ಹಾಸನ ಜಿಲ್ಲಾ ಕೇಂದ್ರದಿಂದ 70 ಕಿ.ಮೀ. ದೂರದಲ್ಲಿರುವ ಮಾಡಾಳು ಗ್ರಾಮದಮಧ್ಯಭಾಗದಲ್ಲಿ ಸುಮಾರು 415 ವರ್ಷಗಳ ಪುರಾತನ ಇತಿಹಾಸವನ್ನು ಹೊಂದಿರುವ ಶ್ರೀನಿರಂಜನ ಪೀಠ, ವಿರಕ್ತ ಮಠವು ತನ್ನ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಮೂಲಕ ಈ ಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆಲೆಗೊಳಿಸಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ಚನ್ನಬಸವ ಶಿವಯೋಗಿಗಳನ್ನು ಗುರುತಿಸಲಾಗಿದೆ.ಶ್ರೀ ಚನ್ನಬಸವ ಶಿವಯೋಗಿಗಳಿಗೂ ಪೂರ್ವದಲ್ಲಿ ಶ್ರೀಮಠವು ಅಸ್ತಿತ್ತ್ವದಲ್ಲಿತ್ತೆಂದುಹೇಳಲಾಗುತ್ತಿದ್ದು ನಿಖರ ದಾಖಲೆಗಳು ಲಭ್ಯವಿಲ್ಲ. ಶ್ರೀ ಚನ್ನಬಸವ ಶಿವಯೋಗಿಗಳು ನಿತ್ಯಶಿವಾನುಭವಗೋಷ್ಠಿಗಳನ್ನು ನಡೆಸುತ್ತ ಧರ್ಮ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದರು.ಇವರ ನಂತರ ಶ್ರೀ ಶಾಂತಮಲ್ಲ ದೇಶಿಕೇಂದ್ರ ಸ್ವಾಮಿಗಳು ಹಾಗೂ ಶ್ರೀ ರುದ್ರಮುನೀಶ್ವರಸ್ವಾಮಿಗಳು ಅಧಿಕಾರ ನಡೆಸಿದ್ದು ಧರ್ಮ ಪ್ರಚಾರ ಕಾರ್ಯಾರ್ಥ ಹಳ್ಳಿ ಹಳ್ಳಿಗಳಿಗೆ ಸಂಚರಿಸಿಭಕ್ತರಲ್ಲಿ ವೀರಶೈವ ಧರ್ಮದ ಬಗೆಗೆ ಅರಿವನ್ನು ಮೂಡಿಸಿದ್ದರು.ಇವರ ನಂತರ 1920ರಲ್ಲಿ ತಮ್ಮ 10ನೇ ವಯಸ್ಸಿನಲ್ಲಿ ಶ್ರೀಮಠದಉತ್ತರಾಧಿಕಾರಿಗಳಾಗಿ ಬಂದ ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಚಂದ್ರಶೇಖರಮಹಾಸ್ವಾಮಿಗಳು ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತದಲ್ಲಿ ಸ್ನಾತಕೋತ್ತರ ಪದವಿಪಡೆದವರು. ಶ್ರೀಗಳು ಮಠಕ್ಕೆ ಬಂದಾಗ ಶ್ರೀಮಠದ ಕಟ್ಟಡವು ಶಿಥಿಲಾವಸ್ಥೆಯಲ್ಲಿತ್ತು. ಶ್ರೀಗಳುಶ್ರೀಮಠವನ್ನು ಭಕ್ತರ ಸಂಘಟನೆಯೊಂದಿಗೆ ನೂತನ ಬೃಹತ್ ಮಠದ ಕಟ್ಟಡವನ್ನು ನಿರ್ಮಿಸಿಗುರುಗಳ ಗದ್ದುಗೆಗಳನ್ನು ನವೀಕರಿಸಿದರು.ಪ್ರಸ್ತುತ ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು ಹಿಂದಿನಶ್ರೀಗಳಿರುವಾಗಲೇ 1992ರ ಮೇ 7ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿ ಅಧಿಕಾರಸ್ವೀಕರಿಸಿದರು. ಶ್ರೀಗಳು ಕನ್ನಡ ಸ್ನಾತಕೋತ್ತರ ಪದವೀದರರು. ಹಿಂದಿನ ಗುರುಗಳಮಾರ್ಗದರ್ಶನದಲ್ಲಿ ಪರಿಪಕ್ವಗೊಂಡ ಶ್ರೀಗಳು ಅವರ ಆಶೀರ್ವಾದದೊಂದಿಗೆಶ್ರೀಮಠವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸುತ್ತಿದ್ದಾರೆ ಹಾಗೂ ಶ್ರೀಮಠದಲ್ಲಿ ಪ್ರತಿ ತಿಂಗಳಎರಡನೇ ಭಾನುವಾರ ಧಾರ್ಮಿಕ ಭಜನಾ ಕಾರ್ಯಕ್ರಮವನ್ನು ನಡೆಸುತ್ತ ಭಕ್ತರನ್ನುಧಾರ್ಮಿಕ ಚಿಂತನೆಗೆ ಒಳಪಡಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ರುದ್ರಮುನಿ ಮಹಾಸ್ವಾಮಿಗಳು
Date of Birth :
04-05-1975
Place :
ಸಿದ್ದರಹಳ್ಳಿ, ಅರಸೀಕೆರೆ ತಾ||
Pattadikara :
07-05-1992
Photo :
Programs
ಪ್ರತಿ ಎರಡನೇ ಭಾನುವಾರ ಭಜನಾ ಕಾರ್ಯಕ್ರಮ
ಧನುರ್ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಕಾರ್ತೀಕ ಮಾಸದಲ್ಲಿ ಕಾರ್ತಿಕೋತ್ಸವ
Institutions
ಕಿರಿಯ ಪ್ರಾಥಮಿಕ ಶಾಲೆ
ಐ.ಟಿ.ಐ. ಕಾಲೇಜು
ವಿದ್ಯಾರ್ಥಿ ನಿಲಯ & ಕಂಪ್ಯೂಟರ್ ಸೆಂಟರ್
Photos
Full Address Kannada
ಶ್ರೀ ನಿರಂಜನ ಪೀಠ-ವಿರಕ್ತಮಠ
ಮಾಡಾಳು - 573 117
ಅರಸೀಕೆರೆ ತಾ||, ಹಾಸನ ಜಿಲ್ಲೆ