ಮೈಸೂರು ಜಿˉÉ್ಲ ಟಿ.ನರಸೀಪುರ ತಾಲ್ಲೂಕು ಕೇಂದ್ರದಿಂದ ಕೇವಲ 8 ಕಿ.ಮೀ.ದೂರದಲ್ಲಿರುವ ಮಾಡರಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಕಳೆದ ಒಂದು ಶತಮಾನದ ಹಿಂದೆಸ್ಥಾಪಿತಗೊಂಡಿರುವ ಶ್ರೀ ಪಟ್ಟದ ಮಠವು ತನ್ನ ಧಾರ್ಮಿಕ ಆಚರಣೆಗಳ ಮೂಲಕ ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ. ಶ್ರೀಮಠದ ಕರ್ತೃ ಗುರುಗಳುಪೂಜ್ಯ ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು.ಶ್ರೀ ಪಟ್ಟದ ಮಠದ ಪ್ರಥಮ ಗುರುಗಳಾಗಿ 1915ರಲ್ಲಿ ಅಧಿಕಾರಕ್ಕೆ ಬಂದ ಶ್ರೀಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಂಸ್ಕøತ ಹಾಗೂ ವೇದದಲ್ಲಿ ಪಾಂಡಿತ್ಯಪಡೆದಿದ್ದರು. ಎˉÁ್ಲ ವಿಚಾರದ ಬಗ್ಗೆ ಸಮರ್ಥ ತಿಳುವಳಿಕೆ ಪಡೆದು ವೀರಶೈವ ಧರ್ಮದಆಚರಣೆಯ ವಿಷಯದಲ್ಲಿ, ಆಚಾರ ವಿಚಾರಗಳಲ್ಲಿ ಒಂದಾಗಿ ಬದುಕಿದ ಶ್ರೇಷ್ಠರು. ಶ್ರೀಗಳುಶ್ರೀಮಠದ ಜಮೀನಿನಲ್ಲಿ ಕಾಯಕಯೋಗಿಗಳಾಗಿ ದುಡಿದು ಮಠದ ಆಸ್ತಿಯನ್ನುವಿಸ್ತರಿಸಿದರು. ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ.ಶಾಂತಮಲ್ಲಿಕಾರ್ಜುನ ಸ್ವಾಮಿಗಳನ್ನು ನೇಮಿಸಿಕೊಂಡು ಲಿಂಗೈಕ್ಯರಾದರು.ಶ್ರೀ ಷ.ಬ್ರ. ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು 1975ರಲ್ಲಿ ಶ್ರೀಮಠದ ಪಟ್ಟಕ್ಕೆಬಂದಿದ್ದು ಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ವಿಸ್ತರಿಸಿದರು. ಶ್ರೀಗಳು ಸದಾಚಟುವಟಿಕೆಯಿಂದಿರುತ್ತಾ ತಮ್ಮ ಕ್ರಿಯಾಶೀಲ ವ್ಯಕ್ತಿತ ್ತ ್ವದಿಂದ ಶ್ರೀಮಠವನ್ನುಅಭಿವೃದ್ದಿಪಡಿಸುತ್ತಿದ್ದಾರೆ. ಶ್ರೀಮಠದ ಕಟ್ಟಡವನ್ನು ಅಭಿವೃದ್ದಿಗೊಳಿಸಿದ ಶ್ರೀಗಳು ಶ್ರೀಮಠದಆಸ್ತಿಯನ್ನು ವೃದ್ದಿಸಿದ್ದಾರೆ. ಆ ಮೂಲಕ ಶ್ರೀಮಠವನ್ನು ಆರ್ಥಿಕವಾಗಿಸ್ವಾವಲಂಬಿಯಾಗುವಂತೆ ಮಾಡಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಶಾಂತಮಲ್ಲಿಕಾರ್ಜುನ ಸ್ವಾಮಿಗಳು
Place :
ನಂಚನಹಳ್ಳಿ, ಕೆ.ಆರ್.ನಗರ ತಾ||
Pattadikara :
1975
Programs
ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ
ಶಾª್ರÀಣ, ಕಾರ್ತೀಕ, ಧನುರ್ಮಾಸಗಳಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
Institutions
ಕಿರಿಯ / ಹಿರಿಯ ಪ್ರಾಥಮಿಕ
Photos
Full Address Kannada
ಶ್ರೀ ಪಟ್ಟದ ಮಠ
ಮಾಡರಹಳ್ಳಿ
ಟಿ.ನರಸೀಪುರ ತಾ||, ಮೈಸೂರು ಜಿಲ್ಲೆ