Shree Saranga Matha Sukshetra Kudala sangama

Shree Saranga Matha Sukshetra Kudala sangama Claimed

ಶ್ರೀ ಸಾರಂಗ ಮಠ ಸುಕ್ಷೇತ್ರ ಕೂಡಲ ಸಂಗಮ

Average Reviews

Description

ಶ್ರೀ ಸಾರಂಗಮಠ, ಸುಕ್ಷೇತ್ರ ಕೂಡಲಸಂಗಮ

ಕರ್ತೃ ಶ್ರೀ ಷ.ಬ್ರ. ಜಾತವೇದಮುನಿ ಶಿವಾಚಾರ್ಯ ಸ್ವಾಮಿಗಳು

ಸುಕ್ಷೇತ್ರ ಕೂಡಲಸಂಗಮವು 12ನೇ ಶತಮಾನದ ಕಲ್ಯಾಣ ಕ್ರಾಂತಿಯ ರೂವಾರಿವಿಶ್ವಗುರು ಬಸವಣ್ಣನವರ ಐಕ್ಯಸ್ಥಳವಾಗಿ ಭಾರತದ ಧಾರ್ಮಿಕ ಪರಂಪರೆಯಲ್ಲಿ ತನ್ನದೇಆದ ಸ್ಥಾನ ಪಡೆದಿದೆ. ಇಂತಹ ಐತಿಹಾಸಿಕ ನಗರಿಯಲ್ಲಿ ಬಸವಣ್ಣನಿಗಿಂತಲೂ ಪೂರ್ವದಲ್ಲೇ10ನೇ ಶತಮಾನದಲ್ಲಿ ಶ್ರೀ ಸಾರಂಗಮುನಿ ಸ್ವಾಮಿಗಳಿಂದ ಸ್ಥಾಪಿತಗೊಂಡಿದೆಯೆಂದುಹೇಳಲಾದ ಶ್ರೀ ಸಾರಂಗ ಮಠವು ಅಸ್ತಿತ್ವದಲ್ಲಿದೆ.ಶ್ರೀ ಸಾರಂಗ ಮುನಿಗಳಿಂದ ಪ್ರಾರಂಭಗೊಂಡಿರಬಹುದಾದ ಮಠವು 12ನೇಶತಮಾನದಲ್ಲಿ ಅಧಿಕಾರ ನಡೆಸಿದ್ದ ಶ್ರೀ ಜಾತವೇದ ಮುನಿ ಶಿವಾಚಾರ್ಯರಿಂದಾಗಿ ಪ್ರಸಿದ್ದಿಗೊಂಡಿದೆ. ಶ್ರೀಗಳು ಸಂಸ್ಕøತ, ವೇದಗಳನ್ನು ಆಳವಾಗಿ ಅಧ್ಯಯನ ಮಾಡಿದ್ದು ವೀರಶೈವಧರ್ಮಾಚರಣೆಗಳ ಮಹತ್ವವನ್ನು ಭಕ್ತರಿಗೆ ಪ್ರಚುರಪಡಿಸುತ್ತಿದ್ದರು.ಶ್ರೀಗಳಿಗೆ “ಶ್ರೀ ಈಶಾನ್ಯಗುರು”, “ಶ್ರೀ ಸಂಗಮೇಶ್ವರ ಗುರು”ಗಳೆಂದು ಕೂಡಕರೆಯಲಾಗುತ್ತಿದ್ದು ವಿಶ್ವಗುರು ಬಸವಣ್ಣನವರು ಇವರ ಧಾರ್ಮಿಕ ಆಚರಣೆಗಳು ಹಾಗೂಪ್ರವಚನಗಳಿಂದ ಪ್ರಭಾವಿತರಾಗಿದ್ದು ಇದೇ ಬಸವಣ್ಣನವರ ಪರಿವರ್ತನೆಗೆ ಕಾರಣವಾಗಿತ್ತುಎಂದು ಹೇಳಲಾಗುತ್ತದೆ. ಇದಾದ ನಂತರ ಶ್ರೀ ಸಾರಂಗ ಮಠದ ಜೊತೆಗೆ ಒಡನಾಟಇಟ್ಟುಕೊಂಡ ಬಸವಣ್ಣನವರು ತಮ್ಮ ಅಕ್ಕ ನಾಗಮ್ಮನವರ ಜೊತೆಯಲ್ಲಿ ಸಂಗಮಕ್ಕೆ ಬಂದುನೆಲೆಸಿದರು ಎಂದು ಹೇಳಲಾಗಿದೆ.ಶ್ರೀ ಜಾತವೇದ ಮುನಿಗಳ ನಂತರ ಬಂದ ಎಲ್ಲಾ ಗುರುಗಳೂ ಶ್ರೀಗಳ ಹೆಸರನ್ನೇಅಭಿದಾನ ಪಡೆದು ಬಂದಿದ್ದರಿಂದಾಗಿ ಮುಂದಿನ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲ. ಹಾಗು ಶ್ರೀಮಠವು ಕಾಲಾನಂತರದಲ್ಲಿ ಬಹುಕಾಲ ಖಾಲಿ ಉಳಿದಿರುವಂತೆತೋರುತ್ತಿದ್ದು ಪ್ರಸ್ತುತ ಶ್ರೀ ಅಭಿನವ ಜಾತವೇದಮುನಿ ಶಿವಾಚಾರ್ಯ ಸ್ವಾಮಿಗಳು ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. 1989ರ ಜನವರಿ 14ರಲ್ಲಿ ಪಟ್ಟಾಧಿಕಾರವಹಿಸಿಕೊಂಡ ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಶ್ರೀ ಮಠಕ್ಕೂ ಹಾಗೂ ಕೂಡಲಸಂಗಮನಾಥ ದೇವಸ್ಥಾನಕ್ಕೂ ಅವಿನಾಭಾವಸಂಬಂಧವಿದ್ದು ಇಂದಿಗೂ ದೇವಸ್ಥಾನದ ಕಾರ್ಯಕ್ರಮಗಳು ಹಾಗೂ ಜಾತ್ರೆಯಸಂದರ್ಭದಲ್ಲಿ ಶ್ರೀಮಠದ ಶ್ರೀಗಳೇ ಪ್ರಮುಖ ಪಾತ್ರ ವಹಿಸುತ್ತಾರೆ.

Swamiji

Swamiji Name :
ಶ್ರೀ ಷ.ಬ್ರ. ಅಭಿನವ ಜಾತವೇದಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
26-10-1980
Place :
ಕೂಡಲಸಂಗಮ ಹುನಗುಂದ ತಾ||
Pattadikara :
14-1-1989
Photo :

Programs

ಆಳಂದ ಮಠದಲ್ಲಿ ಮಹಾಶಿವರಾತ್ರಿಗೆ ಕರ್ತೃ ಶಿವಯೋಗಿಗಳ
ಪುಣ್ಯಸ್ಮರಣೋತ್ಸವ ಹಾಗೂ ಪುರಾಣ ಪ್ರವಚನ.

ಗೌರಿ ಹುಣ್ಣಿಮೆಗೆ ಲಿಂ. ಶ್ರೀ ಷ.ಬ್ರ. ಬಸವಲಿಂಗ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.

ಪ್ರತಿ ತಿಂಗಳು ಜಾಲವಾದಿ ಮಠದಲ್ಲಿ ಶಿವಾನುಭವ ಗೋಷ್ಠಿ.

Institutions

ಸಂಸ್ಕøತ ಪಾಠಶಾಲೆ

Photos

Full Address Kannada

ಶ್ರೀ ಸಾರಂಗ ಮಠ
ಸುಕ್ಷೇತ್ರ ಕೂಡಲ ಸಂಗಮ - 587 115
ಹುನಗುಂದ ತಾ||, ಬಾಗಲಕೋಟೆ ಜಿ||

Map

Near by Places

ಕೂಡಲಸಂಗಮಕ್ರಾಸ್ - 7 ಕಿ.ಮೀ.
ಹುನಗುಂದ - 25 ಕಿ.ಮೀ.
ಆಲಮಟ್ಟಿ ಡ್ಯಾಂ - 30 ಕಿ.ಮೀ.
ಬಾಗಲಕೋಟೆ - 40 ಕಿ.ಮೀ.

Statistic

334 Views
0 Rating
0 Favorite
1 Share
error: Content is protected !!