ಕರ್ತೃ – ಶ್ರೀ ಷ.ಬ್ರ. ಇಷ್ಟಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಶ್ರೀ ಜಂಭುಕೇಶ್ವರ ದೇವಸ್ಥಾನದಹತ್ತಿರ ಶ್ರೀ ಷ.ಬ್ರ. ಇಷ್ಟಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಸುಮಾರು 18ನೇ ಶತಮಾನದಅಂತ್ಯಭಾಗದಲ್ಲಿ ಪ್ರಾರಂಭಗೊಂಡಿರುವ ಶ್ರೀ ಮುತ್ತಿನಕಂತಿ ಹಿರೇಮಠವು ತನ್ನ ಧಾರ್ಮಿಕಆಚರಣೆಗಳಿಂದಾಗಿ ಈ ಭಾಗದಲ್ಲಿ ಹೆಚ್ಚು ಪ್ರಚಲಿತಕ್ಕೆ ಬಂದಿದೆ. ಶ್ರೀಮಠವು ಶ್ರೀಶೈಲ ಪೀಠದಶಾಖಾ ಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಇಷ್ಟಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಸ್ಥಾಪನೆಮಾಡಿದರೆಂದು ಹೇಳಲಾದರೂ ನಿಖರವಾದ ಕಾಲಮಾನವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಶ್ರೀಗಳು ಹೆಚ್ಚು ಧರ್ಮನಿಷ್ಟರಾಗಿದ್ದು ತಮ್ಮ ಧಾರ್ಮಿಕ ಆಚರಣೆಗಳ ಮೂಲಕಶ್ರೀಮಠಕ್ಕೆ ಭಕ್ತರನ್ನು ಸೆಳೆದಿದ್ದಾರೆ. ಹಾಗೂ ತಮ್ಮ ತಪೋಶಕ್ತಿಯಿಂದಾಗಿ ಶ್ರೀಮಠದ ಭಕ್ತರಿಗೆಸನ್ಮಾರ್ಗ ತೋರುತ್ತಾ ಮಠವನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಿದ್ದು ಜೊತೆಗೆ ವೀರಶೈವಧರ್ಮದ ಪ್ರಸರಣವನ್ನೂ ಕೈಗೊಂಡಿದ್ದಾರೆ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ನಿಖರವಾದ ಮಾಹಿತಿಗಳಿಲ್ಲದಿದ್ದರೂ ಸುಮಾರು 4 ಜನ ಸ್ವಾಮಿಗಳು ಈ ಮಧ್ಯದಲ್ಲಿ ಶ್ರೀಮಠದ ಅಧಿಕಾರ ನಡೆಸಿದ್ದಾರೆಎಂದು ಹೇಳಲಾಗುತ್ತದೆ.
ಹಿಂದಿನ ಶ್ರೀಗಳಾದ ಶ್ರೀ ಶಿವಲಿಂಗೇಶ್ವರರು ಶ್ರೀಮಠದ ಧಾರ್ಮಿಕಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ.ಈಗಿನ ಹಿರಿಯ ಗುರುಗಳಾದ ಶ್ರೀ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳುಒಂದು ದಶಕದ ಕಾಲ ಖಾಲಿ ಉಳಿದಿದ್ದ ಶ್ರೀಮಠಕ್ಕೆ ತಮ್ಮ 12ನೇ ವಯಸ್ಸಿನಲ್ಲಿಯೇ 1951ರಲ್ಲಿಪಟ್ಟಾಧಿಕಾರದ ಅನುಗ್ರಹ ಪಡೆದು ಮಠವನ್ನು ಮುನ್ನಡೆಸಿದವರು. ಶ್ರೀಗಳು ಪಟ್ಟಕ್ಕೆ ಬಂದನಂತರ ಬೆಂಗಳೂರಿನ ಶ್ರೀ ಮಹಾಂತಿನಮಠದಲ್ಲಿ ನೆಲೆಸಿ ಸಂಸ್ಕøತ ಅಧ್ಯಯನವನ್ನು ಮಾಡಿಮಠಕ್ಕೆ ಹಿಂತಿರುಗಿ ಬಂದು ಧಾರ್ಮಿಕ ಆಚರಣೆಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಶ್ರೀಗಳು ಸುಧೀರ್ಘ 6 ದಶಕಗಳ ಕಾಲ ಶ್ರೀಮಠವನ್ನು ಮುನ್ನಡೆಸಿದ್ದು ಭಕ್ತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ. ಶ್ರೀಗಳು 2007ರ ನವೆಂಬರ್12ರಲ್ಲಿ ಶ್ರೀ ಷ.ಬ್ರ. ಶಿವಲಿಂಗ ಪಂಡಿತಾರಾಧ್ಯರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆತಂದಿದ್ದು ಉಭಯ ಶ್ರೀಗಳು ಶ್ರೀಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು
Date of Birth :
1939
Place :
ತೇರದಾಳ, ಜಮಖಂಡಿ ತಾ||
Pattadikara :
1951
Photo :
Swamiji Name :
ಶ್ರೀ ಷ.ಬ್ರ. ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
Date of Birth :
31-7-1984
Place :
ಜಮಖಂಡಿ (ತಾ||)
Pattadikara :
12-11-2007
Photo :
Programs
ಪ್ರತಿ ಹುಣ್ಣಿಮೆಗೆ ಸದ್ ವಿಚಾರ ಚಿಂತನ. ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ. ನವರಾತ್ರಿಗೆ ಶ್ರೀದೇವಿ ಪುರಾಣ ಹಾಗೂ ವಿವಿಧ ಕಾರ್ಯಕ್ರಮಗಳು. ಶಿವರಾತ್ರಿಗೆ ಇಷ್ಟಲಿಂಗ ಮಹಾಪೂಜೆ.