Shree Muru Savira Matha (Tippi Matha) – Bailahongal

Shree Muru Savira Matha (Tippi Matha) – Bailahongal Claimed

ಶ್ರೀ ಮೂರು ಸಾವಿರ ಮಠ (ತಿಪ್ಪಿಮಠ) - ಬೈಲಹೊಂಗಲ

Average Reviews

Description

ಶ್ರೀ ಮೂರು ಸಾವಿರ ಮಠ (ತಿಪ್ಪಿಮಠ) – ಬೈಲಹೊಂಗಲ

ಕರ್ತೃ – ಪೂಜ್ಯ ಶ್ರೀ ನೀಲಕಂಠ ಶಿವಯೋಗಿಗಳು

ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣವು ಪುರಾತನ ವೀರಶೈವ ಧರ್ಮಕೇಂದ್ರ.ಈ ಪಟ್ಟಣದ ಬಿಳ್ಳೂರುಗಲ್ಲಿಯಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಮೂರು ಸಾವಿರ ಮಠ( )ವು ಬೆಳಗಾವಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ಒಂದಾಗಿದ್ದು ಹಿಂದಿನ ಶ್ರೀಗಳಾದಶ್ರೀ.ಮ.ನಿ.ಪ್ರ. ಗಂಗಾಧರ ಮಹಾಸ್ವಾಮಿಗಳಿಂದಾಗಿ ಹೆಚ್ಚು ಪ್ರಖ್ಯಾತಿ ಪಡೆದಿದೆ.ಶ್ರೀ ತಿಪ್ಪಿಮಠವು ಪುರಾತನ ಕಾಲದ್ದೆಂದು ಹೇಳಲಾದರೂ ಸೂಕ್ತ ದಾಖಲೆಗಳಕೊರತೆಯಿದೆ. ಶ್ರೀಮಠದ ಕರ್ತೃಗುರುಗಳೆಂದು ಶ್ರೀ ನೀಲಕಂಠ ಶಿವಯೋಗಿಗಳನ್ನುಹೆಸರಿಸಲಾಗಿದ್ದು ಅವರ ಕರ್ತೃಗದ್ದುಗೆ ಶ್ರೀಮಠದಲ್ಲಿಯೇ ಇದ್ದು ನಿತ್ಯ ಪೂಜೆಗೆ ಒಳಪಟ್ಟಿದೆ.ಮೂಲತಃ ಬೈಲಹೊಂಗಲ ಪಟ್ಟಣಕ್ಕೆ ಸಮೀಪ ಇರುವ ಹೊಸೂರಿನಲ್ಲಿರುವ ಶ್ರೀ ವಿರಕ್ತಮಠವು ಶ್ರೀಮಠದ ಮೂಲವಾಗಿದ್ದು ಶ್ರೀ ಗಂಗಾಧರ ಮಹಾಸ್ವಾಮಿಗಳ ಕಾಲದಲ್ಲಿಬೈಲಹೊಂಗಲದ ಮಠವು ಉನ್ನತಿ ಕಂಡು ಇಲ್ಲಿಂದಲೇ ಶ್ರೀಮಠದ ಎಲ್ಲಾ ಕಾರ್ಯಕಲಾಪಗಳು ಜರುಗುವಂತಾದವು.ಕರ್ತೃಗುರುಗಳಾದ ಶ್ರೀ ನೀಲಕಂಠ ಶಿವಯೋಗೀಶ್ವರರು ಸ್ಥಿರ ಜಂಗಮರಾಗಿದ್ದುಹೊಸೂರಿನ ವಿರಕ್ತಮಠದ ಮಹಿಮೆಯನ್ನು ಮೆರೆಸಿದರು. ಇವರ ತಪಃಶಕ್ತಿಯನ್ನು ಅರಿತುಇವರ ಉಪದೇಶಗಳಿಂದ ಆನಂದಿತರಾದ ಭಕ್ತರು ಊರೂರಿಗೆ ಇವರ ಮಠ ಕಟ್ಟಿದರು.ಹೊಸೂರು-ಬೈಲಹೊಂಗಲ ಭಾಗದಲ್ಲಿ ಇವರು ಲೀಲಾಪುರುಷ ಶಿವಯೋಗಿಗಳೆಂದುಇಂದಿಗೂ ಸ್ಮರಿಸಲ್ಪಡುತ್ತಿದ್ದಾರೆ.ಇಂತಹ ಹೊಸೂರಿನ ವಿರಕ ್ತ ಮಠವು ಕಾಲಾನಂತರದಲ್ಲಿಜೀರ್ಣಗೊಳ್ಳತೊಡಗಿತು. ಸುಮಾರು ನಾಲ್ಕು ದಶಕಗಳ ಕಾಲ ಮಠಾಧೀಶರಿಲ್ಲದೇ ಖಾಲಿಉಳಿದಿದ್ದ ಶ್ರೀ ವಿರಕ್ತ ಮಠಕ್ಕೆ ದಯಮಾಡಿಸಿದವರೇ ಹಿಂದಿನ ಶ್ರೀಗಳಾದ ಶ್ರೀ.ಮ.ನಿ.ಪ್ರ.ಗಂಗಾಧರ ಮಹಾಸ್ವಾಮಿಗಳು. ಶ್ರೀಗಳು 1952ರ ಜೂನ್ 01ರಲ್ಲಿ ಸಂಪಗಾವಿಯಕೋರಿಮಠದಲ್ಲಿ ಜನಿಸಿ ಅಲ್ಲೇ ಪ್ರೌಢಶಾಲೆ ತನಕ ವಿದ್ಯಾಭ್ಯಾಸ ಪೂರ್ಣಗೊಳಿಸಿದವರು.ಅಲ್ಲಿಂದ ಮುಂದೆ ಮುರುಗೋಡದ ಮಹಾತಪಸ್ವಿ ಮಹಾಂತ ಮಹಾಶಿವಯೋಗೀಶ್ವರರಸಂಸ್ಕøತ ಪಾಠಶಾಲೆಯಲ್ಲಿ ಎರಡು ವರ್ಷ ಅಭ್ಯಸಿಸಿದ ಶ್ರೀಗಳು ಹಾನಗಲ್ಲ ಸದಾಶಿವಸ್ವಾಮಿಗಳ ಕೃಪಾದೃಷ್ಟಿಗೆ ಬಿದ್ದು ಶಿವಯೋಗ ಮಂದಿರದಲ್ಲಿ ವೀರಶೈವ ಧರ್ಮ-ತತ್ವದವಿಷಯದ ಅಧ್ಯಯನ ಮಾಡಿದರು.ಶ್ರೀ ಗಂಗಾಧರ ಮಹಾಸ್ವಾಮಿಗಳು ಇನ್ನೂ ಕೆಲ ವರ್ಷ ಅಧ್ಯಯನದ ಬಯಕೆಇದ್ದರೂ ಗುರುಗಳ ಆಜ್ಞೆ ಮೇರೆಗೆ 1974ರಲ್ಲಿ ಹೊಸೂರಿನ ವಿರಕ್ತಮಠಕ್ಕೆ ಬಂದರು. ಆದರೆವಿರಕ್ತಮಠವು ಜೀರ್ಣಗೊಂಡಿರುವುದನ್ನು ಕಂಡ ಶ್ರೀಗಳು ಎದೆಗುಂದದೇ ಮಠದಜಮೀನನ್ನು ರೂಢಿಸಿಕೊಂಡು ತಾವೇ ಕರ್ಮಯೋಗಿಗಳೆನಿಸಿ ಎರಡೇ ವರ್ಷದಲ್ಲಿ ಶ್ರೀವಿರಕ್ತಮಠಕ್ಕೆ ಹೊಸರೂಪ ಕೊಟ್ಟರು. ಶ್ರೀಮಠದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿದರು.ತಮ್ಮ ಕಾರ್ಯಕ್ರಮಗಳ ಮೂಲಕ ಧಾರ್ಮಿಕ ಕ್ರಾಂತಿಯನ್ನುಂಟು ಮಾಡಿದರು.ತಿಪ್ಪಿಮಠಶ್ರೀ ಹೊಸೂರು ವಿರಕ್ತಮಠದ ಶಾಖಾ ಮಠವಾದ ಬೈಲಹೊಂಗಲದ ಶ್ರೀತಿಪ್ಪೇಮಠವು ಸಂಪೂರ್ಣ ಜೀರ್ಣಗೊಂಡಿತ್ತು. ಆಗಾಗ ಇಲ್ಲಿಗೆ ಬಂದು ವ್ಯವಸ್ಥೆಸರಿಪಡಿಸಲು ಶ್ರಮಿಸುತ್ತಿದ್ದ ಶ್ರೀಗಳು 1980 ರಲ್ಲಿ ಶ್ರೀ ತಿಪ್ಪೇಮಠದಲ್ಲಿಯೇ ವಾಸ್ತವ್ಯ ಮಾಡಿಇಲ್ಲಿಯೇ ಇರತೊಡಗಿದರು. ಅನ್ಯರ ಪಾಲಾಗಿದ್ದ ಮಠದ ಪ್ರಾಂಗಣದ ಎರಡು ಎಕರೆಜಾಗವನ್ನು ವಶಪಡಿಸಿಕೊಂಡು ಕರ್ತೃಗದ್ದುಗೆಯನ್ನು ನವೀಕರಿಸಿ, ಶ್ರೀ ನೀಲಕಂಠೇಶ್ವರರಯಾತ್ರಾ ಮಹೋತ ್ಸವವನ್ನು ಆಚರಿಸುತ್ತಾ ಜನರ ಸಹಕಾರದೊಂದಿಗೆಯಶಸ್ವಿಗೊಳಿಸಿದ್ದಲ್ಲದೇ ಶ್ರೀಮಠವನ್ನು ಜೀರ್ಣಾಭಿವೃದ್ದಿಗೊಳಿಸಿದರು. ಅದರಉದ್ಘಾಟನೆಯನ್ನು ತಮ್ಮ ಪ್ರಸಾದ ಹಸ್ತಗಳಿಂದ ನೆರವೇರಿಸಿದ ಹುಬ್ಬಳ್ಳಿಯ ಮೂರುಸಾವಿರಮಠದ ಡಾ|| ಗಂಗಾಧರ ಮಹಾಸ್ವಾಮಿಗಳು ಇನ್ನು ತಿಪ್ಪಿಮಠವನ್ನು “ಜಗದ್ಗುರು ಶಾಖಾಮೂರು ಸಾವಿರ ಮಠ” ವೆಂದು ಕರೆಯೋಣ ಎಂದು ಅಪ್ಪಣೆ ಕೊಡಿಸಿದರು.ಈ ರೀತಿ ಶ್ರೀ ತಿಪ್ಪೇ ಮಠವನ್ನು ಕೇಂದ್ರವಾಗಿಟ್ಟುಕೊಂಡು ಎಲ್ಲಾ ಮಠಗಳಸರ್ವಾಂಗೀಣ ಅಭಿವೃದ್ಧಿ ಕೈಗೊಂಡ ಶ್ರೀ ಗಂಗಾಧರ ಮಹಾಸ್ವಾಮಿಗಳು ಇಂದು ನಾಡಿನಪ್ರಮುಖ ಮಠಗಳಲ್ಲಿ ಗುರುತಿಸುವಂತೆ ಮಾಡಿದ್ದರು ಹಾಗೂ ಶ್ರೀ ನೀಲಕಂಠೇಶ್ವರವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸಿ ಅದರ ಅಡಿಯಲ್ಲಿ 5 ಶಿಕ್ಷಣ ಸಂಸ್ಥೆಗಳನ್ನುಪ್ರಾರಂಭಿಸಿದರು. ಈ ರೀತಿಯಾಗಿ ಶ್ರೀಮಠದ ಉನ್ನತಿಗೆ ಕಾರಣರಾದ ಶ್ರೀ ಗಂಗಾಧರಮಹಾಸ್ವಾಮಿಗಳು 2009ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ. ಮ.ನಿ.ಪ್ರ. ಪ್ರಭು ನೀಲಕಂಠ ಮಹಾಸ್ವಾಮಿಗಳು2006ರಲ್ಲೇ ಶ್ರೀಮಠದ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಹಿರಿಯ ಶ್ರೀಗಳ ಐಕ್ಯಾನಂತರ 2015ರ ಏಪ್ರಿಲ್ 26ರಂದು ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ್ದಾರೆ. ಶ್ರೀಗಳುಶಿವಯೋಗ ಮಂದಿರ ಹಾಗೂ ಮೈಸೂರಿನ ಸುತ್ತೂರು ಮಠದಲ್ಲಿ ವಿದ್ಯಾಭ್ಯಾಸಪೂರ್ಣಗೊಳಿಸಿದ್ದು ಶ್ರೀಮಠಕ್ಕೆ ಮರಳಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ.ಹಿಂದಿನ ಗುರುಗಳಂತೆಯೇ ಕಾರ್ಯಶೀಲರಾಗಿರುವ ಶ್ರೀ ಪ್ರಭು ನೀಲಕಂಠಮಹಾಸ್ವಾಮಿಗಳು ಶ್ರೀಮಠದ ಉನ್ನತಿಗೆ ಶ್ರಮಿಸುತ್ತಿದ್ದಾರೆ. ಗುರುಗಳು ಸ್ಥಾಪಿಸಿದ ವಿದ್ಯಾಸಂಸ್ಥೆಗಳ ಆಡಳಿತವನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಬರುತ್ತಿರುವ ಶ್ರೀಗಳುಗುರುಗಳ ಹೆಸರಿನಲ್ಲಿ ನಾನಾ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡುಯಶಸ್ವಿಗೊಳಿಸುತ್ತಿದ್ದರು.

Swamiji

Swamiji Name :
ಶ್ರೀ ಮ.ನಿ.ಪ್ರ. ಪ್ರಭು ನೀಲಕಂಠ ಮಹಾಸ್ವಾಮಿಗಳು
Date of Birth :
14-10-1993
Place :
ಸಂಪಗಾಂ, ಬೈಲಹೊಂಗಲ ತಾ||
Pattadikara :
26-04-2015
Photo :

Programs

ಪ್ರತಿ ನಿತ್ಯ ರುದ್ರಾಭಿಷೇಕ ಪ್ರತಿ ತಿಂಗಳ ಮೂರನೇ ಭಾನುವಾರ “ಶಿವಾನುಭವ ಗೋಷ್ಠಿ”
ಶ್ರಾವಣ ಮಾಸದಲ್ಲಿ ನಿತ್ಯ ಪುರಾಣ ಶಿವರಾತ್ರಿಗೆ ಶ್ರೀ ಮಠದ ಜಾತ್ರೆ ಮತ್ತು ವಿವಿಧ ಕಾರ್ಯಕ್ರಮಗಳು ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಮೇ 29ನೇ ತಾರೀಖು ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Institutions

ಸಂಸ್ಕøತ ವೇದ ಪಾಠಶಾಲೆ ಪದವಿ ಪೂರ್ವ / ಪದವಿ ಕಾಲೇಜ್
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಐ.ಟಿ.ಐ.,/ಟಿ.ಸಿ.ಹೆಚ್.,/ಬಿ.ಎ.ಎಂ.ಎಸ್.ಕಾಲೇಜ್

Photos

Full Address Kannada

ಶ್ರೀ ಮೂರುಸಾವಿರ ಮಠ ಬಿಳ್ಳೂರುಗಲ್ಲಿ,
ಬೈಲಹೊಂಗಲ - 591 102
ಅಥಣಿ ತಾ||, ಬೆಳಗಾವಿ ಜಿಲ್ಲೆ

Map

Near by Places

ಬೆಳಗಾವಿ 48 ಕಿ.ಮೀ.
ಗೋಕಾಕ್ 41 ಕಿ.ಮೀ.
ಧಾರವಾಡ 70 ಕಿ.ಮೀ.¸
ಸವದತ್ತಿ 70 ಕಿ.ಮೀ.

Statistic

8 Views
0 Rating
0 Favorite
0 Share
error: Content is protected !!