Shree Salilakhya Matha / Kannada Matha

Shree Salilakhya Matha / Kannada Matha Claimed

ಶ್ರೀ ಸಲಿಲಾಖ್ಯ ಮಠ

Average Reviews

Description

ಶ್ರೀ ಸಲಿಲಾಖ್ಯ ಮಠ / ಕನ್ನಡಮಠ

ಕರ್ತೃ – ಶ್ರೀ ಯಡೆಯೂರು ಸಿದ್ದಲಿಂಗೇಶ್ವರರು

ಯಡೆಯೂರು ಸಿದ್ದಲಿಂಗೇಶ್ವರ ಕಾಲಘಟ್ಟ ಕರ್ನಾಟಕದ ಧಾರ್ಮಿಕಇತಿಹಾಸದಲ್ಲಿ ಮಹತ್ತ್ವದ ಕಾಲಘಟ್ಟ ಶ್ರೀ ಯಡೆಯೂರು ಸಿದ್ದಲಿಂಗೇಶ್ವರ ನೂರೊಂದುವಿರಕ್ತರೊಡನೆ ನಾಡಿನಾದ್ಯಂತ ಸಂಚರಿಸಿ ಧರ್ಮ ಪ್ರಚಾರ ಕೈಗೊಂಡ ಕಾಲಘಟ. ಆಕಾಲಘಟ್ಟದಲ್ಲಿ ಶ್ರೀ ಸಿದ್ದಲಿಂಗೇಶ್ವರರು ಅನುಷ್ಠಾನ ಕೈಗೊಂಡು ಸ್ಥಾಪಿಸಿದ ಮಠವೇ ಶ್ರೀಸಲಿˉÁಖ್ಯ ಮಠ ಅಥವಾ ಕನ್ನಡ ಮಠ – ಬೆಟ್ಟದಪುರ.ನಂತರದ ಕಾಲಘಟ್ಟದಲ್ಲಿ ಶ್ರೀ ಚಿಕ್ಕವೀರ ದೇಶಿಕೇಂದ್ರ ಸ್ವಾಮಿಗಳು. ಶ್ರೀಲೀˉÁಖ್ಯವೀರ ಮಹೇಶ್ವರರ ಪುತ್ರರಾಗಿ ಜನಿಸಿ ಸಂಚಾರ ಕೈಗೊಂಡು ಬೆಟ್ಟದಪುರ ಮಠಕ್ಕೆಬಂದು ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿರಕ್ತ ಸ್ವಾಮಿಗಳ ಸೇವೆ ಮಾಡುತ್ತಿದ್ದರು.ಗುರುಗಳ ಪ್ರೀತಿಗೆ ಪಾತ್ರರಾದ ಶ್ರೀ ಚಿಕ್ಕವೀರ ಸ್ವಾಮಿಗಳು ಮಠದ ಉತ್ತರಾಧಿಕಾರಿಗಳಾಗಿನೇಮಕಗೊಂಡಾಗ ಕೆಲ ಪಟ್ಟಭದ್ರ ಹಿತಾಸಕ್ತಿಗಳ ವಿರೋದದಿಂದಾಗಿ ಮಠ ಬಿಟ್ಟುಹೊರನಡೆದರು. ಶ್ರೀಗಳು ಅಲ್ಲಿಂದ ಸಂಚಾರದಲ್ಲಿ ಹಾಸನ ಜಿˉÉ್ಲ ಮುಕುಂದೂರಿನತೋಪಿನಲ್ಲಿ ಅನುಷ್ಠಾನ ಕೈಗೊಂಡಿದ್ದಾಗ ಮತ್ತೆ ಬೆಟ್ಟದಪುರದ ಭಕ್ತರು ಗುರುಗಳನ್ನುಹುಡುಕಿಕೊಂಡು ಬಂದು ಮಠಕ್ಕೆ ಮರಳಬೇಕೆಂದು ಬೇಡಿಕೊಳ್ಳುತ್ತಾರೆ. ಶ್ರೀಗಳು ಭಕ್ತರಬಿನ್ನಹ ಮನ್ನಿಸಿ ಮಠಕ್ಕೆ ಮರಳಿ ಭಕ್ತರನ್ನುದ್ದರಿಸಿದರು. ಶ್ರೀಗಳ ಕಾಲದಲ್ಲಿ ಉಚ್ಛ್ರಾಯ ಸ್ಥಿತಿತಲುಪಿದ ಶ್ರೀಮಠವನ್ನು ಗುರುಗಳ ಹೆಸರಿನಿಂದˉÉೀ ಗುರುತಿಸˉÁಗುತ್ತದೆ.ಶ್ರೀ ಚಿಕ್ಕವೀರ ಸ್ವಾಮಿಗಳ ನಂತರ ಮಠದ ಅಧಿಕಾರಕ್ಕೆ ಬಂದ ಶ್ರೀ ಮ.ನಿ.ಪ್ರ.ಚನ್ನವೀರ ದೇಶಿಕೇಂದ್ರ ಸ್ವಾಮಿಗಳು ಮಠದ ಅಭಿವೃದ್ಧಿಗೆ ಕಂಕಣತೊಟ್ಟು ಗುರುಗಳ ಗದ್ದುಗೆಗೆಕಲ್ಲು ಕಟ್ಟಡ ಕಟ್ಟಿಸಿದ್ದಲ್ಲದೇ ವಸತಿ ಗೃಹವನ್ನೂ ಕಟ್ಟಿಸಿ ಪುರಾತನ ಮಠವನ್ನುಸರ್ವತೋಮುಖ ಅಭಿವೃದ್ದಿಗೊಳಿಸಿದರು. ಶ್ರೀಗಳು ತಮ್ಮ ಕ್ರಿಯಾಶೀಲ ವ್ಯಕ್ತಿತ್ತ್ವದಿಂದಮಠದ ಆಸ್ತಿಯನ್ನು ಹೆಚ್ಚಿಸಿದ್ದು ತಮ್ಮ ಉತ್ತರಾಧಿಕಾರಿಗಳನ್ನಾಗಿ ಪ್ರಸ್ತುತ ಶ್ರೀಗಳನ್ನು ನೇಮಿಸಿಲಿಂಗೈಕ್ಯರಾದರು. ಪ್ರಸ್ತುತ ಶ್ರೀಗಳಾದ ಶ್ರೀ ಮ.ನಿ.ಪ್ರ. ಚನ್ನಬಸವ ದೇಶಿಕೇಂದ್ರ ಸ್ವಾಮಿಗಳು1981ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿ ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.ಸಾಹಿತ್ಯ ಮತ್ತು ಧರ್ಮದ ಬಗ್ಗೆ ಅಪಾರ ಬಲವನ್ನು ಬೆಳೆಸಿಕೊಂಡು ಧರ್ಮಪ್ರಸಾರಕಾರ್ಯವನ್ನು ಮಾಡುತ್ತಿರುವ ಶ್ರೀಗಳು ಶ್ರೀಮಠದಲ್ಲಿ ಜೇಷ್ಠ ಮಾಸದಲ್ಲಿ ಶ್ರೀ ಹಿರಿಯಗುರುಗಳ ಪುಣ್ಯಾರಾಧನೆ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು
Date of Birth :
1965
Place :
ತಡಹಾಳ, ನವಲಗುಂದ ತಾ||
Pattadikara :
1981
Photo :

Programs

ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಜೇಷ್ಠ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ವರ್ಷದ ಹಬ್ಬಗಳನ್ನು ಶ್ರೀ ಮಠದಲ್ಲಿ ಆಚರಣೆ ಮಾಡಲಾಗುತ್ತದೆ

Institutions

ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದರ್ವಿ / ಪದವಿ ಕಾಲೇಜ್
ವಿದ್ಯಾರ್ಥಿ ನಿಲಯ
ಗೋಶಾಲೆ
ನರ್ಸಿಂಗ್ ಶಾಲೆ

Photos

Full Address Kannada

ಶ್ರೀ ಸಲಿಲಾಖ್ಯ ಮಠ / ಕನ್ನಡಮಠ
ಬೆಟ್ಟದಪುರ - 571 102
ಪಿರಿಯಾಪಟ್ಟಣ ತಾ||, ಮೈಸೂರು ಜಿಲ್ಲೆ

Map

Near by Places

ಬೆಟ್ಟದಪುರ 1 ಕಿ.ಮೀ.
ಪಿರಿಯಾಪಟ್ಟಣ 22 ಕಿ.ಮೀ.
ಮೈಸೂರು 70 ಕಿ.ಮೀ.

Statistic

19 Views
0 Rating
0 Favorite
0 Share
error: Content is protected !!