ಹೆಗ್ಗಡದೇವನಕೋಟೆ ತಾಲ್ಲೂಕಿನ ಹಂಚೀಪುರ ಗ್ರಾಮದ ಮಧ್ಯಭಾಗದಲ್ಲಿಸ್ಥಾಪಿತಗೊಂಡಿರುವ ಶ್ರೀ ಹಂಚೀಪುರ ಪಟ್ಟದ ಮಠವು ಶ್ರೀ ಸೋಮನಹಳ್ಳಿ ಮಠದ ಶಾಖಾಮಠವಾಗಿ ಬೆಳೆದು ಬಂದಿದೆ. ನಂಜನಗೂಡು ತಾಲ್ಲೂಕು ಕೆ. ಮಾರನಹಳ್ಳಿ ಗ್ರಾಮದಿಂದಸಂಚಾರ ಬಂದ ಶ್ರೀ ಷ.ಬ್ರ. ರಾಜಶೇಖರ ಸ್ವಾಮಿಗಳು 1960ರಲ್ಲಿ ಹಂಚೀಪುರ ಗ್ರಾಮದಲ್ಲಿನೆˉÉನಿಂತು ಮಠವನ್ನು ಸ್ಥಾಪಿಸಿದರು.ಶ್ರೀ ರಾಜಶೇಖರ ಸ್ವಾಮಿಗಳು ತಪಸ್ವಿಗಳಾಗಿದ್ದು ಶಿವಪೂಜಾನಿಷ್ಠರಾಗಿದ್ದರು. ಶ್ರೀರಾಜಶೇಖರ ಸ್ವಾಮಿಗಳ ಪೂರ್ವದಿಂದಲೂ ಸೋಮನಹಳ್ಳಿ ಶ್ರೀಮಠದ ಶಾಖಾಮಠವಾಗಿಯೇ ಬೆಳೆದು ಬಂದ ಮಠವನ್ನು ಅಭಿವೃದ್ಧಿಗೊಳಿಸಿದ ಶ್ರೀಗಳು ತಮ್ಮ ಆಚರಣೆಗಳಮೂಲಕ ಭಕ್ತರ ಪ್ರೀತಿಯನ್ನು ಸಂಪಾದಿಸಿದ್ದರು. ಸದಾ ಭಕ್ತರಿಗೆ ವೀರಶೈವ ಧರ್ಮದಆಚರಣೆಗಳನ್ನು ವಿವರಿಸುತ್ತಾ ಸನ್ಮಾರ್ಗ ತೋರುತ್ತಿದ್ದರು.ಶ್ರೀ ರಾಜಶೇಖರ ಸ್ವಾಮಿಗಳ ನಂತರ 1980ರಲ್ಲಿ ಶ್ರೀ ಪಟ್ಟದ ಮಠದ ಪಟ್ಟಾಧಿಕಾರಸ್ವೀಕರಿಸಿದ ಈಗಿನ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಚನ್ನಬಸವ ಸ್ವಾಮಿಗಳು ಮಠದಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದು ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನುಜೀರ್ಣೋದ್ಧಾರಗೊಳಿಸಿದರು. ಶ್ರೀ ಚನ್ನಬಸವ ಸ್ವಾಮಿಗಳ ಕಾಲದಲ್ಲಿ ಶ್ರೀಮಠವುಸರ್ವತೋಮುಖ ಅಭಿವೃದ್ಧಿಯತ್ತ ಸಾಗುತ್ತಿದೆ ಹಾಗೂ ಶ್ರೀಗಳು ಇತ್ತೀಚೆಗೆ 2014ರಮಾರ್ಚ್ 07ರಂದು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಷ.ಬ್ರ. ತೋಂಟದಾರ್ಯಸ್ವಾಮಿಗಳನ್ನು ನೇಮಿಸಿಕೊಂಡು ಪಟ್ಟಾಧಿಕಾರದ ಅನುಗ್ರಹ ನೀಡಿದ್ದಾರೆ.ಶ್ರೀ ಷ.ಬ್ರ. ತೋಂಟದಾರ್ಯ ಸ್ವಾಮಿಗಳು ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಉಭಯ ಶ್ರೀಗಳೂ ಗ್ರಾಮದ ಧಾರ್ಮಿಕ ಕ್ರಿಯಾದಿಗಳಲ್ಲಿಭಾಗವಹಿಸುತ್ತಾ ಭಕ್ತರ ಮನೆಗಳ ಭಿನ್ನಹ ತೀರಿಸುತ್ತಾ ಮುಂದುವರೆದಿದ್ದು ಅಪಾರ ಭಕ್ತಬಳಗವನ್ನು ಹೊಂದಿದ್ದಾರೆ ಹಾಗೂ ಗ್ರಾಮದೇವತೆ ಕಟ್ಟೆಮಾರಮ್ಮ ತಾಯಿ ಹಬ್ಬ ಮತ್ತುಗ್ರಾಮ ದೇವರುಗಳಾದ ಶ್ರೀ ವೀರಭದ್ರೇಶ್ವರ, ಶ್ರೀ ಮˉÉೈ ಮಹದೇಶ್ವರರ ಜಾತ್ರೆಗಳನ್ನುನಡೆಸುತ್ತಿದ್ದಾರೆ. ಹಾಗೂ ಮಾರ್ಚ್ ತಿಂಗಳಲ್ಲಿ ಕರ್ತೃ ಗುರುಗಳಾದ ಶ್ರೀ ಷ.ಬ್ರ. ರಾಜಶೇಖರಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಆಯೋಜಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚನ್ನಬಸವ ಮಹಾಸ್ವಾಮಿಗಳು
Date of Birth :
1948
Place :
ಕುರಹಟ್ಟಿ, ನಂಜನಗೂಡು ತಾ||
Pattadikara :
1980
Photo :
Swamiji Name :
ಶ್ರೀ ಷ.ಬ್ರ. ತೋಂಟದಾರ್ಯ ಸ್ವಾಮಿಗಳು
Date of Birth :
20-07-1984
Place :
ನವಿಲೂರು, ನಂಜನಗೂಡು ತಾ||
Pattadikara :
07-03-2014
Photo :
Programs
ಮಾರ್ಚ್ ತಿಂಗಳಲ್ಲಿ ಶ್ರೀ ಹಿರಿಯ ಗುರುಗಳ ಆರಾಧನೆ
ಕಾರ್ತೀಕ ಮಾಸದಲ್ಲಿ ದೀಪೋತ್ಸವ
ಗ್ರಾಮ ದೇವತೆ ಕಟ್ಟೆ ಮಾರಮ್ಮ ತಾಯಿಯ ಹಬ್ಬ ಆಚರಣೆ
ಗ್ರಾಮ ದೇವರುಗಳಾದ ಶ್ರೀ ವೀರಭದ್ರೇಶ್ವರ ಹಾಗೂ
ಮಲೈಮಹದೇಶ್ವರನ ಜಾತ್ರೆ
Full Address Kannada
ಶ್ರೀ ಪಟ್ಟದ ಮಠ
ಹಂಚೀಪುರ - 571 121
ಹೆಚ್.ಡಿ.ಕೋಟೆ ತಾ||, ಮೈಸೂರು ಜಿಲ್ಲೆ