ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪುಮೂಡಿಸಿರುವ “ಕಿತ್ತೂರು” ಎಂದ ಕೂಡಲೇ ರೋಮಾಂಚನವಾಗದಿರದು. ಈ ನೆಲದಸಮರಸಿಂಹಿಣಿ ವೀರರಾಣಿ ಚನ್ನಮ್ಮಳ ಕಾರಣದಿಂದಾಗಿ ದೇಶವ್ಯಾಪಿ ಹೆಸರಾದ ಈಪುಣ್ಯಭೂಮಿ ಆ ವೀರವನಿತೆಯ ಹೆಸರಿನಿಂದಲೇ ಅಂದರೆ “ಚೆನ್ನಮ್ಮ ಕಿತ್ತೂರು” ಎಂದೇನಾಮಾಂಕಿತಗೊಂಡಿರುವುದು ವಿಶೇಷ. ಇಂತಹ ಪರಂಪರೆಯ ರಾಜ ಮನೆತನದಸಂಸ್ಥಾನದ ಧಾರ್ಮಿಕ ಶಕ್ತಿಯಾಗಿ, ಸನ್ಮಾರ್ಗದರ್ಶಕರಾಗಿ ಬೆಳಕಾಗಿ ನಿಂತವರು ಕಿತ್ತೂರಿನಶ್ರೀ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಠಾಧೀಶರುಗಳು.ಕಿತ್ತೂರಿನ ಮೂಲ ಹೆಸರು ಗೀಜಗನಹಳ್ಳಿ. ಸಂಪಗಾವಿಯಲ್ಲಿ ರಾಜ್ಯಭಾರಮಾಡುತ್ತಾ ಈ ಭಾಗವನ್ನೆಲ್ಲಾ ಆಳುತ್ತಿದ್ದ ಪರಂಪರೆಯ 5ನೇ ದೊರೆಯಾದ ಅಲ್ಲಪ್ಪಗೌಡದೇಸಾಯಿಗೆ ದರ್ಶನ ಭಾಗ್ಯ ನೀಡಿ ಗೀಜಗನಹಳ್ಳಿಯಲ್ಲಿಯೇ ನಿನ್ನ ರಾಜ್ಯ ಸ್ಥಾಪನೆ ಮಾಡು,ನಿನ್ನ ರಾಜ್ಯ ಸುಭಿಕ್ಷವಾಗುತ್ತದೆ ಎಂದು ಆಜ್ಞೆ ಮಾಡಿ ಆಶಿರ್ವದಿಸಿದವರೇ ಶ್ರೀ ರಾಜಗುರುಸಂಸ್ಥಾನ ಕಲ್ಮಠದ ಕರ್ತೃ ಆದಿ ಶ್ರೀ ಗುರುಸಿದ್ದೇಶ್ವರ ಶಿವಯೋಗಿಗಳು.ಗುರುಗಳ ಆಜ್ಞೆ ಅನುಸಾರ ಗೀಜಗನಹಳ್ಳಿಯಲ್ಲಿ ಅರಮನೆ, ಕೋಟೆ ಸ್ಥಾಪಿಸಿದದೊರೆ ಸಂಪಗಾವಿಯ ತನ್ನ ಕಾರ್ಯಕ್ಷೇತ್ರವನ್ನು ಗೀಜಗನಹಳ್ಳಿಗೆ ವರ್ಗಾಯಿಸುತ್ತಾರೆ. ಆಗಗೀಜಗನಹಳ್ಳಿಗೆ ಕಿತ್ತೂರು ಎಂಬ ಹೆಸರು ಬಂದಿತು. ಮೊದಲು ಗುರುಗಳ ಆವಾಸಕ್ಕೆಂದುದೊರೆ ಅಲ್ಲಪ್ಪನು 1676ರಲ್ಲಿ ಚೌಕಿಮಠವನ್ನು ಸ್ಥಾಪಿಸಿ ಅಪಾರ ದಾನ ದತ್ತಿರಿಗಳನ್ನುಗುರುಕಾಣಿಕೆಯನ್ನಾಗಿ ನೀಡಿ ಶ್ರೀ ಗುರುಸಿದ್ದೇಶ್ವರ ಶಿವಯೋಗಿಗಳನ್ನು ರಾಜಗುರುಗಳನ್ನಾಗಿಸ್ವೀಕರಿಸುತ್ತಾನೆ.ಮುಂದೆ ಗುರುಗಳ ಸಾಮಿಪ್ಯ ಭಯಸಿ ಮಾರ್ಗದರ್ಶನ ಕೋರಿ 1688ರಲ್ಲಿಅರಮನೆಗೆ ಸಮೀಪವಾಗುವಂತೆ ಕಲ್ಮಠವನ್ನು ಸ್ಥಾಪಿಸುತ್ತಾನೆ. ಹೀಗೆ ಮುಂದುವರೆದರಾಜಗುರು-ದೊರೆ ಸಂಬಂಧ ಗುರುಪರಂಪರೆಯ 6ನೇ ಶ್ರೀಗಳಾದ ಶ್ರೀ ಎರಡನೇಗುರುಸಿದ್ದ ಮಹಾಸ್ವಾಮಿಗಳ ಕಾಲದವರೆಗೂ ನಡೆದುಬಂದು ಆ ಸಮಯದಲ್ಲಿ ಕಿತ್ತೂರಿನಕ್ರಾಂತಿ, ಸಂಸ್ಥಾನದ ಅವಸಾನ ಸಂಭವಿಸಿ ಈ ಸಂಬಂಧ ಕಳಚಿಬಿತ್ತು. ಆದರೆ ಸಂಸ್ಥಾನಅವಸಾನ ಕಂಡರೂ ಶ್ರೀಮಠದ ಗುರುಪರಂಪರೆ ಮುಂದುವರೆದುಕೊಂಡು ಬಂದಿತು.ಕಿತ್ತೂರು ಸಂಸ್ಥಾನದ ಪತನದ ನಂತರ ಕಲ್ಮಠದ ಪೀಠಾಧಿಪತಿಗಳು ಭಕ್ತರಿಗೆಧಾರ್ಮಿಕ ಮಾರ್ಗದರ್ಶನ ಮಾಡುತ್ತಾ ಮಠದ ಆಸ್ತಿ, ಅಸ್ತಿತ್ವವನ್ನು ವೃದ್ಧಿಸುತ್ತಾ ಆಧ್ಯಾತ್ಮಜಾಗೃತಿ ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ ಬಂದರು. ಅದರಪರಿಣಾಮವಾಗಿ ಕಲ್ಮಠವು ಪ್ರಸಿದ್ಧ ಧಾರ್ಮಿಕ, ಸಾಂಸ್ಕøತಿಕ ಕೇಂದ್ರವಾಗಿ ಬೆಳೆಯಿತು. “ದೇಶಸೇವೆಯೇ ಈಶ ಸೇವೆ” ಎಂದು ಅರಿತಿದ್ದ ಶ್ರೀಮಠದ ಪೂಜ್ಯರು ಸ್ವಾತಂತ್ರ್ಯ ಸಂಗ್ರಾಮದಅಂದಿನ ದಿನಗಳಲ್ಲಿ ದೇಶಭಕ್ತರಿಗೆ ಆಶ್ರಯ ನೀಡಿ ಹೋರಾಟದ ವಿಜಯಕ್ಕೆ ಪೂರಕವಾಗಿತಮ್ಮ ತನು, ಮನ, ಧನವನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು.ಕಲ್ಮಠದ 10ನೇ ಪೀಠಾಧೀಶರಾದ ಶ್ರೀ. ಮ.ನಿ.ಪ್ರ. ಗುರುಸಿದ್ದಮಹಾಸ್ವಾಮಿಗಳವರ ತ್ಯಾಗಯೋಗ ಸಮಾಜ ಸೇವೆಗಳು ಸ್ಮರಣೀಯವಾಗಿವೆ. 1934ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡ ಶ್ರೀಗಳು 40 ವರ್ಷಗಳ ಕಾಲ ಕಿತ್ತೂರನ್ನುಸಾಂಸ್ಕøತಿಕವಾಗಿ, ಶೈಕ್ಷಣಿಕವಾಗಿ ಹೆಜ್ಜೆಗುರುತಾಗುವಂತೆ ಮಾಡಿದರು. 1947ರ ತರುವಾಯಭಾರತ ಸ್ವಾತಂತ್ರ್ಯ ಪಡೆದ ಜನತೆ ನಿಧಾನವಾಗಿ ಅವಶ್ಯಕ ಸುಧಾರಣೆಗಳ ಕಡೆಗೆಗಮನಹರಿಸಿದರು.ಶ್ರೀ ಗುರುಸಿದ್ದ ಮಹಾಸ್ವಾಮಿಗಳೆಂದರೆ ಒಂದು ಮಹಾನ್ ಪ್ರೇರಿತ ಶಕ್ತಿ. ಶ್ರೀಗಳುಅಕ್ಷರ ಜ್ಯೋತಿ ಬೆಳಗಲು ಮಠದ ಆಸ್ತಿಯನ್ನೇ ಧಾರೆ ಎರೆದು 1950ರಲ್ಲಿ “ಕಿತ್ತೂರು ನಾಡವಿದ್ಯಾವರ್ಧಕ ಸಂಘ” ಸ್ಥಾಪಿಸಿ ಅದರ ಆಶ್ರಯದಲ್ಲಿ ಶ್ರೀಗುರುಸಿದ್ದೇಶ್ವರ ಪ್ರೌಢಶಾಲೆ, ಶ್ರೀಮಡವಾಳೇಶ್ವರ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಪ್ರಸಾದ ನಿಲಯದದೈನಂದಿನ ಚಟುವಟಿಕೆಗಳು ಸುಗಮವಾಗಿ ಸಾಗಬೇಕೆಂದರೆ ಒಂದು ಕಟ್ಟಡದ ಅಗತ್ಯವನ್ನುಮನಗಂಡು 1963ರಲ್ಲಿ ಭೋಜನ ಮಂದಿರ, ಪಾಕಶಾಲೆ, ಉಗ್ರಾಣ ಮಂದಿರ ಕಟ್ಟಿಸಿದರು.ಹೀಗೆ ಜ್ಞಾನ, ಅನ್ನದಾಸೋಹ ನಿರಂತರ ನಡೆಯುವಲ್ಲಿ ಈ ಕಟ್ಟಡ ಪೂರಕವಾಗಿ ನಿಂತಿದೆ.ಶ್ರೀಮಠದ ಹಿಂದಿನ ಶ್ರೀಗಳಾದ ಶ್ರೀ. ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು1974ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿ 1999ರವರೆಗೆ ಶ್ರೀಮಠವನ್ನು ಮುನ್ನಡೆಸಿಕಾರಣಾಂತರಗಳಿಂದ ಶ್ರೀಮಠವನ್ನು ತೊರೆದಿದ್ದಾರೆ ಎಂದು ತಿಳಿದುಬರುತ್ತದೆ ಆನಂತರಸುಮಾರು ಐದು ವರ್ಷ ಮಠಾಧಿಪತಿಗಳಿಲ್ಲದಿದ್ದಾಗ ಸದ್ಭಕ್ತರು ಬೆಳಗಾವಿಯ ನಾಗನೂರುರುದ್ರಾಕ್ಷಿಮಠದ ಪೂಜ್ಯ ಶ್ರೀ ಸಿದ್ದರಾಮ ಮಹಾಸ್ವಾಮಿಗಳ ಮುಖೇನ ಈಗಿನ ಶ್ರೀಗಳಾದಶ್ರೀ. ಮ.ನಿ.ಪ್ರ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳನ್ನು 2005ರಲ್ಲಿ ಕರೆತಂದು2009ರಲ್ಲಿ ಪಟ್ಟಾಧಿಕಾರ ಮಹೋತ್ಸವ ನಡೆಸಿದ್ದಾರೆ.ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸ್ನಾತಕೋತ್ತರಪದವೀದರರು. ಸಿದ್ದಗಂಗಾ, ಶಿವಯೋಗ ಮಂದಿರಗಳಲ್ಲಿ ಯೋಗಿಕ ಹಾಗೂ ಧಾರ್ಮಿಕಶಿಕ್ಷಣ ಪಡೆದವರು. ನಾಗನೂರು ಮಠದಲ್ಲಿ ಗುರುಗಳ ಸನ್ನಿಧಿಯಲ್ಲಿ 15 ವರ್ಷಪರಿಪಕ್ವಗೊಂಡವರು. ಇಂತಹ ಪೂಜ್ಯರು ಕಿತ್ತೂರಿನ ಶ್ರೀ ಮಠದ ಜೊತೆಯಲ್ಲಿ ದೇಶನೂರಿನಶ್ರೀ ವಿರಕ್ತಮಠದ ಪೀಠಾಧಿಪತಿಗಳಾಗಿಯೂ ಅಧಿಕಾರದಲ್ಲಿದ್ದಾರೆ. ಶ್ರೀಮಠದ ಧಾರ್ಮಿಕ,ಸಾಮಾಜಿಕ, ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಶ್ರೀಗಳು ಸಮಾಜದ ಸಾಮರಸ್ಯಹಾಗೂ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು
Date of Birth :
01-03-1977
Place :
ಮೆಕಲಮರಡಿ, ಬೈಲಹೊಂಗಲ ತಾ||
Pattadikara :
2009
Photo :
Programs
ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಗೆ ವಿಶೇಷ ಪೂಜೆ
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ, ರುದ್ರಾಭಿಷೇಕ ಶ್ರೀ ಗುರುಸಿದ್ದೇಶ್ವರ ಜಾತ್ರೆ ಚನ್ನಮ್ಮ ಜಯಂತಿ, ಬಸವ ಜಯಂತಿಗಳ ಆಚರಣೆ
Institutions
ದವಿ ಪೂರ್ವ / ದವಿ ಕಾಲೇಜ್ ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
Photos
Full Address Kannada
ಶ್ರೀ ರಾಜಗುರು ಸಂಸ್ಥಾನ ಕಲ್ಮಠ
ಚನ್ನಮ್ಮ ಕಿತ್ತೂರು - 591 115
ಬೈಲಹೊಂಗಲ ತಾ||, ಬೆಳಗಾವಿ ಜಿಲ್ಲೆ