ಹಳಿಂಗಳಿ ಗ್ರಾಮದ ಹೊರವಲಯದ ಕೃಷ್ಣಾ ನದಿ ದಂಡೆಯಲ್ಲಿ ಶ್ರೀ ಸದುರು ಶರಣ ಬಸವೇಶ್ವರ ಮಹಾರಾಜರಿಂದ 1938ರಲ್ಲಿ ಪ್ರಾರಂಭಗೊಂಡಿರುವ ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಕಮರಿಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಮುನ್ನಡೆಯುತ್ತಿದೆ. ಶ್ರೀಗಳು ಲಚ್ಚಾಣದಲ್ಲಿ ಶ್ರೀ ಶಂಕರಲಿಂಗ ಮಠದ ಸ್ಥಾಪಕರಾದ ಶ್ರೀ ಸಿದ್ದಲಿಂಗ ಮಹಾರಾಜರ ಶಿಷ್ಯರಾಗಿದ್ದುಕೊಂಡು ಆಧ್ಯಾತ್ಮಿಕ ದರ್ಶನ ಮಾಡಿದವರು. ನಂತರದಲ್ಲಿ ಶ್ರೀ ಅಮೀನ ಸಿದ್ದ ಮಹಾರಾಜರಿಂದ ಮಂತ್ರದೀಕ್ಷೆ ಪಡೆದು, ಶ್ರೀ ಕ್ಷೀರಾಲಿಂಗ ಮಹಾರಾಜರಿಂದ ಸನ್ಯಾಸ ದೀಕ್ಷೆ ಪಡೆದು ಲೋಕಸಂಚಾರ ಹೊರಟವರು. ಹೀಗೆ ಸಂಚಾರ ಹೊರಟ ಶ್ರೀಗಳು ಶ್ರೀಶೈಲ, ಕಾಶಿ, ಕೇದಾರ, ಹೃಷಿಕೇಶ, ಹರಿದ್ವಾರ, ನೇಪಾಳಗಳನ್ನು ಸಂದರ್ಶಿಸಿ ಅಲ್ಲಲ್ಲಿ ಅನುಷ್ಠಾನಗೊಂಡು ದಕ್ಷಿಣದತ್ತ ಸಂಚಾರ ಬೆಳೆಸಿ ತೇರದಾಳಕ್ಕೆ ಬಂದು ನೆಲೆನಿಲ್ಲುತ್ತಾರೆ. ಶ್ರೀಗಳು ತೇರದಾಳದಿಂದ ಹಳಿಂಗಳಿಗೆ ಬಂದು ಅಲ್ಲಿನ ಪರಿಸರ ಹಾಗೂ ಬಿಲ್ವವೃಕ್ಷಗಳ ಸಮೂಹದ ಸ್ಥಳಕಂಡು ಅಲ್ಲೇ ಅನುಷ್ಠಾನಗೊಂಡರು. ನಂತರ ಭಕ್ತರ ಸಹಕಾರದೊಂದಿಗೆ ತಮ್ಮ ಗುರುಗಳ ಸ್ಮರಣೆಯೊಂದಿಗೆ ಶ್ರೀಮಠವನ್ನು 1938ರಲ್ಲಿ ಸ್ಥಾಪನೆ ಮಾಡಿದರು. ಹೀಗೆ ಶ್ರೀಮಠವನ್ನು ಸ್ಥಾಪಿಸಿದ ಶ್ರೀಗಳು ತಮ್ಮ ಆಧ್ಯಾತ್ಮ ಸಾಧನೆಯಿಂದ, ಅನುಷ್ಠಾನ ಬಲದಿಂದ ಪವಾಡಗಳನ್ನು ನಡೆಸುತ್ತಾ ಶ್ರೀಮಠದ ಭಕ್ತರ ಪಾಲಿನ ದೇವರಾಗಿ ಕಂಡರು. ಶ್ರೀಗಳು ಸದಾ ಸಂಚಾರದಲ್ಲಿದ್ದು ಸುತ್ತಮುತ್ತಲಿನ ತಾಲ್ಲೂಕುಗಳ ಹಳ್ಳಿಗಳಿಗೆ ಹೋಗಿ ಅಲ್ಲಿ ಪ್ರವಚನ ನೀಡಿ ಭಕ್ತರನ್ನು ಸನ್ಮಾರ್ಗದತ್ತ ತರುತ್ತಿದ್ದರು. ಶ್ರೀಗಳು ಹೀಗೆ ತಮ್ಮ ಧಾರ್ಮಿಕ ಆಚರಣೆಗಳ ಮೂಲಕ ತಮ್ಮ ಗುರುಗಳ ಸ್ಮರಣೆಯಂತೆ ಮಠವನ್ನು ಮುನ್ನಡೆಸುತ್ತಾ 1983ರ ಮಾರ್ಚ್ 25ರಲ್ಲಿ ಈಗಿನ ಶ್ರೀಗಳಾದ ಶ್ರೀ ಸದ್ಗುರು ಶಿವಾನಂದ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಕ ಮಾಡಿ ಲಿಂಗೈಕ್ಯರಾದರು. ಪ್ರಸ್ತುತ ಸದ್ಗುರು ಶ್ರೀ ಶಿವಾನಂದ ಸ್ವಾಮಿಗಳು ಶ್ರೀಮಠದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತೀಕರಿಸುತ್ತಾ ಅಭಿವೃದ್ಧಿಯೆಡೆಗೆ ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಫಾಲ್ಗುಣ ಶುದ್ಧ ಏಕಾದಶಿಗೆ ಲಿಂ. ಶ್ರೀ ಸದ್ಗುರು ಶರಣ ಬಸವೇಶ್ವರ ಮಹಾರಾಜರ ಪುಣ್ಯಾರಾಧನೆಯನ್ನು ನಡೆಸಲಾಗುತ್ತಿದೆ.
Swamiji
Swamiji Name :
ಪೂಜ್ಯ ಶ್ರೀ ಸದ್ಗುರು ಶಿವಾನಂದ ಮಹಾಸ್ವಾಮಿಗಳು
Date of Birth :
27-3-1961
Place :
ನಂದೀಶ್ವರ, ಅಥಣಿ ತಾ||
Pattadikara :
25-3-1983
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ, ವಿಶೇಷ ಪೂಜೆ.
ಛಟ್ಟಿ ಅಮವಾಸ್ಯೆಗೆ ಕಾರ್ತಿಕೋತ್ಸವ ಫಾಲ್ಗುಣ ಶುದ್ಧ ಏಕಾದಶಿಗೆ ಲಿಂ. ಶ್ರೀ ಸದ್ಗುರು ಶರಣ ಬಸವೇಶ್ವರ ಮಹಾಸ್ವಾಮಿಗಳ ಪುಣ್ಯಾರಾದನೆ.
ಶ್ರಾವಣ ಮಾಸದಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ಹಾಗೂ ಪ್ರವಚನ.
ಫೆಬ್ರವರಿ 1 ಮತ್ತು 2 ರಂದು ವಿದ್ಯಾಸಂಸ್ಥೆ ವಾರ್ಷಿಕೋತ್ಸವ.
ಶ್ರೀ ಸದ್ಗುರು ಸಿದ್ದಲಿಂಗೇಶ್ವರ ಕಮರಿ ಮಠ
Institutions
ಪೂರ್ವ ಪ್ರಾಥಮಿಕ ಶಾಲೆ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ.
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯ.