ಶ್ರೀ ಸಾಂಬ ಶಿವಯೋಗೀಶ್ವರ ಸಂಸ್ಥಾನ ಹಿರೇಮಠ – ವ್ಹಿ.ಕೆ. ಸಲಗರ
ಕರ್ತೃ – ಶ್ರೀ ಧಿಗಂಬರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ವ್ಹಿ.ಕೆ. ಸಲಗರ ಗ್ರಾಮದ ಮಧ್ಯಭಾಗದಲ್ಲಿಅಸ್ತಿತ್ವದಲ್ಲಿರುವ ಶ್ರೀ ಸಾಂಬ ಶಿವಯೋಗೀಶ್ವರ ಸಂಸ್ಥಾನ ಹಿರೇಮಠವು ಶ್ರೀಮದ್ರಂಭಾಪುರಿ ಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಸಾವಿರ ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿದೆ ಎಂದು ಹೇಳಲಾಗುವಶ್ರೀಮಠದ ಮೂಲ ಹೆಸರು “ಶ್ರೀ ದಿಗಂಬರೇಶ್ವರ ಮಠ”ವೆಂದಿತ್ತು. ನಂತರ ಪರಂಪರೆಯಹಿಂದಿನ ಗುರುಗಳಾದ ತಪೋನಿಧಿ “ಶ್ರೀ ಷ.ಬ್ರ. ಸಾಂಬ ಶಿವಯೋಗಿ ಶಿವಾಚಾರ್ಯಮಹಾಸ್ವಾಮಿಗಳ” ಹೆಸರಿನಿಂದ ಗುರುತಿಸತೊಡಗಿದರು.ಶ್ರೀಮಠದ ಕರ್ತೃಗುರುಗಳೆಂದು ಪರಮಪೂಜ್ಯ ಶ್ರೀ ದಿಗಂಬರೇಶ್ವರಶಿವಾಚಾರ್ಯ ಮಹಾಸ್ವಾಮಿಗಳನ್ನು ಗುರುತಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಶ್ರೀ ದಿಗಂಬರೇಶ್ವರ ಶಿವಾಚಾರ್ಯರು ಮಹಾ ತಪಸ್ವಿಗಳಾಗಿದ್ದು, ಅನುಷ್ಠಾನ ಮೂರ್ತಿಗಳಾಗಿಜನರನ್ನು ಉದ್ದರಿಸಿದ್ದರು. ಸಲಗರ ಗ್ರಾಮದಲ್ಲಿ ದೀರ್ಘ ತಪವನ್ನಾಚರಿಸಿದ ಶ್ರೀಗಳುಶಿವಯೋಗ ಸಿದ್ದಿಯನ್ನು ಗಳಿಸಿಕೊಂಡು ತಮ್ಮ ಪವಾಡಗಳಿಂದ ಮನೆಮಾತಾದವರು.ಇವರು ಅನೇಕ ಸತ್ಕಾರ್ಯಗಳನ್ನು ಮಾಡಿ ಭೂಮಿಯಲ್ಲಿ ಅಂತರ್ಗತರಾಗಿ ನಿರ್ವಿಕಲ್ಪಸಮಾಧಿಯಾದರಂತೆ. ಇಂತಹ ಮಹಾಯೋಗಿಗಳ ಅನುಷ್ಠಾನದಿಂದ ಜಾಗೃತಸ್ಥಳವಾಗಿರೂಪುಗೊಂಡ ಈ ಸ್ಥಳದಲ್ಲಿ ಶತಮಾನಗಳಿಂದ ಶ್ರೀಮಠವು ಅಸ್ತಿತ್ವವನ್ನು ಉಳಿಸಿಕೊಂಡುಬಂದಿದೆ.ಶ್ರೀಮಠದ ಪರಂಪರೆಯು ಅತಿ ಪ್ರಾಚೀನವಾಗಿದ್ದು ಎಂದು ತಿಳಿದುಬರುತ್ತದಾದರೂ ಆಡಳಿತ ನಡೆಸಿರಬಹುದಾದ ಗುರುಗಳ ಕುರಿತು ಮಾಹಿತಿಗಳಅಲಭ್ಯತೆಯಿಂದಾಗಿ ಸ್ಪಷ್ಟವಾಗಿ ದಾಖಲಿಸಲು ಸಾಧ್ಯವಾಗುವುದಿಲ್ಲ. ಲಭ್ಯ ಮಾಹಿತಿಗಳಪ್ರಕಾರ ಶ್ರೀ ಮಠದಲ್ಲಿ ಆಡಳಿತ ನಡೆಸಿರುವ ಗುರುಗಳ 16 ಗದ್ದುಗೆಗಳು ನಾನಾ ಭಾಗಗಳಲ್ಲಿದೊರೆತಿವೆ. ಆದರೆ ಇನ್ನುಳಿದ ಗದ್ದುಗೆಗಳು ಎಲ್ಲಿ ಸ್ಥಾಪಿತಗೊಂಡಿವೆ ಎಂಬುದರ ಕುರಿತಾಗಿತಿಳಿದು ಬರುವುದಿಲ್ಲ. ಮಠದ ಪರಂಪರೆಯ ಈಗ್ಗೆ ಮೂರು ತಲೆಮಾರುಗಳ ಕುರಿತಾಗಿಮಾತ್ರ ಸ್ಪಷ್ಟವಾದ ಮಾಹಿತಿಗಳು ದೊರಕುತ್ತವೆ.ಶ್ರೀಮಠದ ಹಿಂದಿನ ಗುರುಗಳ ಅನುಗ್ರಹ ಗುರುಗಳಾಗಿದ್ದ ಶ್ರೀ ಷ.ಬ್ರ. ಸಿದ್ದೇಶ್ವರಶಿವಾಚಾರ್ಯ ಮಹಾಸ್ವಾಮಿಗಳ ನಂತರದ ಕಾಲಘಟ್ಟದಲ್ಲಿ ಶ್ರೀಮಠವು ನಾಡಿನುದ್ದಗಲಕ್ಕೂತನ್ನ ಪ್ರಭಾವ ಹೊಂದಿ ಪ್ರಮುಖ ಮಠಗಳಲ್ಲಿ ಒಂದಾಗಿ ಬೆಳೆದಿದೆ. ಶ್ರೀ ಷ.ಬ್ರ. ಸಿದ್ದೇಶ್ವರಶಿವಾಚಾರ್ಯರು ಮಹಾದಾಸೋಹಿಗಳಾಗಿ ಮಠದಲ್ಲಿ ನಿರಂತರ ದಾಸೋಹವನ್ನುನಡೆಸಿದರು. ಇವರ ಕಾಲದಲ್ಲಿ ಶ್ರೀಮಠವು ದಾಸೋಹ ಮಂದಿರವಾಗಿ ಪ್ರಸಿದ್ದಿಗೊಂಡಿದ್ದು,ಧಾರ್ಮಿಕ ಹಾಗೂ ಸಾಮಾಜಿಕವಾಗಿಯೂ ಶ್ರೀಮಂತಗೊಂಡು ಭಕ್ತರನ್ನು ಉದ್ಧರಿಸಿದೆ.
ಹಿಂದಿನ ಶ್ರೀಗಳಾದ ತಪೋನಿಧಿ ಬಾಲತಪಸ್ವಿ ಶ್ರೀ ಸಾಂಬ ಶಿವಯೋಗಿಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ 12ನೇ ವಯಸ್ಸಿನಲ್ಲಿಯೇ ಏಡಶಿಯ ಅರಣ್ಯದಲ್ಲಿದೀರ್ಘ ತಪಸ್ಸನ್ನಾಚರಿಸಿ ಸಿದ್ದಿಯನ್ನು ಪಡೆದುಕೊಂಡವರು. ಇಂತಹ ಬಾಲ ತಪಸ್ವಿಶಿವಯೋಗಿಗಳು ಸಲಗರದ ಶ್ರೀಮಠದಲ್ಲಿ ಅನೇಕ ಪವಾಡಗಳನ್ನು ಮಾಡಿ ಭಕ್ತರ ಉದ್ದಾರಕ್ಕೆಶ್ರಮಿಸಿದರು. ಶಿವಪೂಜೆ, ಈಶ್ವರ ಚಿಂತನೆಯಿಂದ ಕಷ್ಟಗಳು ಪರಿಹಾರವಾಗುತ್ತವೆ ಎಂಬಉಕ್ತಿಯನ್ನು ಹೇಳಿ ಜನರಲ್ಲಿ ಧಾರ್ಮಿಕ ಸಂಸ್ಕಾರವನ್ನು ಮೂಡಿಸಿದರು. ಶ್ರೀಗಳುಮರಣಹೊಂದಿದ 26 ಶವಗಳಿಗೆ ಪುನರ್ಜನ್ಮ ನೀಡಿದರು ಎಂಬ ಬಗ್ಗೆ ಜನಪದದ ಪ್ರಕಾರಮಾಹಿತಿ ಇದ್ದು ಗುರುಗಳು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಅನೇಕ ಸಾಧನೆಗಳುಸಮಾಜದ ಹಾಗೂ ಭಕ್ತರ ಒಳಿತಿಗೆ ಪೂರಕವಾಗಿದ್ದವು. ಇಂತಹ ಮಹಾಪುರುಷರು ಲೋಕಸಂಚಾರದಲ್ಲಿದ್ದಾಗ ಸೋಲ್ಲಾಪುರ ಜಿಲ್ಲೆಯ ಕುರ್ಡುವಾದಿಯಲ್ಲಿ ಲಿಂಗೈಕ್ಯರಾಗಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ತಪೋರತ್ನ ಬಾಲತಪಸ್ವಿ ದ್ವಿತೀಯ ಸಾಂಬಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು 1996ರ ಫೆಬ್ರವರಿ 15ರಂದು ಶ್ರೀ ಮಠದಅಧಿಕಾರ ಸ್ವೀಕರಿಸಿದ್ದು ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡುಕಾರ್ಯತತ್ಪರರಾಗಿದ್ದಾರೆ. ಶ್ರೀಗಳು ಆಲೂರು, ಸೋಲಾಪುರ ಮತ್ತು ಬಾಳೆಹೊನ್ನೂರಿನರಂಭಾಪುರಿ ಪೀಠಗಳಲ್ಲಿ ಸಂಸ್ಕøತ, ವೇದ, ಜ್ಯೋತಿಷ್ಯ ಹಾಗೂ ಆಧ್ಯಾತ್ಮ ಶಿಕ್ಷಣವನ್ನುಪೂರೈಸಿದ್ದು ರಂಭಾಪುರಿ ಜಗದ್ಗುರುಗಳ ಕೃಪಾಶೀರ್ವಾದದಿಂದ ಶ್ರೀಮಠಕ್ಕೆ ಪಟ್ಟಾಧಿಕಾರದಅನುಗ್ರಹವನ್ನು ಪಡೆಯುತ್ತಾರೆ.ಶ್ರೀ ಷ.ಬ್ರ. ತಪೋರತ್ನ ಬಾಲತಪಸ್ವಿ ದ್ವಿತೀಯ ಸಾಂಬ ಶಿವಯೋಗಿಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟಕ್ಕೆ ಬಂದ ನಂತರ ಶ್ರೀಮಠವನ್ನು ಅಭಿವೃದ್ದಿಗೊಳಿಸಿಸುಸ್ಥಿತಿಗೆ ತಂದಿದ್ದಾರೆ. ಅಲ್ಲದೇ ಹಿಂದಿನ ಶ್ರೀಗಳು ನಡೆಸುತ್ತಿದ್ದ ಧಾರ್ಮಿಕ ಕಾರ್ಯಗಳನ್ನುಮುಂದುವರೆಸಿಕೊಂಡು ಬಂದಿದ್ದಾರೆ. ಶ್ರೀಗಳು ಶೈಕ್ಷಣಿಕವಾಗಿಯೂ ಶ್ರೀಮಠವನ್ನುಅಭಿವೃದ್ಧಿಗೊಳಿಸುತ್ತಿದ್ದು ಹಲವಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಆ ಮುಖೇನ ಈಭಾಗದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ವಿಶೇಷತೆ
ಪ್ರತಿ ವರ್ಷ “ಧರ್ಮ ವೀರ ಪ್ರಶಸ್ತಿ” ಪ್ರಧಾನ
Swamiji
Swamiji Name :
ಶ್ರೀ ಷ.ಬ್ರ. ಕಪೋರತ್ನ ಬಾಲತಪಸ್ವಿ ದ್ವಿತೀಯ ಸಾಂಬ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
30-11-1977
Place :
ಆಲೂರು, ಜೇವರ್ಗಿ ತಾ||
Pattadikara :
15-02-1996
Photo :
Programs
ಪ್ರತಿ ಅಮವಾಸ್ಯೆಗೆ ಶ್ರೀಗಳ ದರ್ಶನ ಹಾಗೂ ಮಹಾಪ್ರಸಾದ
ಜನವರಿ 14ಕ್ಕೆ ಶ್ರೀ ಸಾಂಬ ಶಿವಯೋಗೇಶ್ವರ ಜಾತ್ರೆ
ಯುಗಾದಿ ಆದ 20ನೇ ದಿನಕ್ಕೆ ಶ್ರೀ ಮಠದ ರಥೋತ್ಸವ
ಶ್ರಾವಣ ಮಾಸದಲ್ಲಿ ಶ್ರೀಮಠದಲ್ಲಿ ತಪೋನುಷ್ಠಾನ ಮತ್ತು ಸಾಮೂಹಿಕ ಇಷ್ಟಲಿಂಗ ಮಹಾ ಪೂಜೆ ಶ್ರೀಮಠದಲ್ಲಿ ವರ್ಷದಲ್ಲಿ ಆರೋಗ್ಯ, ಯೋಗ, ಧರ್ಮಜಾಗೃತಿ ಶಿಬಿರಗಳು ಜರುಗುತ್ತವೆ ಹಾಗೂ ದುಶ್ಚಟಗಳಿಂದ ಭಕ್ತರು ದೂರ ಇರುವ ಕಾರ್ಯಕ್ರಮಗಳು
Institutions
ಸಂಸ್ಕøತ ವೇದ ಪಾಠಶಾಲೆ
ಸಂಗೀತ ಪಾಠಶಾಲೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ವಿದ್ಯಾರ್ಥಿ ನಿಲಯ ಅನಾಥಾಶ್ರಮ, ವೃದ್ಧಾಶ್ರಮ
Photos
Full Address Kannada
ಶ್ರೀ ಸಾಂಬ ಶಿವಯೋಗೀಶ್ವರ ಸಂಸ್ಥಾನ ಹಿರೇಮಠ
ವ್ಹಿ.ಕೆ. ಸಲಗರ - 585 316
ಆಳಂದ ತಾ||, ಕಲಬುರಗಿ ಜಿಲ್ಲೆ