ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮವು ಐತಿಹಾಸಿಕಸವದತ್ತಿಯಿಂದ ಕೇವಲ 6 ಕಿ.ಮೀ. ದೂರದಲ್ಲಿದ್ದು ಕರ್ನಾಟಕದ ಪ್ರಮುಖ ಶಕ್ತಿಕೇಂದ್ರಯಲ್ಲಮ್ಮನಗುಡ್ಡ ಪುಣ್ಯಕ್ಷೇತ್ರದ ಸಮೀಪದಲ್ಲಿದೆ. ಇಂತಹ ಉಗರಗೋಳ ಗ್ರಾಮದಮಧ್ಯಭಾಗದಲ್ಲಿ ಶ್ರೀ ಗುರು ನಿರ್ವಾಣೇಶ್ವರ ಶಿವಯೋಗಿಗಳಿಂದ ಸ್ಥಾಪಿತಗೊಂಡಿರುವ ಶ್ರೀನಿವರ್ವಾಣೇಶ್ವರ ಮಠವು ಅಸ್ತಿತ್ವದಲ್ಲಿದೆ.ಕರ್ತೃ ಶ್ರೀ ಗುರು ನಿರ್ವಾಣೇಶ್ವರ ಶಿವಯೋಗಿಗಳು ಮಹಾಮಹಿಮ ಶ್ರೀಸಿದ್ದಾರೂಢರ ಸಮಕಾಲೀನರು. ಸೊಲ್ಲಾಪುರ ಕಡೆಯಿಂದ ಸಂಚಾರ ಬಂದು ಈ ಭಾಗದಲ್ಲಿಸಂಚರಿಸಿ ತಮ್ಮ ಧರ್ಮೋಪದೇಶಗಳ ಮೂಲಕ ಭಕ್ತರನ್ನು ಜಾಗೃತಗೊಳಿಸಿದ ಶ್ರೀಗಳುಉಗರಗೋಳ ಗ್ರಾಮಕ್ಕೆ ಆಗಮಿಸಿದರು ಹಾಗೂ ಇಲ್ಲಿಯೇ ನೆಲೆನಿಂತು ಶ್ರೀ ನಿರ್ವಾಣೇಶ್ವರಮಠವನ್ನು ಸ್ಥಾಪಿಸಿದರು.ಶ್ರೀಗುರು ನಿರ್ವಾಣೇಶ್ವರರು ದಾರ್ಶನಿಕರು. ಆಗಾಗ್ಗೆ ಹುಬ್ಬಳಿಯ ಶ್ರೀಸಿದ್ದಾರೂಢರು, ಸಂತ ಶಿಶುನಾಳ ಶರೀಫರು ಸೇರಿದಂತೆ ಇನ್ನಿತರ ಗುರುಗಳ ಜೊತೆಯಲ್ಲಿಸಮಾಲೋಚಿಸುತ್ತಿದ್ದರು. ಭಕ್ತರಲ್ಲಿನ ಕಂದಾಚಾರ, ಮೂಢನಂಬಿಕೆಗಳು, ಅವರ ಸಾಮಾಜಿಕಪ್ರಗತಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು ಶ್ರೀಗಳು ಸಾಹಿತಿಗಳೂ ಕೂಡಆಗಿದ್ದು “ಪಂಚಿಕರ್ಣ” ಎಂಬ ಗ್ರಂಥವನ್ನು ರಚಿಸಿದ್ದರು. ಇಂತಹ ಮಹಿಮನಿರ್ವಾಣೇಶ್ವರರ ಉಲ್ಲೇಖವನ್ನು ಸಿದ್ದಾರೂಢ ಪುರಾಣದ ಕೊನೆಯಲ್ಲಿ ನಾವುಕಾಣಬಹುದು.ಶ್ರೀ ಗುರು ನಿರ್ವಾಣೇಶ್ವರರ ನಂತರ ಮಠ ಖಾಲಿ ಉಳಿದಿದ್ದು ಮಧ್ಯದಲ್ಲಿ ಕೆಲಕಾಲ ಸ್ವಾಮಿಗಳೊಬ್ಬರು ಧಾರ್ಮಿಕ ಆಚರಣೆಗಳನ್ನು ನಡೆಸಿರುವ ಬಗ್ಗೆ ತಿಳಿದು ಬರುತ್ತದೆ.ಆದರೆ ಅವರ ಬಗ್ಗೆ ತಿಳಿದುಬರುವುದಿಲ್ಲ. ಅನಂತರ ಮಠವು ಸುದೀರ್ಘ 30 ವರ್ಷಗಳ ಕಾಲಖಾಲಿ ಉಳಿದು ಜೀರ್ಣಗೊಂಡಂತೆ ತೋರುತಿದ್ದು 1998ರ ಏಪ್ರಿಲ್ 10ರಲ್ಲಿ ಶ್ರೀಮಠದಪಟ್ಟಕ್ಕೆ ಬಂದವರು ಈಗಿನ ಶ್ರೀಗಳಾದ ಶ್ರೀ.ಮ.ನಿ.ಪ್ರ. ಗುರು ಮಹಾಂತ ಸ್ವಾಮಿಗಳು. ಶ್ರೀಗಳುಶಿವಯೋಗ ಮಂದಿರ ಹಾಗೂ ವಾರಣಾಸಿ ಜಂಗಮವಾಡಿ ಮಠದಲ್ಲಿ ಅಧ್ಯಯನ ನಡೆಸಿದಸಂಸ್ಕøತ ಎಂ.ಎ. ಪದವೀದರರು. ಶ್ರೀಗಳು ಶ್ರೀಮಠಕ್ಕೆ ಬಂದ ನಂತರ ಹಂತ ಹಂತವಾಗಿಮಠವನ್ನು ಅಭಿವೃದ್ದಿಗೊಳಿಸುತ್ತಿದ್ದು ಮುಂದಿನ ಹಂತಗಳಲ್ಲಿ ದಾಸೋಹ ಭವನ ಸೇರಿದಂತೆಇನ್ನಿತರ ಅಭಿವೃದ್ದಿ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಮಹಾಂತ ಸ್ವಾಮಿಗಳು
Date of Birth :
01-06-1969
Place :
ಬೈಲವಾಡ, ಬೈಲಹೊಂಗಲ ತಾ||
Pattadikara :
10-04-1998
Photo :
Programs
ಯುಗಾದಿಗೆ ಶ್ರೀ ಮಠದ ಜಾತ್ರೆ ಮತ್ತು ಶ್ರೀ ಹಿರಿಯ ಗುರುಗಳ ಪುಣ್ಯಸ್ಮರಣೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ, ವಿಶೇಷ ಪೂಜೆ ಕಾರ್ತಿಕ ಮಾಸದಲ್ಲಿ ದೀಪೋತ್ಸವ
Photos
Full Address Kannada
ಶ್ರೀ ನಿರ್ವಾಣೇಶ್ವರ ಮಠ
ಉಗರಗೋಳ - 591 110
ಸವದತ್ತಿ ತಾ||, ಬೆಳಗಾವಿ ಜಿಲ್ಲೆ