Shree Pattada Matha

Shree Pattada Matha Claimed

ಶ್ರೀ ಪಟ್ಟದ ಮಠ

Average Reviews

Description

ಶ್ರೀ ಪಟ್ಟದ ಮಠ – ಶೆಟ್ಟನಾಯಕನಹಳ್ಳಿ

ಕರ್ತೃ – ಶ್ರೀ ಷ.ಬ್ರ. ಮಹಾಂತಲಿಂಗ ಮಹಾಸ್ವಾಮಿಗಳು

ಮೈಸೂರು ಜಿˉÁ್ಲ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಶೆಟ್ಟನಾಯಕನಹಳ್ಳಿಗ್ರಾಮದಲ್ಲಿ ಕಳೆದ ಶತಮಾನದಲ್ಲಿ ದಂಡಿಕೆರೆ ಮಠದ ಗುರುಗಳಾದ ಶ್ರೀ ಷ.ಬ್ರ.ಮಹಾಂತಲಿಂಗ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಪಟ್ಟದ ಮಠವು ಶ್ರೀದಂಡಿಕೆರೆ ಮಠದ ಶಾಖಾಮಠವಾಗಿ ಪಂಚಪೀಠದ ಪರಂಪರೆಯಲ್ಲಿ ಬೆಳೆದುಬಂದಿದೆ. ಕರ್ತೃಗುರುಗಳಾದ ಶ್ರೀ ಮಹಾಂತಲಿಂಗ ಮಹಾಸ್ವಾಮಿಗಳು ದಂಡಿಕೆರೆಯಿಂದ ಶೆಟ್ಟನಾಯಕನಹಳ್ಳಿಗ್ರಾಮಕ್ಕೆ ಆಗಮಿಸಿ ಭಕ್ತರ ಆಶಯದಂತೆ ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿಕೆಲಕಾಲ ನೆˉÉನಿಂತು ಕೊನೆಗಾಲದಲ್ಲಿ ಪುನಃ ದಂಡಿಕೆರೆ ಮಠಕ್ಕೆ ತೆರಳಿ ನೆˉÉಸಿಲಿಂಗೈಕ್ಯರಾಗಿದ್ದಾರೆ.ಕರ್ತೃಗಳ ನಂತರ ಕೇವಲ ತಮ್ಮ 8ನೇ ವಯಸ್ಸಿನಲ್ಲಿಯೇ ಶ್ರೀಮಠದಪಟ್ಟಾಧಿಕಾರಿಗಳಾಗಿ ಅಧಿಕಾರಕ್ಕೆ ಬಂದ ಈಗಿನ ಹಿರಿಯ ಗುರುಗಳಾದ ಶ್ರೀ ಷ.ಬ್ರ.ಬಸವಲಿಂಗ ಮಹಾಸ್ವಾಮಿಗಳು ಸುಧೀರ್ಘ ಕಾಲದಿಂದ ಶ್ರೀಮಠವನ್ನು ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಮಠಕ್ಕೆ ಬಂದಭಕ್ತರಿಗೆ ನಿತ್ಯ ದಾಸೋಹದ ವ್ಯವಸ್ಥೆಯನ್ನು ಮಾಡುತ್ತಾ ಬಂದಿದ್ದಾರೆ. ಮಠದ ಆಸ್ತಿಯಾದಜಮೀನಿನಲ್ಲಿ ಅಭಿವೃದ್ದಿ ಕಾರ್ಯ ಕೈಗೊಂಡ ಆದಾಯ ಮೂಲವನ್ನಾಗಿ ಮಾಡಿದ್ದಾರೆ.ಶ್ರೀಗಳು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶ್ರೀ ಬಸವಣ್ಣ ಸ್ವಾಮಿಗಳನ್ನು ಆಯ್ಕೆಮಾಡಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದರು. ವಿದ್ಯಾಭ್ಯಾಸಪೂರ್ಣಗೊಳಿಸಿ ಮರಳಿರುವ ಶ್ರೀಗಳು ಗುರುಗಳ ಧಾರ್ಮಿಕ ಕಾರ್ಯಗಳಲ್ಲಿಸಹಾಯಕರಾಗಿದ್ದಾರೆ. ಕಳೆದ ವರ್ಷ ಗುರುಗಳ 100ನೇ ವರ್ಷದ ಜನ್ಮ ದಿನೋತ್ಸವವನ್ನುಆಚರಿಸಿರುವ ಕಿರಿಯ ಶ್ರೀಗಳು ಬರುವ ವರ್ಷದಲ್ಲಿ ತಮ್ಮ ಪಟ್ಟಾಧಿಕಾರವನ್ನುನೆರವೇರಿಸಿಕೊಳ್ಳುತ್ತಿದ್ದಾರೆ. ಶ್ರೀಮಠದಲ್ಲಿ ಇತ್ತೀಚೆಗೆ ನೂತನ ಸಮುದಾಯ ಭವನವನ್ನುನಿರ್ಮಿಸಿರುವ ಶ್ರೀಗಳು ಭಕ್ತ ಸಮುದಾಯವನ್ನು ಜೊತೆಯಲ್ಲಿ ಮುನ್ನಡೆಸುತ್ತಿದ್ದಾರೆ.

Swamiji

Swamiji Name :
ಶ್ರೀ ಷ.ಬ್ರ. ಬಸವಲಿಂಗ ಮಹಾಸ್ವಾಮಿಗಳು
Date of Birth :
02-04-1984
Place :
ಶೆಟ್ಟನಾಯಕನಹಳ್ಳಿ
Photo :
Swamiji Name :
ಶ್ರೀ ಬಸವಣ್ಣ ಸ್ವಾಮಿಗಳು
Date of Birth :
02-04-1984
Place :
ಶೆಟ್ಟನಾಯಕನಹಳ್ಳಿ
Photo :

Programs

ಪ್ರತಿ ಅಮವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ ಶಿವರಾತ್ರಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಕಾರ್ತೀಕದಲ್ಲಿ ಕಾರ್ತೀಕೋತ್ಸವ

Full Address Kannada

ಶ್ರೀ ಪಟ್ಟದ ಮಠ
ಶೆಟ್ಟನಾಯಕನಹಳ್ಳಿ, ಬೀರಿಹುಂಡಿ ಪೋಸ್ಟ್
ಮೈಸೂರು ತಾ|| ಮತ್ತು ಜಿˉÉ್ಲ

Map

Near by Places

ಶೆಟ್ಟನಾಯಕನಹಳ್ಳಿ ಗೇಟ್ 2 ಕಿ.ಮೀ. ಮೈಸೂರು 15 ಕಿ.ಮೀ. ಗದ್ದುಗೆ 22 ಕಿ.ಮೀ.

Statistic

14 Views
0 Rating
0 Favorite
0 Share
error: Content is protected !!