ಗುಳೇದಗುಡ್ಡ ಪಟ್ಟಣದಲ್ಲಿ ಸುಮಾರು 15ನೇ ಶತಮಾನದಲ್ಲಿ ಶ್ರೀ ಒಪ್ಪತ್ತೇಶ್ವರಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ಒಪ್ಪತ್ತೇಶ್ವರ ಮಠವು ತನ್ನ ಧಾರ್ಮಿಕ ಹಾಗೂಸಾಮಾಜಿಕ ಚಟುವಟಿಕೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ.15ನೇ ಶತಮಾನದಲ್ಲಿ ಶ್ರೀ ನಿರಂಜನ ಜಗದ್ಗುರು ಸಿದ್ದಲಿಂಗ ಯತಿಗಳು ತಮ್ಮ ನೂರೊಂದುವಿರಕ್ತರನ್ನೊಳಗೊಂಡು ಧರ್ಮೋದ್ದಾರಕ್ಕಾಗಿ ಸಂಚರಿಸುತ್ತ ಗುಳೇದಗುಡ್ಡಕ್ಕೆ ಬಂದು ಕೆಲಕಾಲನೆಲೆ ನಿಂತು ಭಕ್ತಜನರ ಭಕ್ತಿಪೂರ್ವಕ ಮನವಿಗೆ ಸ್ಪಂದಿಸಿ ತಮ್ಮ ಪರಮಶಿಷ್ಯರೆನಿಸಿದ್ದ ಶ್ರೀಒಪ್ಪತ್ತೇಶ್ವರರನ್ನು ಧರ್ಮಕಾರ್ಯಕ್ಕೆ ನಿಯೋಜಿಸಿ ಮುನ್ನೆಡೆಸಿದರು.ಶ್ರೀ ಒಪ್ಪತ್ತೇಶ್ವರರು ಇಲ್ಲಿ ನೆಲೆನಿಂತು ಭಕ್ತರ ಕಷ್ಟಕಾರ್ಪಣ್ಯಗಳನ್ನು ತಮ್ಮತಪೋಬಲದಿಂದ ಪರಿಹರಿಸಿ, ಭಕ್ತರಿಗೆ ನಿತ್ಯ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಾ ಶ್ರೀಮಠವನ್ನು ಸ್ಥಾಪಿಸಿ ಧರ್ಮಾಚರಣೆಗಳನ್ನುಕೈಗೊಂಡರು. ತದನಂತರ ಶ್ರೀಮಠದ ಗುರುಪರಂಪರೆಯಲ್ಲಿ ಇಲ್ಲಿವರೆಗೂ ಹದಿನಾರುಗುರುಗಳು ಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿದ್ದಾರೆ.ಪರಂಪರೆಯ 14ನೇ ಗುರುಗಳಾದ ಶ್ರೀ ಒಪ್ಪತ್ತಿನ ಮಹಾಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ದಿಪಡಿಸಿದ್ದಾರೆ, ಶ್ರೀಗಳುವಾಕ್‍ಸಿದ್ಧಿ ಪುರುಷರು, ಶಿಕ್ಷಣ ಪ್ರೇಮಿಗಳೂ, ಕೃಷಿಕಾಯಕಯೋಗಿಗಳೂ ಆಗಿದ್ದು ಶ್ರೀಮಠದಏಳಿಗೆಗಾಗಿ ಅವಿರತ ದುಡಿದಿದ್ದಾರೆ. ಇವರ ಕಾಲದಲ್ಲಿ ಶ್ರೀಮಠದ ಕಟ್ಟಡವು ವಿಸ್ತಾರಗೊಂಡಿದ್ದು ಸುಮಾರು 18 ಶಾಖಾಮಠಗಳು ಸ್ಥಾಪಿಸಲ್ಪಟ್ಟಿವೆ.ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು 1997ರಮೇ 12ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ಶ್ರೀಮಠದ ಜೊತೆಯಲ್ಲಿ ರೋಣತಾಲ್ಲೂಕಿನ ಕರಮಾಡಿ ಶಾಖಾಮಠ ಸೇರಿದಂತೆ ಇನ್ನುಳಿದ 17 ಶಾಖಾಮಠಗಳನ್ನುಅಭಿವೃದ್ದಿಪಡಿಸುವತ್ತ ಗಮನಹರಿಸಿದ್ದಾರೆ. ಶ್ರೀಗಳು ಶ್ರೀಮಠದಲ್ಲಿ ಅಯ್ಯಾಚಾರ, ಶಿವದೀಕ್ಷೆ,ಲಿಂಗದೀಕ್ಷೆ, ಸಾಮೂಹಿಕ ವಿವಾಹಗಳಂತಹ ಕಾರ್ಯಕ್ರಮಗಳೊಂದಿಗೆ ಬಸವಪುರಾಣ,ಶರಣಬಸವೇಶ್ವರ ಪುರಾಣಗಳನ್ನು ನಾಡಿನಾದ್ಯಂತ ಆಯೋಜಿಸುತ್ತಾ ಬಂದಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು
Date of Birth :
1-6-1975
Place :
ಹೊನ್ನಾರಹಳ್ಳಿ, ಹುನಗುಂದ ತಾ||
Pattadikara :
12-5-1997
Programs
ಡಿಸೆಂಬರ್ 25ಕ್ಕೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮತ್ತು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು.
ಶ್ರಾವಣದಲ್ಲಿ ರೋಣ ತಾಲ್ಲೂಕು ಕರಮುಡಿ ಗ್ರಾಮದ ಶ್ರೀ ಒಪ್ಪತ್ತೇಶ್ವರ ಮಠದಲ್ಲಿ ಶ್ರೀ ಶರಣ ಬಸವೇಶ್ವರ ಪುರಾಣ ಕಾರ್ಯಕ್ರಮ.
Institutions
ಶ್ರೀ ಒಪ್ಪತ್ತೇಶ್ವರ ಶಿಕ್ಷಣ ಸಂಸ್ಥೆ, ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ ಕಾಲೇಜು
ಐ.ಟಿ.ಐ. ಕಾಲೇಜು
ವಿದ್ಯಾರ್ಥಿನಿಲಯಗಳು