Shree Murulasiddeshwara Swami Virakta Matha

Shree Murulasiddeshwara Swami Virakta Matha Claimed

ಶ್ರೀ ಮರುಳಸಿದ್ದೇಶ್ವರ ಸ್ವಾಮಿ ವಿರಕ್ತ ಮಠ

Average Reviews

Description

ಶ್ರೀ ಮರುಳಸಿದ್ದೇಶ್ವರ ಸ್ವಾಮಿ ವಿರಕ್ತ ಮಠ

ಕರ್ತೃ – ಶ್ರೀ ಮ.ನಿ.ಪ್ರ. ಮರುಳಸಿದ್ದೇಶ್ವರ ಸ್ವಾಮಿಗಳು

ಸೋಮವಾರಪೇಟೆ ತಾಲ್ಲೂಕು ತೊರೆನೂರು ಗ್ರಾಮದ ಹೊರಭಾಗದಲ್ಲಿಹರಿಯುವ ಕಾವೇರಿ ನದಿಯ ದಡದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ವಿರಕ್ತ ಮಠವುಸ್ಥಾಪಿತಗೊಂಡಿದ್ದು ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ. ಶ್ರೀಮರುಳಸಿದ್ದೇಶ್ವರ ಸ್ವಾಮಿಗಳು ಮಠವನ್ನು ಸ್ಥಾಪಿಸಿದ್ದರಿಂದ “ಶ್ರೀ ಮರುಳಸಿದ್ದೇಶ್ವರ ಸ್ವಾಮಿವಿರಕ್ತ ಮಠ” ಎಂಬ ಹೆಸರು ಬಂದಿದೆ.ಶ್ರೀ ಮರುಳ ಸಿದ್ದೇಶ್ವರ ಸ್ವಾಮಿಗಳು ಸಂಚಾರದಲ್ಲಿ ಈ ಭಾಗಕ್ಕೆ ಆಗಮಿಸಿ ಕಾವೇರಿನದಿಯ ಈ ಪ್ರಶಾಂತ ಪರಿಸರದಲ್ಲಿ ನೆಲೆನಿಂತು ಅನುಷ್ಠಾನಗೊಂಡಿರುತ್ತಾರೆ. ಇವರಪವಾಡಗಳ ಕುರಿತಾಗಿ ತಿಳಿದ ಲಿಂಗರಾಜ ಅರಸರು ಶ್ರೀಗಳಿಗಾಗಿ ಮಠವನ್ನು ಸ್ಥಾಪಿಸಿಸುತ್ತಲಿನ ಜಾಗವನ್ನು ಉಂಬಳಿಯಾಗಿ ನೀಡಿದರು. ಈ ರೀತಿ ರಾಜಾಶ್ರಯದಲ್ಲಿ ಬೆಳೆದಶ್ರೀಮಠವು ಈ ಭಾಗದಲ್ಲಿ ವೀರಶೈವ ಧರ್ಮದ ಬೆಳವಣಿಗೆಗೆ ತನ್ನದೇ ಕೊಡುಗೆಯನ್ನುನೀಡಿದೆ.ಕರ್ತೃಗಳ ನಂತರ ಶ್ರೀ ಚನ್ನಮಲ್ಲಪ್ಪಸ್ವಾಮಿಗಳು, ನಂತರದ ಶ್ರೀ ಗುರುಲಿಂಗಪ್ಪಸ್ವಾಮಿಗಳು ಹಾಗೂ ಶ್ರೀ ಬಸವಲಿಂಗ ಸ್ವಾಮಿಗಳನ್ನು ವಿಶೇಷವಾಗಿ ಗುರುತಿಸಲಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು ಸಿದ್ದಗಂಗೆಯಲ್ಲಿ ವಿದ್ಯಾಭ್ಯಾಸಪೂರ್ಣಗೊಳಿಸಿ 1956ರಲ್ಲಿ ಹಿಂದಿನ ಗುರುಗಳಿರುವಂತೆಯೇ ಶ್ರೀಮಠದ ಅಧಿಕಾರ ಸ್ವೀಕರಿಸಿಗುರುಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಅಭಿವೃದ್ದಿಪಡಿಸಿದರು. ಮಠದ ಕಟ್ಟಡವನ್ನುನವೀಕರಿಸಿದ ಶ್ರೀಗಳು ಶ್ರೀಮಠವನ್ನು ಆರ್ಥಿಕವಾಗಿ ಶ್ರೀಮಂತಗೊಳಿಸಿದರು.ಶ್ರೀ ಮಹಾಂತ ಸ್ವಾಮಿಗಳ ಉತ್ತರಾಧಿಕಾರಿಗಳಾಗಿ 1987ರಲ್ಲಿ ತಮ್ಮ 16ನೇಪ್ರಾಯದಲ್ಲೇ ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡ ಶ್ರೀ ಮ.ನಿ.ಪ್ರ. ಮಲ್ಲೇಶ ಸ್ವಾಮಿಗಳು ಆನಂತರತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮಠಕ್ಕೆ ಬಂದು ಗುರುಗಳ ಮಾರ್ಗದರ್ಶನದಲ್ಲಿಮಠವನ್ನು ಅಭಿವೃದ್ದಿಗೊಳಿಸಿದ್ದಾರೆ. ಶ್ರೀಮಹಾಂತ ಸ್ವಾಮಿಗಳು ಪ್ರಾರಂಭಿಸಿದ್ದ ಅನೇಕಸಮಾಜ ಹಿತ ಕಾರ್ಯಕ್ರಮಗಳನ್ನು ಮುಂದುವರೆಸಿರುವ ಶ್ರೀಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಪಡಿಸುತ್ತಿದ್ದಾರೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಮಲ್ಲೇಶ ಸ್ವಾಮಿಗಳು
Date of Birth :
01-08-1971
Place :
ಕುರುಬರಹಳ್ಳಿ, ಕೆ.ಆರ್.ನಗರ ತಾ||
Pattadikara :
01-07-1987
Photo :

Programs

ಮಾಘ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯ ಸ್ಮರಣೋತ್ಸವ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು

Photos

Full Address Kannada

ಶ್ರೀ ಮರುಳಸಿದ್ದೇಶ್ವರ ಸ್ವಾಮಿ ವಿರಕ್ತ ಮಠ
ತೊರೆನೂರು - 571 236, ಕುಶಾಲನಗರ ಹೋಬಳಿ
ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ

Map

Near by Places

ತೊರೆನೂರು - 1 ಕಿ.ಮೀ.
ಕುಶಾಲನಗರ - 14 ಕಿ.ಮೀ.
ಸೋಮವಾರಪೇಟೆ - 28 ಕಿ.ಮೀ.
ಅರಕಲಗೂಡು - 28 ಕಿ.ಮೀ.

Statistic

74 Views
0 Rating
0 Favorite
0 Share
error: Content is protected !!