ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಲ್ಲಿ ಶ್ರೀ ಮುಘರಾಜೇಂದ್ರಮಹಾಸ್ವಾಮಿಗಳಿಂದ ಸುಮಾರು 12ನೇ ಶತಮಾನದಲ್ಲಿ ಸ್ಥಾಪಿತಗೊಂಡಿದೆಯೆಂದುಹೇಳಲಾದ ಶ್ರೀ ಮುರುಘಾಮಠವು ಅಸ್ಥಿತ್ವದಲ್ಲಿದ್ದು ತನ್ನ ಪುರಾತನ ಹಿನ್ನೆಲೆ ಹಾಗೂಪರಂಪರೆಯ ಗುರುಗಳ ಅನುಷ್ಠಾನ ಬಲದೊಂದಿಗೆ ಈ ಬಾಗದಲ್ಲಿ ಹೆಸರಾಗಿದೆ.ಕರ್ತೃಗುರುಗಳು ಮಹಾನ್ ಶಿವಶರಣರಾಗಿದ್ದು 12ನೇ ಶತಮಾನದ ಬಸವಾದಿಶರಣರ ತತ್ವಗಳಿಂದ ಪ್ರಭಾವಿತರಾಗಿ ಶರಣರ ತತ್ವಗಳನ್ನು ಪ್ರಚುರಪಡಿಸುತ್ತಾ ಭಕ್ತರಲ್ಲಿಧರ್ಮಜಾಗೃತಿ ಮೂಡಿಸುತ್ತಿದ್ದರು. ಶ್ರೀಗಳು ಮಹಾನ್ ವಿದ್ವಾಂಸರಾಗಿದ್ದು “ಹಮ್ಮೀರಕಾವ್ಯ”ದ ಕರ್ತೃವಾಗಿ ಹೆಚ್ಚು ಪ್ರಖ್ಯಾತಿ ಪಡೆದಿದ್ದರು. ಶ್ರೀಗಳ ನಂತರದ 12 ಜನ ಗುರುಗಳುಕರ್ತೃಗುರುಗಳ ಹೆಸರನ್ನೇ ಅಭಿದಾನ ಪಡೆದು ಶ್ರೀಮಠವನ್ನು ಮುನ್ನಡೆಸಿದ್ದಾರೆ. ಈ ಕಾರಣದಿಂದಾಗಿ ಶ್ರೀಮಠದ ಪರಂಪರೆಯ ಬಗ್ಗೆ ನಿಖರತೆ ಇಲ್ಲ.ಹೀಗಾಗಿ 14ನೇ ಗುರುಗಳಾದ ಶ್ರೀ ರಾಚೋಟಿ ಸ್ವಾಮಿಗಳಿಂದ ಮುಂದುವರೆದಪರಂಪರೆಯು ಬೇರೆ ಹೆಸರಿನಿಂದ ಅಭಿದಾನ ಪಡೆದು ಅಧಿಕಾರಕ್ಕೆ ಬರುತ್ತಿರುವುದನ್ನುಕಾಣಬಹುದು. 15ನೇ ಶ್ರೀಗಳಾದ ಶ್ರೀ ನೀಲಕಂಠ ಸ್ವಾಮಿಗಳು 1930ರಲ್ಲಿ ಶ್ರೀಮಠದಅಧಿಕಾರವನ್ನು ವಹಿಸಿಕೊಂಡು ಹಿರಿಯ ಗುರುಗಳ ಹಾದಿಯಲ್ಲಿಯೇ ಮುನ್ನಡೆದರು.ಶ್ರೀಗಳು ಶಿವಯೋಗ ಮಂದಿರದಲ್ಲಿ ಸಂಸ್ಕøತ ಹಾಗೂ ವೇದಾಧ್ಯಯನ ಮಾಡಿದವರಾಗಿದ್ದುಮಹಾನ್ ಧಾರ್ಮಿಕ ಚಿಂತಕರೆಂದು ಹೆಸರಾಗಿದ್ದರು. ಶ್ರೀಗಳು ಶ್ರೀಮಠವನ್ನು ಅಭಿವೃದ್ಧಿಪಥದತ್ತ ಮುನ್ನಡೆಸಿ 1999ರ ಡಿಸೆಂಬರ್ನಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಕಾಶೀನಾಥ ಸ್ವಾಮಿಗಳು 16ನೆಯರಾಗಿದ್ದು 2000ದನವೆಂಬರ್ 9ರಲ್ಲಿ ಶ್ರೀಮಠದ ಅಧಿಕಾರ ವಹಿಸಿಕೊಂಡು ಹಿರಿಯ ಗುರುಗಳ ಆಶೀರ್ವಾದಬಲದೊಂದಿಗೆ ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ. ಶ್ರೀಗಳು ಶಿವಯೊಗ ಮಂದಿರದಲ್ಲಿವೇದಾಧ್ಯಯನ ಮಾಡಿ ನಂತರ ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದಸ್ನಾತಕೋತ್ತರ ಪದವಿ ಪಡೆದು ವೇದಾಂತಾಚಾರ್ಯರೆನಿಸಿಕೊಂಡರು. ಶ್ರೀಗಳು ಅಧಿಕಾರವಹಿಸಿಕೊಂಡ ನಂತರ ಶ್ರೀಮಠವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಕಾರ್ಯಗಳೊಂದಿಗೆ ಹೆಚ್ಚುಸಮಾಜಮುಖಿಯಾಗಿ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಕಾಶೀನಾಥ ಸ್ವಾಮಿಗಳು
Date of Birth :
15-7-1971
Place :
ಪಡಸಾವಳಿ, ಆಳಂದ ತಾ||
Pattadikara :
9-11-2000
Photo :
Programs
ಜನವರಿಯಲ್ಲಿ ಷಷ್ಠಿ ತಿಥಿಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳು ಪುರಾಣ ಪ್ರವಚನ, ಕೀರ್ತನ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು. ಕಾರ್ತೀಕ ಮಾಸದಲ್ಲಿ ಹುಣ್ಣಿಮೆಯ ನಂತರದ ಸೋಮವಾರ/ಗುರುವಾರ ಕಾರ್ತಿಕೋತ್ಸವ.
Institutions
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಸಂಗೀತ ಪಾಠಶಾಲೆ
Photos
Full Address Kannada
ಶ್ರೀ ಮುರುಘಾಮಠ ಗುಳೇದಗುಡ್ಡ - 587 203 ಬಾದಾಮಿ ತಾ||, ಬಾಗಲಕೋಟೆ ಜಿ||