Shree Phakireshwara Matha

Shree Phakireshwara Matha Claimed

ಶ್ರೀ ಫಕೀರೇಶ್ವರ ಮಠ

Average Reviews

Description

ಶ್ರೀ ಫಕೀರೇಶ್ವರ ಮಠ

ಕರ್ತೃ – ಜಗದ್ಗುರು ಶ್ರೀ ಫಕೀರೇಶ್ವರ ಮಹಾಸ್ವಾಮಿಗಳು

ಬೀಳಗಿ ತಾಲ್ಲೂಕಿನ ಬೂದಿಹಾಳು ಎಸ್.ಜಿ. ಗ್ರಾಮವು ತಾಲ್ಲೂಕು ಕೇಂದ್ರದಿಂದ18 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರಭಾಗದಲ್ಲಿ ಸುಮಾರು 16ನೇ ಶತಮಾನದಅಂತ್ಯಭಾಗದಲ್ಲಿ ಶ್ರೀ ಜಗದ್ಗುರು ಫಕೀರೇಶ್ವರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀಫಕೀರೇಶ್ವರ ಮಠವು ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಕಂಗೊಳಿಸುತ್ತಿದೆ.ಶ್ರೀ ಫಕೀರೇಶ್ವರರು ಹಿಂದೂಗಳಾಗಿ ಹುಟ್ಟಿ ಮುಸ್ಲಿಂ ಧರ್ಮಗುರುಗಳ ಶಿಷ್ಯರಾಗಿಬೆಳೆದ ಕಾರಣ ಗುರುಗಳು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಾಕಾರಮೂರ್ತಿಯಾಗಿಕಂಗೊಳಿಸುತ್ತಿದ್ದಾರೆ. ಶ್ರೀಗಳು ತಮ್ಮ ಗುರುಗಳಾದ ಅಮೀನದೀನರ ಅಪ್ಪಣೆ ಪಡೆದು ಲೋಕಸಂಚಾರಕ್ಕೆ ಹೊರಟು ತಾವು ನೆಲೆನಿಂತ ಸ್ಥಳಗಳನ್ನೆಲ್ಲಾ ಭಾವೈಕ್ಯ ಕೇಂದ್ರಗಳನ್ನಾಗಿಮಾರ್ಪಡಿಸಿದ್ದಾರೆ. ಹಾಗೆಯೇ ಬೂದಿಹಾಳು ಗ್ರಾಮದ ಹೊರವಲಯದ ಕೃಷ್ಣಾನದಿ ದಡದಹತ್ತಿರ ನೆಲೆನಿಂತು ಗ್ರಾಮಸ್ಥರಿಗೆ ಆಶೀರ್ವಾದ ನೀಡಿ ಮುನ್ನಡೆದಿದ್ದಾರೆ. ಭಕ್ತರು ಗುರುಗಳುಅನುಷ್ಠಾನಗೊಂಡ ಸ್ಥಳದಲ್ಲಿ ಮಠ ಸ್ಥಾಪಿಸಿದ್ದಾರೆ.ಭಕ್ತರು ಇಲ್ಲಿ ಮಠವನ್ನು ಸ್ಥಾಪಿಸಿದ ನಂತರ ಅನೇಕ ಗುರುಗಳು ಅಧಿಕಾರನಡೆಸಿದ್ದರೂ ಸೂಕ್ತ ದಾಖಲೆಗಳು ಲಭ್ಯವಿಲ್ಲ. ಬಹುದಿನಗಳ ಕಾಲ ಖಾಲಿ ಉಳಿದ ಮಠದಲ್ಲಿಶ್ರೀ ಸಂಗಯ್ಯ ಸ್ವಾಮಿಗಳು ಅಧಿಕಾರ ವಹಿಸಿಕೊಂಡು ನೂತನ ಕಟ್ಟಡ ನಿರ್ಮಿಸಿದ್ದರು. ನಂತರಬಂದ ಹಿಂದಿನ ಶ್ರೀಗಳಾದ ಶ್ರೀ ಸಿದ್ದರಾಮ ಸ್ವಾಮಿಗಳು ಹೆಚ್ಚು ಶಿವಪೂಜಾನಿಷ್ಠರಾಗಿ ತಮ್ಮಧಾರ್ಮಿಕ ಆಚರಣೆಗಳ ಮೂಲಕ ಭಕ್ತರಿಗೆ ವೀರಶೈವ ಧರ್ಮಾಚರಣೆಗಳ ಮಹತ್ವವನ್ನುತಿಳಿಸಿ ಅವರು ಸಂಸ್ಕಾರವಂತರಾಗಿ ಬದುಕಲು ಕಾರಣರಾದರು. ಶ್ರೀಗಳು ಶ್ರೀಮಠದಸಂಪ್ರದಾಯದಂತೆ ಹಿಂದೂ-ಮುಸಲ್ಮಾನ ಭಾವೈಕ್ಯತೆಯನ್ನು ಬೆಳೆಸಿ ಅವರು ಸಾಮರಸ್ಯದಬದುಕು ಕಾಣುವಂತೆ ಮಾಡಿದ್ದು 1990ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಪ್ರಭು ಸ್ವಾಮಿಗಳು ಮೇ, 1991ರಲ್ಲಿ ಅಧಿಕಾರವಹಿಸಿಕೊಂಡಿದ್ದು ಶ್ರೀಮಠವನ್ನು ಸಮಗ್ರ ಧಾರ್ಮಿಕ ಸಾಮರಸ್ಯದ ದೃಷ್ಠಿಕೋನದಿಂದಮುನ್ನಡೆಸುತ್ತಿದ್ದಾರೆ. ಆಲಮಟ್ಟಿ ಹಿನ್ನೀರಿನಿಂದ ಶ್ರೀಮಠವು ಮುಳುಗಡೆಯಾಗಿದ್ದು ಈಗಶ್ರೀಗಳು ಶ್ರೀಮಠವನ್ನು ಮೂಲಸ್ಥಾನದಿಂದ ಸುಮಾರು 1 ಕಿ.ಮೀ. ದೂರದ ಪುನರ್ ವಸತಿಸ್ಥಳದಲ್ಲಿ ಸ್ಥಾಪಿಸಿಕೊಂಡು ಶ್ರೀಮಠವನ್ನು ಅಭಿವೃದ್ಧಿಗೊಳಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಪ್ರಭು ಸ್ವಾಮಿಗಳು
Date of Birth :
6-4-1960
Place :
ಕಲ್ಲಪುರ, ಸವದತ್ತಿ ತಾ||
Pattadikara :
ಮೇ 1991
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ಕೊನೆಯ ದಿನ ವಿಶೇಷ ಕಾರ್ಯಕ್ರಮ.
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ.
ಆಗಿ ಹುಣ್ಣಿಮೆಗೆ ಶ್ರೀಮಠದ ಜಾತ್ರೆ.

Institutions

ಕಿರಿಯ / ಹಿರಿಯ ಪ್ರಾಥಮಿಕ ಶಾಲೆ

Photos

Full Address Kannada

ಶ್ರೀ ಫಕೀರೇಶ್ವರ ಮಠ ಬೂದಿಹಾಳು ಎಸ್.ಜಿ.,
ಬಾಡಗಿ ಪೋಸ್ಟ್ - 587 117
ಬೀಳಗಿ ತಾ||, ಬಾಗಲಕೋಟೆ ಜಿ||

Map

Near by Places

ಬಾಡಗಿ ಕ್ರಾಸ್ - 5 ಕಿ.ಮೀ
ಬೀಳಗಿ - 18 ಕಿ.ಮೀ.
ಗದ್ದನಕೇರಿ - 40 ಕಿ.ಮೀ.
ಬಾಗಲಕೋಟೆ - 46 ಕಿ.ಮೀ.

Statistic

6 Views
0 Rating
0 Favorite
0 Share
error: Content is protected !!