Shree Samadhi Matha – Nippani

Shree Samadhi Matha – Nippani Claimed

ಶ್ರೀ ಸಮಾದಿ ಮಠ - ನಿಪ್ಪಾಣಿ

Average Reviews

Description

ಶ್ರೀ ಸಮಾದಿ ಮಠ – ನಿಪ್ಪಾಣಿ

ಕರ್ತೃ – ಪೂಜ್ಯ ಶ್ರೀ ವಿರುಪಾಕ್ಷಲಿಂಗ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿ ಪಟ್ಟಣದ ಹೊರಭಾಗದಲ್ಲಿಸುಮಾರು ಇನ್ನೂರು ವರ್ಷಗಳ ಹಿಂದೆ ಪೂಜ್ಯ ಶ್ರೀ ವಿರೂಪಾಕ್ಷಲಿಂಗ ಮಹಾಸ್ವಾಮಿಗಳಿಂದಸ್ಥಾಪಿತಗೊಂಡಿರುವ ಶ್ರೀ ಸಮಾದಿ ಮಠವು ತನ್ನ ಕರ್ತೃತ್ವ ಶಕ್ತಿಯಿಂದಾಗಿ ಹಾಗೂ ಧಾರ್ಮಿಕಆಚರಣೆಗಳಿಂದಾಗಿ ಈ ಭಾಗದ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿಶ್ರಮಿಸುತ್ತಿದೆ.ಕರ್ತೃಗುರುಗಳಾದ ಪೂಜ್ಯ ಶ್ರೀ ವಿರೂಪಾಕ್ಷಲಿಂಗ ಮಹಾಸ್ವಾಮಿಗಳು ಮಹಾನ್ಆಧ್ಯಾತ್ಮ ಜೀವಿಗಳಾಗಿದ್ದು ತಮ್ಮ ಅನುಷ್ಠಾನಗಳಿಂದ ಆಧ್ಯಾತ್ಮ ಸಿದ್ದಿಯನ್ನು ಪಡೆದುಪ್ರಸಿದ್ಧಗೊಂಡಿದ್ದರು. ಶ್ರೀಗಳು ತಮ್ಮ ಅನುಷ್ಠಾನ ಬಲದಿಂದ, ಧಾರ್ಮಿಕ ಹಾಗೂ ಸಾಮಾಜಿಕಕಾರ್ಯಕ್ರಮಗಳಿಂದ ಭಕ್ತರನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆಶ್ರೀಮಠವನ್ನು ಮುನ್ನಡೆಸಿದ್ದಾರೆ. ಶ್ರೀಗಳು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿ ನಿರ್ವಿಕಲ್ಪಸಮಾದಿಯಾದರೆಂದು ಹೇಳಲಾಗುತ್ತದೆ.ಕರ್ತೃಗುರುಗಳ ನಂತರ ಸುಮಾರು 150 ವರ್ಷಗಳಿಗೂ ಅಧಿಕ ಕಾಲ ಶ್ರೀಮಠವುಖಾಲಿ ಉಳಿದಿದ್ದು ಶ್ರೀಮಠದ ಭಕ್ತರೇ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಬಂದಿದ್ದಾರೆ.ಭಕ್ತರೇ ಶ್ರೀ ವಿರೂಪಾಕ್ಷಲಿಂಗ ಸಮಾದಿ ಟ್ರಸ್ಟ್ನ್ನು ಸ್ಥಾಪಿಸಿಕೊಂಡು ಆ ಮೂಲಕಶ್ರೀಮಠವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಕಾಲಾನಂತರ ಭಕ್ತರು ಶ್ರೀಮಠವುಗುರುಗಳಿಲ್ಲದೇ ಇರುವುದು ಒಳಿತಲ್ಲವೆಂದು ಮನಗಂಡು 2011 ರ ಮೇ 22 ರಲ್ಲಿ ಶ್ರೀಸಂಗಮದೇವ ಸ್ವಾಮಿಗಳನ್ನು ಅಧಿಕಾರಕ್ಕೆ ತರುತ್ತಾರೆ. ಶ್ರೀಗಳು ಶ್ರೀಮಠದ ಧಾರ್ಮಿಕಆಚರಣೆಗಳನ್ನು ಚುರುಕುಗೊಳಿಸಿ ಮುನ್ನಡೆದಿರುವಾಗಲೇ ಕೇವಲ 14 ತಿಂಗಳುಗಳ ಕಾಲಶ್ರೀಮಠವನ್ನು ಮುನ್ನಡೆಸಿ 2012ರ ಜುಲೈ 31ರಲ್ಲಿ ಲಿಂಗೈಕ್ಯರಾದರು.ಆನಂತರ ಭಕ್ತರು ಸಭೆ ಸೇರಿ ಗುರುಗಳ ಶಿಷ್ಯರಾಗಿದ್ದುಕೊಂಡು ಮಠದಆಗುಹೋಗುಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಈಗಿನ ಶ್ರೀಗಳಾದ ಪೂಜ್ಯ ಶ್ರೀಪ್ರಾಣಲಿಂಗ ಸ್ವಾಮೀಜಿಗಳನ್ನು ಶ್ರೀಮಠದ ಪೀಠಾಧಿಪತಿಗಳಾಗಿ 2012ರ ಆಗಸ್ಟ್ 18ರಲ್ಲಿಅಧಿಕಾರಕ್ಕೆ ತಂದಿದ್ದಾರೆ. ಶ್ರೀಗಳು ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿರುವುದಲ್ಲದೇ ಗೋರಕ ್ಷಣೆಯಲ್ಲೂ ತೊಡಗಿಕೊಂಡಿದ್ದಾರೆ. ಶ್ರೀಮಠದಲ್ಲಿಗೋಶಾಲೆಯನ್ನು ಸ್ಥಾಪಿಸಿರುವ ಶ್ರೀಗಳು ಆ ಮುಖೇನ ಕಸಾಯಿಖಾನೆಗಳ ಪಾಲಾಗುವಗೋವುಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

Swamiji

Swamiji Name :
ಪೂಜ್ಯ ಶ್ರೀ ಪ್ರಾಣಲಿಂಗ ಸ್ವಾಮೀಜಿ
Date of Birth :
01-01-1976
Place :
ಅನಂತಪುರ, ಅಥಣಿ ತಾ||
Pattadikara :
18-08-2012
Photo :

Programs

ಪ್ರತಿ ಹುಣ್ಣಿಮೆಗೆ ಶ್ರೀದೇವಿ ಹೋಮ ಹಾಗೂ
108 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ
ನವರಾತ್ರಿಯಲ್ಲಿ ನಿತ್ಯ ಚಂಡಿಹೋಮ &
ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಪುರಾಣ ಪ್ರವಚನ
ಭರತ ಹುಣ್ಣಿಮೆಯಂದು ಶ್ರೀಮಠದ ಜಾತ್ರೆ ಹಾಗೂ 7 ದಿನಗಳ ಕಾಲ
ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು

Institutions

ವಿದ್ಯಾರ್ಥಿ ನಿಲಂi ಗೋಶಾಲೆ

Photos

Full Address Kannada

ಶ್ರೀ ಸಮಾಧಿ ಮಠ
ಚಿಕ್ಕೋಡಿ ರೋಡ್, ನಿಪ್ಪಾಣಿ - 591 237
ಚಿಕ್ಕೋಡಿ ತಾ||, ಬೆಳಗಾವಿ ಜಿಲ್ಲೆ

Map

Near by Places

ನಿಪ್ಪಾಣಿ - 2 ಕಿ.ಮೀ.
ಚಿಕ್ಕೋಡಿ - 10 ಕಿ.ಮೀ.
ಬೆಳಗಾವಿ - 72 ಕಿ.ಮೀ.

Statistic

2 Views
0 Rating
0 Favorite
0 Share
error: Content is protected !!