Shree Mulimatha/Kallimatha

Shree Mulimatha/Kallimatha Claimed

ಶ್ರೀ ಮೂಲಿಮಠ / ಕಳ್ಳಿಮಠ

Average Reviews

Description

ಶ್ರೀ ಮೂಲಿಮಠ / ಕಳ್ಳಿಮಠ – ಸವದತ್ತಿ

ಕರ್ತೃ – ಶ್ರೀ ಮ.ಘ.ಚ. ವಿರೂಪಾಕ್ಷ ಶಿವಾಚಾರ್ಯ ಮಹಾಸ್ವಾಮಿಗಳು

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಮಧ್ಯಭಾಗದಲ್ಲಿ ಸುಮಾರು 400ವರ್ಷಗಳಿಗಿಂತಲೂ ಪುರಾತನವಾದ ಶ್ರೀ ಮೂಲಿ ಮಠ ಅಥವಾ ಶ್ರೀ ಕಳ್ಳಿಮಠವುಅಸ್ತಿತ್ವದಲ್ಲಿದ್ದು ಶ್ರೀಮಠದ ಕರ್ತೃಗುರುಗಳು ಶ್ರೀ.ಮ.ಘ.ಚ. ವಿರೂಪಾಕ್ಷ ಶಿವಾಚಾರ್ಯಮಹಾಸ್ವಾಮಿಗಳೆಂದು ಹೇಳಲಾಗಿದೆ. ಶ್ರೀಮಠವು ಶ್ರೀಮದ್ ಕಾಶಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ.ಶ್ರೀಮಠದ ಕರ್ತೃಗುರುಗಳಾದ ಶ್ರೀ ವಿರೂಪಾಕ ್ಷ ಶಿವಾಚಾರ್ಯಮಹಾಸ್ವಾಮಿಗಳು ಅನುಷ್ಠಾನ ಮೂರ್ತಿಗಳಾಗಿ ತಮ್ಮ ತಪೋಶಕ್ತಿಯಿಂದ ಅನೇಕಪವಾಡಗಳನ್ನು ಮಾಡಿ ಭಕ್ತರನ್ನುದ್ದರಿಸಿದ್ದರು. ತಮ್ಮ ಶಿವಯೋಗ ಸಿದ್ದಿಯಿಂದ ಅನೇಕಾನೇಕಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದ ಶ್ರೀಗಳ ಶಿವಯೋಗಕ್ಕೆ ಬೆರಗಾದ ಭಕ್ತರೊಬ್ಬರುಶ್ರೀಮಠವನ್ನು ನಿರ್ಮಿಸಲು ನೆರವಾಗಿ ಜೊತೆಯಲ್ಲಿ ಭೂಮಿಯನ್ನು ಉಂಬಳಿಯಾಗಿನೀಡಿದರು ಎಂದು ತಿಳಿದು ಬರುತ್ತದೆ.ಕರ್ತೃಗುರುಗಳು ತಮ್ಮ ಧಾರ್ಮಿಕ ಆಚರಣೆಗಳ ಮೂಲಕ, ತಮ್ಮಧರ್ಮೋಪದೇಶಗಳ ಮೂಲಕ ಭಕ್ತರಲ್ಲಿ ಧರ್ಮಜಾಗೃತಿಯನ್ನುಂಟು ಮಾಡಿ ಮಠವನ್ನುಬೆಳೆಸಿದರು. ನಂತರದ ಪರಂಪರೆಯ ಬಗ್ಗೆ ನಿಖರವಾದ ದಾಖಲೆಗಳಕೊರತೆಯಿರುವುದರಿಂದ ಸ್ಪಷ್ಟವಾಗಿ ಏನನ್ನೂ ಹೇಳಲು ಬರುವುದಿಲ್ಲ. ಲಭ್ಯವಿರುವದಾಖಲೆಗಳ ಪ್ರಕಾರ ಈಗಿನ ಶ್ರೀಗಳನ್ನು 4ನೇ ಶ್ರೀಗಳೆಂದು ಹೇಳಬಹುದು.ಹಿಂದಿನ ಶ್ರೀಗಳಾದ ಶ್ರೀ ಮ.ಘ.ಚ. ವೀರಯ್ಯ ಮಹಾಸ್ವಾಮಿಗಳು 1978ರಲ್ಲಿಶ್ರೀಮಠದ ಪಟ್ಟಾಧಿಕಾರದ ಅನುಗ್ರಹ ಪಡೆದು ಬಂದ ನಂತರ ಶ್ರೀಮಠವು ಹೆಚ್ಚಿನ ಅಭಿವೃದ್ದಿಕಂಡಿದೆ. ಶ್ರೀಗಳು ಕನ್ನಡ, ಹಿಂದಿ, ಸಂಸ್ಕøತ ಭಾಷೆಗಳಲ್ಲಿ ಹಿಡಿತ ಸಾಧಿಸಿ ತಮ್ಮಪಾಂಡಿತ್ಯದಿಂದ ಭಕ್ತರಲ್ಲಿ ಧಾರ್ಮಿಕ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು.ಈಗಿನ ಶ್ರೀಗಳಾದ ಶ್ರೀ.ಮ.ಘ.ಚ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು2012ರ ಫೆಬ್ರವರಿ 02ರಂದು ಶ್ರೀಮಠದ ಪಟ್ಟಕ್ಕೆ ಬಂದು ಸಮರ್ಥವಾಗಿ ಮುನ್ನಡೆಸಿಕೊಂಡುಬರುತ್ತಿದ್ದಾರೆ. ಶ್ರೀಗಳು ಪೂರ್ವದಲ್ಲಿ 2002ರ ನವೆಂಬರ್ 16ರಲ್ಲಿ ರೋಣ ತಾಲ್ಲೂಕುನರೇಗಲ್ಲಿನ ಶ್ರೀಮಠದ ಪಟ್ಟವನ್ನು ವಹಿಸಿಕೊಂಡಿದ್ದು ಉಭಯ ಮಠಗಳನ್ನುಅಭಿವೃದ್ದಿಗೊಳಿಸುವತ್ತ ಚಿತ್ತಹರಿಸಿದ್ದಾರೆ.

Swamiji

Swamiji Name :
ಶ್ರೀ ಮ.ಘ.ಚ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
Date of Birth :
30-06-1974
Place :
ನರೇಗಲ್ಲು, ರೋಣ ತಾ||
Pattadikara :
02-02-2012
Photo :

Programs

ಪ್ರತಿ ಹುಣ್ಣಿಮೆಗೆ "ಶಿವಾನುಭವ ಗೋಷ್ಠಿ"
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ
ಡಿಸೆಂಬರ್ / ಜನವರಿಯಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ

Photos

Full Address Kannada

ಶ್ರೀ ಮೂಲಿಮಠ / ಕಳ್ಳಿಮಠ
ಬೆಣ್ಣೆಕಟ್ಟಿ (ಆನೆಅಗಸಿ) ಸವದತ್ತಿ - 591 126,
ಬೆಳಗಾವಿ ಜಿಲ್ಲೆ

Map

Near by Places

ರಾಮದುರ್ಗ 35 ಕಿ.ಮೀ.
ಧಾರವಾಡ 36 ಕಿ.ಮೀ.

Statistic

50 Views
0 Rating
0 Favorite
0 Share
error: Content is protected !!