Shree Pattada Matha

Shree Pattada Matha Claimed

ಶ್ರೀ ಪಟ್ಟದ ಮಠ

Average Reviews

Description

ಶ್ರೀ ಪಟ್ಟದ ಮಠ

ಕರ್ತೃ – ಶ್ರೀ ಷ.ಬ್ರ. ಗುರುಕಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು

ಮೈಸೂರು ಜಿˉÉ್ಲ ಕೆ.ಆರ್.ನಗರ ತಾಲ್ಲೂಕು ಕೇಂದ್ರದಿಂದ ಸು.30 ಕಿ.ಮೀ.ದೂರದಲ್ಲಿರುವ ಸರಗೂರು ಗ್ರಾಮದ ಹೊರವಲಯದಲ್ಲಿ ಕಳೆದ ಶತಮಾನದಿಂದೀಚೆಗೆಅಸ್ತಿತ್ತ್ವಕ್ಕೆ ಬಂದು ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಶ್ರಮಿಸುತ್ತಿರುವ ಶ್ರೀ ಪಟ್ಟದಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾಗಿ ಬೆಳೆದು ಬಂದಿದೆ. ಶ್ರೀಮಠದಸ್ಥಾಪಕ ಗುರುಗಳು ಶ್ರೀ ಷ.ಬ್ರ. ಗುರುಕಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು.ಶ್ರೀ ಷ.ಬ್ರ. ಗುರುಕಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸದಾ ಶಿವಪೂಜಾನಿಷ್ಠರಾಗಿದ್ದು ಬಂದ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುತ್ತಿದ್ದರು, ಶ್ರೀಗಳು ಭಕ್ತರ ಮನೆಮನೆಯಲ್ಲಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾˉÉ್ಗೂಂಡು ಅವರಿಗೆ ಆಶೀರ್ವಾದನೀಡುತ್ತಿದ್ದರು. ತಮ್ಮ ಕೈˉÁದಷ್ಟು ಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡುಬರುತ್ತಿದ್ದ ಶ್ರೀಗಳು 1970ರಲ್ಲಿ ಲಿಂಗೈಕ್ಯರಾದರು.ಮೊದಲ ಗುರುಗಳ ಐಕ್ಯಾ ನಂತರ 1971ರಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳನ್ನು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಪಟ್ಟದ ಮಠಕ್ಕೆ ಪಟ್ಟಾಧಿಕಾರ ಮಾಡˉÁಯಿತು. ಧಾರವಾಡ ಜಿˉÉ್ಲನವಲಗುಂದ ತಾಲ್ಲೂಕು ತಡಹಾಳ ಗ್ರಾಮದವರಾದ ಶ್ರೀಗಳು ಶ್ರೀಮಠದ ಪಟ್ಟಕ್ಕೆ ಬಂದನಂತರ ಮೂರು ವರ್ಷ ಸಿದ್ದಗಂಗೆಯಲ್ಲಿ ವೇದ-ಜ್ಯೋತಿಷ್ಯದ ವಿಷಯಗಳಲ್ಲಿ ಅಧ್ಯಯನನಡೆಸಿ 1974ರಲ್ಲಿ ಶ್ರೀ ಮಠಕ್ಕೆ ಮರಳಿದರು.ಶ್ರೀ ಷ.ಬ್ರ. ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳು ಕಳೆದ 4 ದಶಕಗಳಲ್ಲಿಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಕರ್ತೃಗುರುಗಳ ಗದ್ದುಗೆಗೆ ಮಂಟಪಹಾಗೂ ಶ್ರೀಮಠದ ಸುತ್ತ ತಡೆಗೋಡೆ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ.ಹಾಗೂ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ,ಕಟ್ಲೆಗಳನ್ನು ನಡೆಸಿಕೊಂಡು ಬಂದಿದ್ದು ನೂರಾರು ಭಕ್ತರು ತಮ್ಮ ಸಮಸ್ಯೆಗಳಿಗೆ ಪರಿಹಾರಪಡೆಯುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳು
Date of Birth :
10-01-1953
Place :
ತಡಹಾಳ, ನವಲಗುಂದ ತಾ||
Pattadikara :
1971
Photo :

Programs

ಪ್ರತಿ ಹುಣ್ಣಿಮೆಗೆ ವಿಶೇಷ ಪೂಜಾ ಕಾರ್ಯಕ್ರಮಗಳು
ಫಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಪಟ್ಟದ ಮಠ ಸರಗೂರು, ಹರದನಹಳ್ಳಿ ಪೋಸ್ಟ್ - 571 604 ಕೆ.ಆರ್.ನಗರ ತಾ||, ಮೈಸೂರು ಜಿˉÉ್ಲ

Map

Near by Places

ಸಾಲಿಗ್ರಾಮ 12 ಕಿ.ಮೀ.
ಚುಂಚನಕಟ್ಟೆ 15 ಕಿ.ಮೀ.
ಕೆ.ಆರ್.ನಗರ 30 ಕಿ.ಮೀ.
ಮೈಸೂರು 75 ಕಿ.ಮೀ.

Statistic

17 Views
0 Rating
0 Favorite
0 Share
error: Content is protected !!