ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ಹೊರಭಾಗದಲ್ಲಿ ಕೃಷ್ಣಾನದಿಯ ದಂಡೆಯ ಮೇಲೆ ಸುಮಾರು 18ನೇ ಶತಮಾನದ ಮಧ್ಯಭಾಗದಲ್ಲಿ ಶ್ರೀ. ಮ.ನಿ.ಪ್ರ.ಬಸವಲಿಂಗ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಸಂಗನಬಸವ ಮಠವುಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಸಂಗನಬಸವ ಮಹಾಸ್ವಾಮಿಗಳಿಂದಾಗಿ ಪ್ರಸಿದ್ದಗೊಂಡುಅವರ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿದೆ.ಶ್ರೀ ಸಂಗನಬಸವ ಮಹಾಸ್ವಾಮಿಗಳು ಶ್ರೀಮಠದ 4ನೇ ಪೀಠಾದಿಪತಿಗಳಾಗಿ1921ರ ಜನವರಿಯಲ್ಲಿ ಚಿತ್ರದುರ್ಗ ಬೃಹನ್ಮಠದ ಪರಮ ಪೂಜ್ಯ ಶ್ರೀ ಮುರುಘರಾಜೇಂದ್ರಮಹಾಸ್ವಾಮಿಗಳ ಸಾನಿಧ್ಯದಲ್ಲಿ ಅಧಿಕಾರ ಸ್ವೀಕರಿಸಿದರು. ಶ್ರೀಗಳು ತಮ್ಮ ಲಿಂಗಪೂಜೆ,ಜಂಗಮದಾಸೋಹ, ಜ್ಞಾನದಾಸೋಹ ಕಾರ್ಯಗಳಿಂದ ಧನ್ಯತೆ ಅನುಭವಿಸುತ್ತ ಜನಮನಕ್ಕೆಹತ್ತಿರವಾಗಿ ಸದ್ಭಕ್ತರಲ್ಲಿ ಸದ್ವರ್ತನೆಯನ್ನು, ಮೌಲ್ಯಯುತ ಜೀವನವನ್ನು ಬಾಳುವಂತೆಪ್ರೇರೇಪಿಸಿದರು.ಶ್ರೀ ಸಂಗನಬಸವ ಮಹಾಸ್ವಾಮಿಗಳು ಸ್ವತಃ ಕಾಯಕಯೋಗಿಗಳಾಗಿ ಶ್ರೀ ಸವದಿಮಠದ ಹೊಲದಲ್ಲಿ ತಾವೇ ಸ್ವತಃ ರೈತರೊಂದಿಗೆ ಸೇರಿ ಕೃಷಿ ಕಾರ್ಯಗಳನ್ನುನೆರವೇರಿಸುತ್ತಿದ್ದರು. ಹಾಗೂ ಶ್ರೀಮಠದ ಕಟ್ಟಡವನ್ನು ಕಟ್ಟಲು ¨s Àಕ ್ತರಸಹಕಾರವನ್ನುಪಡೆದುಕೊಳ್ಳದೇ ತಾವೇ ಸ್ವತಃ ಇಟ್ಟಿಗೆ ನಿರ್ಮಿಸಿಕೊಂಡು ಗೋಡೆಗಳನ್ನುನಿರ್ಮಿಸಿ ಕಟ್ಟಡವನ್ನು ಪೂರ್ಣಗೊಳಿಸಿದ ಮಹಾಮಹಿಮರು. ಏನೂ ಇಲ್ಲದ ಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸಿದ ಶ್ರೀಗಳು 1941ರಲ್ಲಿ ಲಿಂಗದೊಳಗಾದರು.ಆ ಮಹಾಬೆಳಗಿನಲ್ಲೇ ಮುನ್ನಡೆದು ಅವರ ಆಶೀರ್ವಾದಬಲದಿಂದಲೇ ಶ್ರೀಮಠಕ್ಕೆಪಟ್ಟಾಧಿಕಾರಿಗಳಾಗಿ ಬಂದವರು “ಮಹಾಂತ ಜೋಳಿಗೆ”ಯ ಹರಿಕಾರರಾದ ಶ್ರೀ ಇಳಕಲ್ಲಬೃಹನ್ಮಠದ ಪೂಜ್ಯ ಶ್ರೀ. ಡಾ. ಮಹಾಂತ ಶಿವಯೋಗಿಗಳು. ಬಾಲ್ಯದಿಂದಲೇ ಸವದಿಮಹಾಂತ ದೇವರೆಂದೇ ಬೆಳೆದ ಶ್ರೀಗಳು 1961ರ ಡಿಸಂಬರ್ 13ರಲ್ಲಿ ಶ್ರೀಮಠಕ್ಕೆಪಟ್ಟಾಧಿಕಾರಗೊಂಡು ಬಸವತತ್ವ ಪ್ರಸಾರದ ಮಹಾಮಣಿಹ ಕೈಗೊಂಡರು. 1970ರ ಮೇ16ರಂದು ಚಿತ್ತರಗಿ ಇಳಕಲ್ಲ ಶ್ರೀಮಠದ 19ನೇ ಅಧಿಪತಿಗಳಾಗಿ ಚಿತ್ತರಗಿ ಪೀಠವನ್ನೇರಿದಶ್ರೀಗಳು “ಮಹಾಂತ ಜೋಳಿಗೆ” ಹಾಗೂ ಶರಣ ಸಿದ್ದಾಂತ ವಿದ್ಯಾಪೀಠದ ರೂವಾರಿಯಾಗಿಶಿವಾನುಭವ ಶಿಬಿರ-ಕಮ್ಮಟಗಳನ್ನು ಜರುಗಿಸ ತೊಡಗಿದರು. 2005ರ ಜನವರಿ 19ರಲ್ಲಿ ಶೀ.ಮ.ನಿ.ಪ್ರ. ಗುರುಮಹಾಂತ ಮಹಾಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳಾಗಿ ಪಟ್ಟಕ್ಕೆತಂದಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳು
Date of Birth :
01-08-1930
Place :
ಹಿಪ್ಪರಗಿ, ಜಮಖಂಡಿ ತಾ||
Pattadikara :
13-02-1961
Photo :
Swamiji Name :
ಶ್ರೀ ಮ.ನಿ.ಪ್ರ. ಗುರುಮಹಾಂತ ಮಹಾಸ್ವಾಮಿಗಳು
Date of Birth :
27-05-1960
Place :
ನರಗುಂದ ನರಗುಂದ ತಾ||
Pattadikara :
19-01-2005
Photo :
Programs
ಪ್ರತಿ ತಿಂಗಳ 1ನೇ ತಾರೀಖು ಶಿವಾನುಭವಗೋಷ್ಠಿ ಬಸವಾದಿ ಶರಣರ ಜಯಂತಿಗಳ ಆಚರಣೆ ಛಟ್ಟಿ ಅಮವಾಸ್ಯೆಯಿಂದ ಎಳ್ಳು ಅಮವಾಸ್ಯೆವರಗೆ “ಶರಣ ಸಂಸ್ಕøತಿ ಮಹೋತ್ಸವ” ಪ್ರತಿ ವರ್ಷ 100 ರೈತ ದಂಪತಿಗಳಿಗೆ ಸನ್ಮಾನ ಹಾಗೂ ಶ್ರೀಗಳಿಂದ ರೈತರ ಪಾದಪೂಜೆ
Photos
Full Address Kannada
ಶ್ರೀ ಸಂಗನಬಸವ ಮಠ
ಸವದಿ - 591 240
ಅಥಣಿ ತಾ||, ಬೆಳಗಾವಿ ಜಿಲ್ಲೆ