ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ. ದೂರದಲ್ಲಿರುವಮಾರಗೊಂಡನಹಳ್ಳಿ ಗ್ರಾಮದಲ್ಲಿ ಈಗ್ಗೆ 85 ವರ್ಷಗಳ ಹಿಂದೆ ಶ್ರೀ ಮ.ನಿ.ಪ್ರ. ಬಸವಲಿಂಗಶಿವಯೋಗಿಗಳಿಂದ ಸ್ಥಾಪಿತಗೊಂಡು ಭಕ್ತರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿರುವ ಶ್ರೀಮಠವೇ ಶ್ರೀ ಮುಕುಂದೂರು ಶಿವಯೋಗಿಗಳ ವಿರಕ್ತಮಠ ಅಥವಾ ಚಿದಾನಂದ ಆಶ್ರಮವಿರಕ್ತಮಠ. ಹಾಸನ ಸಮೀಪದ ಮುಕುಂದೂರು ಬೆಟ್ಟದಲ್ಲಿ ಅನುಷ್ಠಾನಗೊಂಡಿದ್ದ ಕರ್ತೃಗುರುಗಳನ್ನು ಈ ಗ್ರಾಮದ ಭಕ್ತರು ಕರೆತಂದು ಮಠವನ್ನು ಸ್ಥಾಪಿಸಿದ್ದರಿಂದ ಶ್ರೀಮಠಕ್ಕೆ ಶ್ರೀಮುಕುಂದೂರು ಶಿವಯೋಗಿಗಳ ಮಠವೆಂದು ಹೆಸರು ಬರಲು ಕಾರಣವಾಯಿತು.ಸಿದ್ದರಾಮ ದೇವರ ಪಾಳ್ಯದಲ್ಲಿ ಜನಿಸಿದ ಶಿವಯೋಗಿಗಳು ನಂತರದಲ್ಲಿಗೃಹಸ್ಥಾಶ್ರಮವನ್ನು ಸೇರಿ ಸಂಸಾರದ ನೊಗ ಹೊತ್ತಿದ್ದವರು. ಕೊನೆಯಲ್ಲಿ ಆಧ್ಯಾತ್ಮಚಿಂತನೆಯಲ್ಲಿ ಮುಳುಗಿ ಸಂಸಾರವನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಿದ ಶ್ರೀಗಳು ಮುಕುಂದೂರುಬೆಟ್ಟದಲ್ಲಿ ಧೀರ್ಘಾನುಷ್ಠಾನದಲ್ಲಿದ್ದಾಗ ಮಠ ಸ್ಥಾಪಿಸಿ ಧಾರ್ಮಿಕ ಆಚರಣೆಗಳನ್ನುನಡೆಸುತ್ತಿದ್ದರು. ಆ ಸಮಯದಲ್ಲಿಯೇ ಮಾರಗೊಂಡನಹಳ್ಳಿ ಭಕ್ತರ ಅಪೇಕ್ಷೆಯಂತೆ ಇಲ್ಲಿಗೆಬಂದು ಸ್ಥಾಪನೆಗೊಂಡ ಮಠದಲ್ಲಿ ನೆಲೆನಿಂತು ಭಕ್ತರನ್ನು ಹರಸಿದರು. ಪ್ರತಿದಿನ ಸಂಜೆಧಾರ್ಮಿಕ ಭೋದನೆ ನಡೆಸುತ್ತಾ, “ಕಾಯಕವೇ ಕೈಲಾಸ”ವೆಂಬ ತತ್ತ್ವಕ್ಕನುಗುಣವಾಗಿಮಠವನ್ನು ಪ್ರಸಿದ್ದಿಗೊಳಿಸಿದ ಶಿವಯೋಗಿಗಳು 1967ರಲ್ಲಿ ಲಿಂಗೈಕ್ಯರಾದರು.ಶ್ರೀ ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾದ ನಂತರ ಸುಮಾರು 22ವರ್ಷಗಳ ಕಾಲ ಶ್ರೀಮಠವು ಖಾಲಿ ಉಳಿದಿದ್ದು ಆ ಸಮಯದಲ್ಲಿ ಗ್ರಾಮದ ಹಿರಿಯರೇಕರ್ತೃ ಗುರುಗಳ ಗದ್ದುಗೆಗೆ ನಿತ್ಯಪೂಜೆ ನಡೆಸುತ್ತಾ ಧಾರ್ಮಿಕ ಆಚರಣೆಗಳನ್ನುನಡೆಸಿಕೊಂಡು ಬಂದಿದ್ದರು. ಖಾಲಿ ಉಳಿದ ಮಠ ಕ್ರಮೇಣ ಶಿಥಿಲಗೊಳ್ಳುತ್ತಿರುವುದನ್ನುಕಂಡ ಭಕ್ತರು ಚಿಕ್ಕನಾಯಕನಹಳ್ಳಿ ತಾಲ್ಲೂಕು ತಮ್ಮಡಿಹಳ್ಳಿ ಶ್ರೀಗಳು ಹಾಗೂ ಕೊಳಗುಂದಶ್ರೀಗಳ ಸಾನಿಧ್ಯದಲ್ಲಿ ನೂತನ ಶ್ರೀ ಮ.ನಿ.ಪ್ರ. ಬಸವಲಿಂಗಸ್ವಾಮಿಗಳನ್ನು 1988ರಲ್ಲಿ ಶ್ರೀಮಠಕ್ಕೆಪಟ್ಟಾಧಿಕಾರಗೊಳಿಸಿದರು. ಶ್ರೀ ಬಸವಲಿಂಗಸ್ವಾಮಿಗಳು ತಮ್ಮ ಕಾಯಕಯೋಗದಿಂದಶ್ರೀಮಠದ ಕಟ್ಟಡವನ್ನು ನವೀಕರಿಸಿದ್ದು ಮಠಕ್ಕೆ ಆಸ್ತಿಯನ್ನು ರೂಡಿಸಿದ್ದಾರೆ. ಶ್ರೀಮಠವನ್ನುಆರ್ಥಿಕವಾಗಿ ಸ್ವಾವಲಂಬಿಗೊಳಿಸಿರುವ ಶ್ರೀಗಳು ಪ್ರತಿ ವರ್ಷ ಚೈತ್ರಮಾಸದ ಹುಣ್ಣಿಮೆಗೆಕರ್ತೃಗುರುಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಬಸವಲಿಂಗ ಸ್ವಾಮಿಗಳು
Date of Birth :
1960
Place :
ಮಾರಗೊಂಡನಹಳ್ಳಿ, ಅರಸಿಕೆರೆ ತಾ||
Pattadikara :
1988
Photo :
Programs
ಪ್ರತಿ ಹುಣ್ಣಿಮೆಗೆ ಶರಣರ ಚಿಂತನ ಗೋಷ್ಠಿ
ಚೈತ್ರ ಮಾಸದ ಹುಣ್ಣಿಮೆಗೆ ಕರ್ತೃ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
Institutions
ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಮುಕುಂದೂರು ಶಿವಯೋಗಿಗಳ ವಿರಕ್ತಮಠ
(ಚಿದಾನಂದ ಆಶ್ರಮ) ಮಾರಗೊಂಡನಹಳ್ಳಿ,
ಅರಕೆರೆ ಪೋ. - 573 112
ಅರಸೀಕೆರೆ ತಾ||, ಹಾಸನ ಜಿಲ್ಲೆ