ಕರ್ತೃ ಶ್ರೀ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಪುರಾತನ ವೀರಶೈವ ಮಠಗಳ ಕೇಂದ್ರಸ್ಥಾನವಾಗಿ ಗುರುತಿಸಿ ಕೊಂಡಿರುವರಟಗಲ್ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿರುವ ಶ್ರೀ ರೇವಣಸಿದ್ಧೇಶ್ವರ ಹಿರೇಮಠವುಸುಮಾರು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಗುರುಸ್ಥಲ ಮಠವೆಂದುಹೇಳಲಾಗುತ್ತದೆ. ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿ ಶಿಷ್ಯವರ್ಗದಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀಮಠವು ಪುರಾತನ ವೀರಶೈವ ಕೇಂದ್ರವಾಗಿದೆ.ಶ್ರೀಮಠದ ಕರ್ತೃಗುರುಗಳು ಶ್ರೀ ಷ.ಬ್ರ. ರೇವಣಸಿದ್ಧೇಶ್ವರ ಶಿವಾಚಾರ್ಯಮಹಾಸ್ವಾಮಿಗಳು. ಶ್ರೀಗಳು ಸಂಚಾರಮೂರ್ತಿಗಳು, ಸಂಚಾರದಲ್ಲಿ ಅಲ್ಲಲ್ಲಿ ನೆಲೆನಿಲ್ಲುತ್ತಾಆಯಾ ಸ್ಥಳಗಳನ್ನು ಜಾಗೃತಸ್ಥಳವನ್ನಾಗಿ ಮಾಡುತ್ತಾ ಮುಂದುವರೆಯುತ್ತಿದ್ದರು. ಹೀಗೆರಟಗಲ್ ಗ್ರಾಮಕ್ಕೆ ಆಗಮಿಸಿ ಕೆಲಕಾಲ ನೆಲೆನಿಂತ ಶ್ರೀಗಳನ್ನು ಇಲ್ಲಿಯೇ ನೆಲೆ ನಿಲ್ಲುವಂತೆಭಕ್ತರು ಒತ್ತಾಯಿಸಿದರು. ಭಕ್ತರ ಒತ್ತಾಸೆ ಮೇರೆಗೆ ಇಲ್ಲಿಯೇ ಮಠವನ್ನು ಸ್ಥಾಪಿಸಿ ನೆಲೆನಿಂತಶ್ರೀಗಳು ನಿತ್ಯ ಶಿವಾನುಭವಗೋಷ್ಠಿ, ಸತ್ಸಂಗಗಳ ಮೂಲಕ ಸುತ್ತಮುತ್ತಲಿನ ಗ್ರಾಮಗಳಲ್ಲೆಲ್ಲಾಪ್ರಸಿದ್ಧಗೊಂಡರು. ದಿನದಿಂದ ದಿನಕ್ಕೆ ಧಾರ್ಮಿಕ ಚಟುವಟಿಕೆಗಳು ವಿಸ್ತಾರಗೊಂಡಶ್ರೀಮಠವು ವಿಸ್ತಾರಗೊಳ್ಳಲು ಕಾರಣವಾಯಿತು.ಹೀಗೆ ಕರ್ತೃಗುರುಗಳಿಂದಾಗಿ ಜಾಗೃತಸ್ಥಳವಾಗಿ ರೂಪುಗೊಂಡು ಪ್ರಚಲಿತಕ್ಕೆಬಂದ ಶ್ರೀಮಠದ ಪರಂಪರೆಯಲ್ಲಿ ಈವರೆಗೂ 15 ಜನ ಶ್ರೀಗಳು ಪಟ್ಟಾಧಿಕಾರ ಸ್ವೀಕರಿಸಿಶ್ರೀಮಠವನ್ನು ಧರ್ಮಮಾರ್ಗದಲ್ಲಿ ಮುನ್ನಡೆಸಿದ್ದಾರೆ. ಹಿಂದಿನ ಗುರುಗಳು ಲಿಂಗೈಕ್ಯರಾದನಂತರ ಶ್ರೀಮಠವು ಕೆಲ ಕಾಲ ಖಾಲಿ ಉಳಿದಿತ್ತು. ಆನಂತರದಲ್ಲಿ ಶ್ರೀಮಠದಉತ್ತರಾಧಿಕಾರಿಗಳಾಗಿ ಅಧಿಕಾರಕ್ಕೆ ಬಂದವರು ಈಗಿನ ಹಿರಿಯ ಗುರುಗಳಾದ ಶ್ರೀ ಷ.ಬ್ರ.ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು.ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯರು ಬೆಂಗಳೂರಿನ ಮಹಾಂತಿನ ಮಠದಲ್ಲಿಸಂಸ್ಕøತ ವೇದಾಧ್ಯಯನವನ್ನು ಮಾಡಿ ಪುರಾಣ ಪ್ರವಚನಕಾರರಾಗಿ ಹೆಸರಾಗಿದ್ದಾರೆ.ಗುರುಗಳು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳೆಲ್ಲೆಲ್ಲಾ ಪ್ರವಚನ ನೀಡಿದ್ದು ಅಸಂಖ್ಯಾಭಕ್ತಬಳಗವನ್ನು ಹೊಂದಿದ್ದಾರೆ. ಶ್ರೀಗಳು ಶ್ರೀಮಠಕ್ಕೆ ಬಂದ ನಂತರ ಶ್ರೀಮಠವು ಅಭಿವೃದ್ಧಿಪಥದತ್ತ ಮುನ್ನಡೆದಿದ್ದು ಶಿಕ್ಷಣ ಸಂಸ್ಥೆಯು ಸ್ಥಾಪನೆಯಾಗಿದೆ. ಶ್ರೀಗಳು ಇತ್ತೀಚೆಗೆ 2015ರಫೆಬ್ರವರಿ 02ರಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಷ.ಬ್ರ, ರೇವಣಸಿದ್ಧ ಶಿವಾಚಾರ್ಯಸ್ವಾಮಿಗಳನ್ನು ಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳು ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು
Date of Birth :
1950
Place :
ರಟಗಲ್, ಚಿಂಚೋಳಿ ತಾ||
Photo :
Swamiji Name :
ಶ್ರೀ ಷ.ಬ್ರ. ರೇವಣಸಿದ್ದ ಶಿವಾಚಾರ್ಯ ಸ್ವಾಮಿಗಳು
Date of Birth :
01-06-1982
Place :
ಯರಗಲ್, ಸಿಂಧಗಿ ತಾ||
Pattadikara :
02-02-2015
Photo :
Programs
ಗುರುಪೂರ್ಣಿಮ ಮತ್ತು ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ
ದಸರದಲ್ಲಿ ನಾಡಹಬ್ಬ ವಿಶೇಷ ಆಚರಣೆ ಪ್ರತಿ ವರ್ಷ ಕಿರಿಯ ಗುರುಗಳ ಪಟ್ಟಾಧಿಕಾರ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
Photos
Full Address Kannada
ಶ್ರೀ ರೇವಣಸಿದ್ಧೇಶ್ವರ ಹಿರೇಮಠ
ರಟಗಲ್ - 585322
ಚಿಂಚೋಳಿ ತಾ||, ಕಲಬುರಗಿ ಜಿಲ್ಲೆ