬ್ಬಳ್ಳಿ ಮೂರು ಸಾವಿರ ಮಠದ ಶಾಖಾಮಠವಾಗಿ ಗುರುತಿಸಿಕೊಂಡಿದ್ದರಿಂದ ಶ್ರೀ ಮಠದ ಸಂಪೂರ್ಣ ಜವಾಬ್ದಾರಿ ಶ್ರೀ ಮೂರುಸಾವಿರ ಮಠದ ಮೇಲಿತ್ತು. ಹೀಗಾಗಿ ಶ್ರೀ ಷಡಕ್ಷರಿ ಸ್ವಾಮಿಗಳು ಕೊನೆಗಾಲದಲ್ಲಿದ್ದಾಗ ಶ್ರೀಗಳಸೇವೆಗೆ ಸಮರ್ಥ ವಟುವನ್ನೇ ಕಳುಹಿಸಿಕೊಟ್ಟಿದ್ದರು. ಅವರೇ ಈಗಿನ ಪೀಠಾಧಿಪತಿಗಳಾದಶ್ರೀ ರುದ್ರಮುನಿ ಸ್ವಾಮಿಗಳು. ಶ್ರೀಗಳು ತಿಪಟೂರಿನ ಮಠಕ್ಕೆ ಆಗಮಿಸಿ ಗುರುಗಳ ಸೇವೆಯನ್ನುಮನಮುಟ್ಟಿ ಮಾಡಿದರು. ಆದರೆ ತೀವ್ರ ಅಸ್ತಿತ್ವಗೊಂಡಿದ್ದ ಗುರುಗಳು ಲಿಂಗೈಕ್ಯರಾದರು. ಆಗತಿಪಟೂರಿಗೆ ಆಗಮಿಸಿದ ಮೂರು ಸಾವಿರ ಮಠ ಜಗದ್ಗುರುಗಳು ಶ್ರೀ ರುದ್ರಮುನಿ ದೇವರಿಗೆಕೆಲಕಾಲ ತಿಪಟೂರಿನಲ್ಲಿಯೇ ನೆಲೆನಿಲ್ಲುವಂತೆ ಆಜ್ಞಾಪಿಸಿ ತೆರಳಿದರು.ಮೂಲತಃ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿಯಲ್ಲಿ ಜನ್ಮ ತಳೆದ ಶ್ರೀ ರುದ್ರಮುನಿದೇವರು ಬಾಲ್ಯದಿಂದಲೂ ಆಧ್ಯಾತ್ಮ ಜೀವಿಗಳು. ಪ್ರೌಢಶಾಲೆಯವರೆಗೆ ಮನೆಯಲ್ಲಿವಿದ್ಯಾಭ್ಯಾಸ ಮಾಡಿದ ಶ್ರೀಗಳು ನಂತರ ಸಮೀಪದ ಕೋಡಿ ಮಠದಲ್ಲಿ ಏಳು ವರ್ಷಗಳಕಾಲ ಸೇವೆ ಸಲ್ಲಿಸಿ ಅಲ್ಲಿಂದ ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ಪ್ರಶಿಕ್ಷಣಾರ್ಥಿಯಾಗಿಬಂದರು. ಇಲ್ಲಿ ಜಗದ್ಗುರುಗಳ ನೆಚ್ಚಿನ ಶಿಷ್ಯರಾಗಿ ಬೆಳೆದ ಶ್ರೀಗಳು ತಿಪಟೂರಿನಲ್ಲಿ ತಮ್ಮಮುಂದಿನ ವಿಧ್ಯಾಭ್ಯಾಸ ಕೈಗೊಂಡರು.ಶ್ರೀ ರುದ್ರಮುನಿ ದೇವರು ತಿಪಟೂರು ಶ್ರೀ ಷಡಕ್ಷರಿ ಮಠದ ಉತ್ತರಾಧಿಕಾರಿಯಾಗಿಐದು ವರ್ಷ ಸೇವೆ ಸಲ್ಲಿಸುವಷ್ಟರಲ್ಲಿ ಹುಬ್ಬಳ್ಳಿ ಶ್ರೀ ಮೂರು ಸಾವಿರ ಮಠಕ್ಕೂಉತ್ತರಾಧಿಕಾರಿಗಳಾಗಿ ನೇಮಕಗೊಂಡರು. ಶ್ರೀಗಳು ಹುಬ್ಬಳ್ಳಿ ಮಠದ ಜವಾಬ್ದಾರಿಯನ್ನುಯಶಸ್ವಿಯಾಗಿ ಹೊತ್ತುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ವಿವಿದ ಸಮ್ಮೇಳನಗಳನ್ನುಯಶಸ್ವಿಯಾಗಿ ಸಂಘಟಿಸಿದರು. ಶ್ರೀ ಮಠದ ಜಮೀನನ್ನು ಪುನರ್ ವಶಪಡಿಸಿಕೊಂಡುಮಠದ ಆದಾಯ ಹೆಚ್ಚಿಸಿದರು. ಹೀಗಿರುವಾಗಲೇ 1995ರಲ್ಲಿ ಕೆಲ ಆಕಸ್ಮಿಕ ಘಟನೆಗಳುನಡೆದು ಉಭಯ ಶ್ರೀಗಳು ಮಾನಸಿಕವಾಗಿ ದೂರವಾದರು. ತದನಂತರ ಹುಬ್ಬಳ್ಳಿ ಮೂರುಸಾವಿರ ಮಠಕ್ಕೆ 1999ರಲ್ಲಿ ಹಾನಗಲ್ ವಿರಕ್ತಮಠದ ಶ್ರೀ ಮ. ನಿ. ಪ್ರ. ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು.ಹೀಗಾಗಿ ಉತ್ತರಾಧಿಕಾರಿ ಪ್ರಕರಣ ನ್ಯಾಯಾಲಯದಲ್ಲಿ 14 ವರ್ಷ ನಡೆದು 2009ರಲ್ಲಿಉಬಯ ಶ್ರೀಗಳೂ ಒಂದಾಗಿ ಪ್ರಕರಣಕ್ಕೆ ಇತಿಶ್ರೀ ಆಡಿದ್ದು ತಿಪಟೂರಿನ ಶ್ರೀ ಷಡಕ್ಷರಿ ಮಠವುಸ್ವತಂತ್ರ್ಯ ಪೀಠವಾಗಿ ಗುರುತಿಸಿಕೊಂಡಿದೆ.ಶ್ರೀ ರುದ್ರಮುನಿ ದೇವರು 1985ರಿಂದ ಶ್ರೀ ಷಡಕ್ಷರಿ ಮಠದ ಉತ್ತರಾಧಿಕಾರಿಗಳಾಗಿಶ್ರೀ ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿದ್ದು ಇತ್ತೀಚೆಗೆ 2011ರ ಮೇ 16ರಲ್ಲಿಶ್ರೀ ಮ. ನಿ. ಪ್ರ. ರುದ್ರಮುನಿ ಶಿವಯೋಗಿ ರಾಜಯೋಗೀಂದ್ರ ಮಹಾಸ್ವಾಮಿಗಳು ಎಂಬನೂತನ ಅಭಿದಾನ ಹೊಂದಿದರು. ಶ್ರೀಗಳು ಶ್ರೀ ಮಠದಲ್ಲಿ ಕೇವಲ ಧಾರ್ಮಿಕಆಚರಣೆಗಳಿಗಷ್ಠೇ ಮಹತ್ವ ನೀಡದೇ ಶೈಕ್ಷಣಿಕವಾಗಿ ಈ ಭಾಗದ ಗ್ರಾಮೀಣ ಮಕ್ಕಳಿಗೆನೆರವಾಗಿದ್ದಾರೆ. 2003ರಲ್ಲಿ ಶ್ರೀ ವಿಶ್ವ ಸೇವಾ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿರುವ ಶ್ರೀಗಳುಅದರಡಿಯಲ್ಲಿ ಅನೇಕ ಶಿಕ ್ಷಣ ಕೇಂದ ್ರಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿಮುನ್ನಡೆಸುತ್ತಿದ್ದಾರೆ.ಶ್ರೀ ರುದ್ರಮುನಿ ಮಹಾಸ್ವಾಮಿಗಳು ಹೆಚ್ಚು ಪ್ರಗತಿಶೀಲರಾಗಿದ್ದು, ಎಲ್ಲಾಕ್ಷೇತ್ರಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀ ಮಠದ ಆವರಣದಲ್ಲಿ ಸುಂದರಉದ್ಯಾನವನವನ್ನು ನಿರ್ಮಿಸಿದ್ದಾರೆ. ಪೂಜ್ಯ ಶ್ರೀ ಷಡಕ್ಷರ ಸ್ವಾಮಿಗಳ ಗದ್ದುಗೆ, ಪೂಜ್ಯಶಾಂತವೀರಮ್ಮನವರ ಗದ್ದುಗೆ ಹಾಗೂ ವೀರಮ್ಮಜ್ಜಿ ಅವರ ಗದ್ದುಗೆಗಳನ್ನು ಅಚ್ಚುಕಟ್ಟಾಗಿನಿರ್ವಹಿಸಿದ್ದಾರೆ ಹಾಗೂ ಶ್ರೀ ಮಠದ ಕಟ್ಟಡಕ್ಕಾಗಿ ಒಂದೂವರೆ ಕೋಟಿ ರೂಪಾಯಿಯಅಂದಾಜು ಯೋಜನೆಯನ್ನು ರೂಪಿಸಿಕೊಂಡು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
Swamiji
Swamiji Name :
ಶ್ರೀ ಮ. ನಿ. ಪ್ರ. ರುದ್ರಮುನಿ ಮಹಾಸ್ವಾಮಿಗಳು
Date of Birth :
11-02-1959
Place :
ಹಾರನಹಳ್ಳಿ, ಅರಸೀಕೆರೆ ತಾ||
Pattadikara :
16-05-2011
Photo :
Programs
ಪ್ರತಿ ಹುಣ್ಣಿಮೆಗೆ ಶಿವಾನುಭವಗೋಷ್ಠಿ ಜೂನ್ ತಿಂಗಳಲ್ಲಿ ಲಿಂ|| ಶ್ರೀ. ಮ.ನಿ.ಪ್ರ. ಷಡಕ್ಷರ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವ (ಆರೋಗ್ಯ ಶಿಬಿರ, ಸಾಮೂಹಿಕ ವಿವಾಹಗಳು ಹಾಗೂ ವಿ.ಧಾ.ಸಾಂ. ಕಾರ್ಯಕ್ರಮಗಳು)
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ ಪದವಿ ಪೂರ್ವ ಕಾಲೇಜ್ / ಡಿ.ಎಡ್.ಕಾಲೇಜು ವಿದ್ಯಾರ್ಥಿ ನಿಲಯ / ಸ್ಕೂಲ್ ಆಫ್ ನರ್ಸಿಂಗ್ ಐ.ಟಿ.ಐ. ಕಾಲೇಜು / ಪಾಲಿಟೆಕ್ನಿಕ್ ಕಾಲೇಜು
Photos
Full Address Kannada
ಶ್ರೀ ಷಡಕ್ಷರಿ ಮಠ ಕಂಚೆಘಟ್ಟ - 572 202 ತಿಪಟೂರು ತಾ||, ತುಮಕೂರು ಜಿಲ್ಲೆ