Shree Motagi Matha – Athani

Shree Motagi Matha – Athani Claimed

ಶ್ರೀ ಮೋಟಗಿ ಮಠ - ಅಥಣಿ

Average Reviews

Description

ಶ್ರೀ ಮೋಟಗಿ ಮಠ – ಅಥಣಿ

ಕರ್ತೃ – ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು

ಅಥಣಿ ಪಟ್ಟಣದ ಕೇಂದ್ರ ಭಾಗದಲ್ಲಿ ವಿಶಾಲವಾದ ಆವರಣದಲ್ಲಿಸ್ಥಾಪನೆಯಾಗಿರುವ ಶ್ರೀ ಮೋಟಗಿ ಮಠವು ಸುಮಾರು 300 ವರ್ಷಗಳ ಶ್ರೀಮಂತಇತಿಹಾಸವನ್ನು ಹೊಂದಿದೆ. ಮೈಸೂರಿನಲ್ಲಿ ಜನಿಸಿದ ಶ್ರೀ ಮಹಾಂತ ಮಹಾಸ್ವಾಮಿಗಳುಚಿಕ್ಕವಯಸ್ಸಿನಲ್ಲಿಯೇ ಆಧ್ಯಾತ್ಮವನ್ನು ಮೈಗೂಡಿಸಿಕೊಂಡು ಸಂಚಾರ ಹೊರಡುತ್ತಾರೆ. ಹೀಗೆಸಂಚಾರ ಹೊರಟ ಶ್ರೀಗಳು ಕೊನೆಯಲ್ಲಿ ಅಥಣಿಯ ಹೊರಭಾಗದ ಕೃಷ್ಣಾನದಿ ತೀರದಲ್ಲಿನೆಲೆನಿಲ್ಲುತ್ತಾರೆ.ಅಥಣಿ ಪಟ್ಟಣ ಮೊದಲಿನಿಂದಲೂ ಪುರಾತನ ವೀರಶೈವ ಕೇಂದ್ರ. ಇಲ್ಲಿಸಹಸ್ರಾರು ಸಸ್ಬಕ್ತರಿದ್ದಾರೆ. ಕೃಷ್ಣಾನದಿ ತೀರದಲ್ಲಿ ನೆಲೆನಿಂತು ಅನುಷ್ಟಾನ ಕೈಗೊಂಡಿದ್ದಶ್ರೀ ಮಹಾಂತ ಮಹಾಸ್ವಾಮಿಗಳ ಬಗ್ಗೆ ಭಕ್ತರಿಗೆ ಅರಿವು ಮೂಡಿ ಅವರನ್ನು ಕರೆತರಲುಶ್ರೀ ಮಲ್ಲಪ್ಪ ಮೋಟಗಿಯವರ ನೇತೃತ್ವದಲ್ಲಿ ಹೋಗುತ್ತಾರೆ. ಅಲ್ಲಿ ಅನುಷ್ಠಾನ ನಿರತರಾಗಿದಬಾಲತಪಸ್ವಿಯನ್ನು ಕಂಡು ಆನಂದಬರಿತರಾದ ಭಕ್ತರು ಅವರನ್ನು ಪಟ್ಟಣಕ್ಕೆ ಕರೆತಂದು ಮಠಕಟ್ಟಿಸಿಕೊಡುತ್ತಾರೆ. ಮೋಟಗಿಯವರ ಜಾಗದಲ್ಲಿ ಅವರ ಮುಂದಾಳತ್ವದಲ್ಲಿ ಮಠನಿರ್ಮಿಸಿದ್ದರಿಂದ ಶ್ರೀಮಠಕ್ಕೆ ಶ್ರೀ ಮೋಟಗಿ ಮಠವೆಂದೇ ಹೆಸರುಬಂದಿದೆ.ಬಾಲತಪಸ್ವಿ ಶ್ರೀ ಮಹಾಂತ ಮಹಾಸ್ವಾಮಿಗಳು ಶ್ರೀಮಠದಲ್ಲಿ ಶಿವಾನುಭವಗೋಷ್ಠಿಗಳ ಮೂಲಕ ತಮ್ಮ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕಬಹುಬೇಗನೇ ಭಕ್ತರನ್ನು ಸಂಪಾದಿಸಿಕೊಂಡು ಅವರಿಗೆ ಧಾರ್ಮಿಕ ಸಂಸ್ಕಾರವನ್ನುನೀಡಿದರು. ಕಾಲಕ್ರಮೇಣ ಅನ್ನದಾಸೋಹವನ್ನು ಪ್ರಾರಂಭಿಸಿದ ಶ್ರೀಗಳು ಈ ಭಾಗದ ಬಡಭಕ್ತರ ಆಶಾಕಿರಣರಾಗಿದ್ದರು. ಶ್ರೀ ಮಹಾಂತ ಮಹಾಸ್ವಾಮಿಗಳ ನಂತರ 5ನೇ ಶ್ರೀಗಳಾದಶ್ರೀ. ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳ ತನಕದ ಶ್ರೀಗಳ ಬಗ್ಗೆ ಹೆಚ್ಚು ಮಾಹಿತಿ ಇಲ್ಲ.ಶ್ರೀ ಮುರುಘೇಂದ್ರ ಸ್ವಾಮಿಗಳ ಕಾಲದಲ್ಲಿ ಶ್ರೀಮಠವು ತನ್ನ ಪ್ರಾಮುಖ್ಯತೆಯನ್ನುಹೆಚ್ಚಿಸಿಕೊಂಡಿದೆ. ಮೈಗೂರು ಹಿರೇಮಠದ ಶ್ರೀ ಮುರುಘೇಶರು ಶ್ರೀ ಮೋಟಗಿ ಮಠದಪಟ್ಟಕ್ಕೆ ಬಂದು ಶ್ರೀ ಮುರುಘೇಶ ಮಹಾಸ್ವಾಮಿಗಳಾದರು. ಶ್ರೀಗಳು ತಮ್ಮ ಅಪಾರಜ್ಞಾನದಿಂದ ಆಧ್ಯಾತ್ಮ ಸಿದ್ದಿಯಿಂದ ಹೆಸರಾದವರು. ತಮ್ಮ ಅನೇಕ ಶಿಷ್ಯರಿಗೆ ಶಿವಯೋಗಸಿದ್ದಿಯನ್ನು ದಯಪಾಲಿಸಿ ಪರಿಪಕ್ವಗೊಳಿಸಿದರು. ತಮ್ಮ ಅನುಷ್ಟಾನ ಬಲದಿಂದಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ್ದ ಶ್ರೀಗಳು ದಿವ್ಯ ಜೀವಂತಸಮಾದಿಯಾದರೆಂದು ತಿಳಿದುಬರುತ್ತದೆ.ನಂತರದ ಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು ತಮ್ಮ ಆಧ್ಯಾತ್ಮಿಕತೆಯಮೂಲಕ ಜನಮಾನಸದ ಜಾಗೃತಿಗೆ ತಮ್ಮನ್ನೇ ಅರ್ಪಿಸಿಕೊಂಡರು. ಅಥಣಿಯ ಸಮಸ್ತಜನಾಂಗದ ಶಕ್ತಿಯಾದರು. ತಮ್ಮ ಕಾಲಾವದಿಯಲ್ಲಿ ಮೀರಜ್ ಸಂಸ್ಥಾನದಲ್ಲಿ “ಮೋಟಗಿಮಠ-ಲೋಕೇಶ್ವರ ಮಠ”ವನ್ನು ಸ್ಥಾಪಿಸಿ ಧರ್ಮ ಪ್ರಸಾರ ಕಾರ್ಯ ಕೈಗೊಂಡಶ್ರೀ ಚನ್ನಬಸವ ಮಹಾಸ್ವಾಮಿಗಳು 1925ರಲ್ಲಿ ಲಿಂಗೈಕ್ಯರಾದರು. ಹಿಂದಿನ ಶ್ರೀಗಳಾದಶ್ರೀ ಮ.ನಿ.ಪ್ರ. ಗುರುಬಸವ ಮಹಾಸ್ವಾಮಿಗಳು 1948ರಲ್ಲಿ ಶ್ರೀಮಠದ ಅಧಿಕಾರ910ವಹಿಸಿಕೊಂಡು ಮಠವನ್ನು ವ್ಯವಸ್ಥಿತವಾಗಿ ಬೆಳೆಸಿದರು. ತಮ್ಮ ಧಾರ್ಮಿಕ, ಸಾಹಿತಿಕ,ಸಾಂಸ್ಕøತಿಕ ಸೇವೆಯಿಂದಾಗಿ ಈ ಭಾಗದಲ್ಲಿ ಮನೆ ಮಾತಾಗಿದ್ದ ಶ್ರೀಗಳು ಸ್ವತಃ ಸಾಹಿತಿಗಳೂಆಗಿದ್ದರು ಹಾಗೂ ತಮ್ಮ ಸಾಹಿತ್ಯಿಕ ಅಭಿರುಚಿಯಿಂದಾಗಿ ಶ್ರೀಮಠದಲ್ಲಿ ಶ್ರೀಗುರುಚನ್ನಬಸವೇಶ್ವರ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ಹೀಗೆ ತಮ್ಮ ಜನಪರ ಕಾಳಜಿಯಿಂದಹೆಸರಾಗಿದ್ದ ಶ್ರೀಗಳು 1985ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀ. ಮ.ನಿ.ಪ್ರ. ಪ್ರಭುಚನ್ನಬಸವ ಮಹಾಸ್ವಾಮಿಗಳು ಶ್ರೀಮಠವನ್ನುಅಭಿವೃದ್ಧಿ ಕಾರ್ಯಗಳೊಂದಿಗೆ ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗುರುಬಸವ ಮಹಾಸ್ವಾಮಿಗಳ ಐಕ್ಯಾನಂತರ ಶ್ರೀಮಠದ ಉತ್ತರಾಧಿತ್ವವನ್ನು ಸ್ವೀಕರಿಸಿದಶ್ರೀಗಳು ತಮ್ಮ ಕ್ರಿಯಾಶೀಲ ಗುಣಗಳಿಂದ ಹೆಸರಾದವರು. ಮೈಸೂರುವಿಶ್ವವಿದ್ಯಾನಿಲಯದಲ್ಲಿ ಸಂಸ್ಕøತ ಸ್ನಾತಕೋತ್ತರ ಪದವಿ ಪಡೆದಿರುವ ಶ್ರೀಗಳು ಉತ್ತಮವಾಗ್ಮಿಗಳು. ತಮ್ಮ ಉಪದೇಶಾಮೃತಗಳಿಂದ ಭಕ್ತರಲ್ಲಿ ಧಾರ್ಮಿಕ ಅರಿವನ್ನುಮೂಡಿಸುತ್ತಿರುವ ಶ್ರೀಗಳು ಶ್ರೀಮಠದ ಆಡಳಿತವನ್ನು ರಚನಾತ್ಮಕವಾಗಿ ನಿರ್ವಹಿಸಿಕೊಂಡುಬರುತ್ತಿದ್ದಾರೆ.ಶ್ರೀ ಪ್ರಭುಚನ್ನಬಸವ ಮಹಾಸ್ವಾಮಿಗಳು ಸ್ವತಃ ಸಾಹಿತಿಗಳೂ, ವಚನಕಾರರೂಆಗಿದ್ದಾರೆ. ಈಗಾಗಲೇ ಅನೇಕ ವಚನಗಳನ್ನು ರಚಿಸಿ ಪ್ರಕಟಿಸುವುದರೊಂದಿಗೆ ವಚನಪಾಠಶಾಲೆಯನ್ನೂ ಪ್ರಾರಂಭಿಸಿ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಹಾಗೂವಚನಚಿಂತನೆ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ವರ್ತಮಾನ, ನುಡಿನಮನಮುಂತಾದ ಹಲವಾರು ಕೃತಿಗಳನ್ನು ಬರೆದು ತಮ್ಮದೆ ಶ್ರೀ ಚನ್ನಬಸವೇಶ್ವರ ಗ್ರಂಥಮಾಲೆಪ್ರಕಾಶನ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ ಹಾಗೂ ಈ ಸಂಸ್ಥೆಯ ಮೂಲಕ 50ಪುಸ್ತಕಗಳನ್ನು ಈವರೆಗೆ ಪ್ರಕಟಿಸಲಾಗಿದೆ.ಶ್ರೀಮಠದ ವತಿಯಿಂದ “ಬಸವ ಭೂಷಣ” ಪ್ರಶಸ್ತಿಯನ್ನು ಸಾಧಕರಿಗೆ, ಗಣ್ಯರಿಗೆನೀಡಿ ಗೌರವಿಸುತ್ತಾ ಬರಲಾಗುತ್ತಿದ್ದು ಇಲ್ಲಿಯವರೆಗೂ 11 ಜನ ಹಿರಿಯ ಗಣ್ಯರಿಗೆ ನೀಡಿಗೌರವಿಸಲಾಗಿದೆ. ಹಾಗೂ ಶ್ರೀ ಗುರು ಬಸವ ಅಕ್ಷರ ದಾಸೋಹ ಎಂಬ ಯೋಜನೆಮುಖಾಂತರ 20,000 ಮಕ್ಕಳಿಗೆ ಪ್ರತಿದಿನದ ಬಿಸಿಯೂಟ ತಲುಪಿಸುವ ಸೇವೆಯನ್ನುಮಾಡಲಾಗುತ್ತಿದೆ. ಈ ರೀತಿಯಾಗಿ ತಮ್ಮ ಸೇವಾ ಕಾರ್ಯಕ್ರಮಗಳ ಮೂಲಕ, ಸಾಹಿತ್ಯಿಕಕೊಡುಗೆಗಳ ಮೂಲಕ, ತಮ್ಮ ಕಾವ್ಯನಾಮ “ಅರ್ಥಶೀಶ”ದ ಮೂಲಕ ಜನಮಾನಸದಲ್ಲಿಬೇರೂರಿರುವ ಶ್ರೀ ಚನ್ನಬಸವ ಮಹಾಸ್ವಾಮಿಗಳಿಗೆ ಅಸಂಖ್ಯಾ ಪ್ರಶಸ್ತಿಗಳು ಸಂದಿವೆ.

ವಿಶೇಷತೆ

“ಬಸವ ಭೂಷಣ ಪ್ರಶಸ್ತಿ” (ಪ್ರತಿ ವರ್ಷ ಈ ಪ್ರಶಸ್ನಿಯನ್ನು ಸಾಧಕ/ಗಣ್ಯರಿಗೆ ಪ್ರಧಾನ ಮಾಡಲಾಗುತ್ತದೆ – 25,000/-)

ಶ್ರೀ ಗುರುಬಸವ ಅಕ್ಷರ ದಾಸೋಹ (20,000 ಮಕ್ಕಳಿಗೆ ಬಿಸಿಯೂಟ ತಲುಪಿಸುವ ಯೋಜನೆ.

Swamiji

Swamiji Name :
ಶ್ರೀ ಮ.ನಿ.ಪ್ರ. ಪ್ರಭು ಚನ್ನಬಸವ ಮಹಾಸ್ವಾಮಿಗಳು
Date of Birth :
01-01-1975
Place :
ಮೈಗೂರು, ಜಮಖಂಡಿ ತಾ||
Pattadikara :
06-03-2003
Photo :

Programs

ಪ್ರತಿ ಹುಣ್ಣಿಮೆಗೆ "ಭಾವೈಕ್ಯ ಬೆಳದಿಂಗಳು"
ಜನವರಿಯಲ್ಲಿ "ಶರಣ ಸಂಸ್ಕøತಿ ಮೇಳ" "ಸರ್ವ ಧರ್ಮ ಸಮ್ಮೇಳನ" ಜನಪದ ಜಾತ್ರೆ.
ವರ್ಷದಲ್ಲಿ ಮೂರು ಬಾರಿ "ಚಿಂತನ ಕಮ್ಮಟ" ವಿಚಾರಗೋಷ್ಠಿ ಹಾಗೂ ಆರೋಗ್ಯ ಶಿಬಿರಗಳು,
ಕನ್ನಡಕ್ಕಾಗಿ ಕಾಲ್ನಡಿಗೆ
ನಿತ್ಯ ಮುತ್ತೈದೆಯರಿಗೆ (ವಿದವೆಯರಿಗೆ) ಉಡಿ ತುಂಬುವ ಕಾರ್ಯಕ್ರಮ (2 ವರ್ಷಕ್ಕೊಮ್ಮೆ)

Institutions

ಶ್ರೀ ಗುರು ಬಸವೇಶ್ವರ ವಿದ್ಯಾ ವಿಕಾಸ ಸಂಸ್ಥೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ

Photos

Full Address Kannada

ಶ್ರೀ ಮೋಟಗಿ ಮಠ ಮೋಟಗಿ ಮಠ
ಗಲ್ಲಿ, ಅಥಣಿ - 591 304
ಬೆಳಗಾವಿ ಜಿಲ್ಲೆ

Map

Near by Places

ರಾಯಭಾಗ 40 ಕಿ.ಮೀ.
ಚಿಕ್ಕೊಡಿ 75 ಕಿ.ಮೀ.
ವಿಜಯಪುರ 80 ಕಿ.ಮೀ.
ಬೆಳಗಾವಿ 150 ಕಿ.ಮೀ.

Statistic

5 Views
0 Rating
0 Favorite
0 Share
error: Content is protected !!