ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಮುದ್ರೆ ಗ್ರಾಮದಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ಮುದ್ದಿನ ಕಟ್ಟೆ ಮಠವು ಶ್ರೀಮದ್ ಉಜ್ಜಯನಿ ಪೀಠದ ಶಾಖಾಮಠವಾಗಿದ್ದು ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀ ಮುದ್ದಿನಕಟ್ಟೆ ಮಠವನ್ನುಕೊಡಗಿನ ಮಹಾರಾಜ ಮುದ್ದುರಾಜ ಪ್ರಭುಗಳು ಶ್ರೀಮಠದ ಕರ್ತೃಗುರುಗಳಾದ ಪೂಜ್ಯ ಶ್ರೀಮರುಳಸಿದ್ದೇಶ್ವರರಿಗೆ ಕ್ರಿ.ಶ. 1643ರಲ್ಲಿ ಕಟ್ಟಿಸಿಕೊಟ್ಟಿದ್ದಾರೆಂದು ತಿಳಿದುಬರುತ್ತಿದ್ದು ಆಕಾರಣದಿಂದಾಗಿಯೇ ಶ್ರೀಮಠಕ್ಕೆ ಶ್ರೀ ಮುದ್ದಿನಕಟ್ಟೆ ಮಠವೆಂಬ ಹೆಸರು ಬಂದಿದೆ.ಉತ್ತರ ಕರ್ನಾಟಕ ಕಡೆಯಿಂದ ಸಂಚಾರ ಬಂದ ಪೂಜ್ಯ ಶ್ರೀ ಮರುಳಸಿದ್ದೇಶ್ವರಸ್ವಾಮಿಗಳು ಅಲ್ಲಲ್ಲಿ ಅನುಷ್ಟಾನಗೊಳ್ಳುತ್ತಾ ದುಂಡಹಳ್ಳಿ ಸಮೀಪದ ಮುದ್ರೆ ಗ್ರಾಮಕ್ಕೆ ಬಂದುನೆಲೆ ನಿಲ್ಲುತ್ತಾರೆ. ಶ್ರೀಗಳು ತಮ್ಮ ಕಾರ್ಯಕ್ರಮಗಳ ಮೂಲಕ ಅಪಾರ ಭಕ್ತ ಬಳಗವನ್ನುಸಂಪಾದಿಸಿದ್ದು ಶ್ರೀಗಳ ಖ್ಯಾತಿಯು ಕೊಡಗಿನ ರಾಜರವರೆಗೆ ತಲುಪಿ ರಾಜರು ಗುರುಗಳಿಗೆಶ್ರೀಮಠವನ್ನು ಕಟ್ಟಿಸಿಕೊಟ್ಟಿದ್ದಾರೆ. ಶ್ರೀಗಳು 108 ವರ್ಷ ಬದುಕಿ ಲಿಂಗೈಕ್ಯರಾಗಿದ್ದು ಶ್ರೀಗಳಗದ್ದುಗೆಯು ಶ್ರೀಮಠದಲ್ಲಿದೆ.ಕರ್ತೃಗುರುಗಳ ನಂತರದಲ್ಲಿ ಶ್ರೀ ಮಹಾಂತಲಿಂಗ ಸ್ವಾಮಿಗಳು, ಶ್ರೀ ಚನ್ನಸಿದ್ದಸ್ವಾಮಿಗಳು, ಶ್ರೀ ಸಿದ್ದೇಶ್ವರ ಸ್ವಾಮಿಗಳು, ಶ್ರೀ ಶಿವಸಿದ್ದ ಸ್ವಾಮಿಗಳು, ಶ್ರೀ ಸಿದ್ದವೀರ ಸ್ವಾಮಿಗಳುಅಧಿಕಾರ ನಡೆಸಿದ್ದು ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳುದೀರ್ಘಕಾಲ ಭಕ್ತರನ್ನು ಪೊರೆದು 1984ರ ಡಿಸಂಬರ್ 24ರಲ್ಲಿ ಲಿಂಗೈಕ್ಯರಾಗಿದ್ದಾರೆ. ಹಿಂದಿನಶ್ರೀಗಳಿರುವಾಗಲೇ ಪ್ರಸ್ತುತ ಹಿರಿಯ ಶ್ರೀಗಳಾದ ಶ್ರೀ ಷ.ಬ್ರ. ಸಿದ್ದವೀರ ಶಿವಾಚಾರ್ಯಮಹಾಸ್ವಾಮಿಗಳನ್ನು 1981ರ ಮೇ 15ರಲ್ಲಿ ಶ್ರೀಮಠಕ್ಕೆ ಪಟ್ಟಾಧಿಕಾರಗೊಳಿಸಿದ್ದರು.ಶ್ರೀ ಸಿದ್ದವೀರ ಸ್ವಾಮಿಗಳು ಶ್ರೀಮಠಕ್ಕೆ ಆಗಮಿಸಿದ ನಂತರ ಶ್ರೀಮಠವು ಅಭಿವೃದ್ದಿಪಥದತ್ತ ಮುನ್ನಡೆದಿದೆ. ಶ್ರೀಗಳು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿಶ್ರೀಮಠವನ್ನು ಜೀರ್ಣೋದ್ದಾರಗೊಳಿಸಿದ್ದಾರೆ. ಶ್ರೀಗಳು ಇತ್ತೀಚೆಗೆ 2013ರ ನವೆಂಬರ್13ರಲ್ಲಿ ಶ್ರೀ ಷ.ಬ್ರ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ತಮ್ಮಉತ್ತರಾಧಿಕಾರಿಗಳನ್ನಾಗಿ ಪಟ್ಟಕ್ಕೆ ತಂದಿದ್ದು ಉಭಯ ಶ್ರೀಗಳು ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ದಿಗೊಳಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಮಠದಲ್ಲಿ ಕರ್ತೃಗಳುಹಾಗೂ ಹಿಂದಿನ ಗುರುಗಳ ಗದ್ದುಗೆಗಳು ಇದ್ದು ಇನ್ನುಳಿದ ಗುರುಗಳ ಗದ್ದುಗೆಗಳುತೋಟದಲ್ಲಿವೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
12-10-1939
Place :
ಬೈಲಹೊಂಗಲ, ಬೆಳಗಾವಿ ತಾ||
Pattadikara :
15-05-1981
Swamiji Name :
ಶ್ರೀ ಷ.ಬ್ರ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
29-06-1987
Place :
ಕೊಟ್ಯಾಳ, ಬಿಜಾಪುರ ತಾ||
Pattadikara :
13-11-2013
Programs
ಪ್ರತಿ ಅಮವಾಸ್ಯೆಗೆ ವಿಶೇಷ ಪೂಜೆ ಧನುರ್ಮಾಸದಲ್ಲಿ ಲಿಂ|| ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಆರಾಧನೆ
Full Address Kannada
ಶ್ರೀ ಮುದ್ದಿನಕಟ್ಟೆ ಮಠ ಮುದ್ರೆಗ್ರಾಮ, ದುಂಡಹಳ್ಳಿ ಪೋಸ್ಟ್ - 571 235 ಸೋಮವಾರಪೇಟೆ ತಾ||, ಕೊಡಗು ಜಿಲ್ಲೆ